More

    ಒಂದೇ ದಿನ 33 ಸಾವಿರಕ್ಕೂ ಹೆಚ್ಚು ಲಸಿಕಾಕರಣ

    ಕಾರವಾರ: ಜಿಲ್ಲೆಯಲ್ಲಿ ಸೋಮವಾರ ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕಾಕರಣ ಮಾಡಲಾಗಿದೆ. ಜಿಲ್ಲೆಯ 100ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸೋಮವಾರ ಬೆಳಗಿನಿಂದ ಸಂಜೆತನಕ 6 ಗಂಟೆಯವರೆಗೆ 33 ಸಾವಿರಕ್ಕೂ ಅಧಿಕ ಜನರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಇದುವರೆಗೂ ದಿನಕ್ಕೆ ಗರಿಷ್ಠ 10ರಿಂದ 12 ಸಾವಿರ ಜನರಿಗೆ ಮಾತ್ರ ಲಸಿಕಾಕರಣ ಮಾಡಲಾಗುತ್ತಿತ್ತು.

    ಇದುವರೆಗೂ 45 ವರ್ಷ ಮೇಲ್ಪಟ್ಟ ಸಾಮಾನ್ಯರಿಗೆ ಹಾಗೂ 18ರಿಂದ 45 ವರ್ಷದ ಆದ್ಯತಾ ಗುಂಪಿಗೆ ಸೇರಿದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು. ಸೋಮವಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಈ ಅಭಿಯಾನದಲ್ಲಿ ವ್ಯಾಕ್ಸಿನ್ ಪಡೆಯಲು ಅನುವು ಮಾಡಿಕೊಡಲಾಯಿತು. ಕಾರವಾರ ತಾಲೂಕಿನ 28 ಕೇಂದ್ರಗಳಲ್ಲಿ 5900 ಜನರಿಗೆ ಲಸಿಕೆ ನೀಡಲಾಯಿತು.

    1600 ಕಾರ್ವಿುಕರಿಗೆ: ಅರಗಾದ ನೌಕಾನೆಲೆ ವ್ಯಾಪ್ತಿಯ ಒಳಗೆ ಕೆಲಸ ಮಾಡುವ ಗುತ್ತಿಗೆ ಕಾರ್ವಿುಕರು, ಗುತ್ತಿಗೆದಾರರು ಹಾಗೂ ಸಿವಿಲಿಯನ್ ಸಿಬ್ಬಂದಿಗೆ ಸೋಮವಾರ ಲಸಿಕಾ ಹಾಕಿಸಲಾಯಿತು. 1600ರಷ್ಟು ಜನ ಲಸಿಕೆ ಪಡೆದರು. ಈ ಹಿಂದೆ ಎಲ್ಲೆಡೆ ಲಾಕ್​ಡೌನ್, ಸೀಬರ್ಡ್ ನೌಕಾ ಯೋಜನೆಯ ಎರಡನೇ ಹಂತದ ಕಾಮಗಾರಿ ನಡೆದಿತ್ತು. ಹೊರ ರಾಜ್ಯದಿಂದ ಆಗಮಿಸುವ ನೌಕರರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಕೋವಿಡ್​ಗೆ ತುತ್ತಾಗಿದ್ದರು. ನೌಕಾನೆಲೆಗೆ ಕೆಲಸಕ್ಕೆ ಹೋಗುವ ಸ್ಥಳೀಯರಿಗೂ ಸಾಕಷ್ಟು ಸೋಂಕು ತಗುಲಿತ್ತು. ಆದರೆ, ಕಾರ್ವಿುಕರಿಗೆ ಲಸಿಕೆ ದೊರೆತಿರಲಿಲ್ಲ. ಇದನ್ನು ಮನಗಂಡು ಜಿಲ್ಲಾಡಳಿತ ಲಸಿಕೆ ಒದಗಿಸಿದ್ದು, ನೌಕಾ ಆಸ್ಪತ್ರೆಯ ದಾದಿಯರು ಕಾರ್ವಿುಕರಿಗೆ ವ್ಯಾಕ್ಸಿನೇಷನ್ ಮಾಡಿದ್ದಾರೆ.

    ಎಚ್ಚರ ವಹಿಸಿ: ಜನರ ಜೀವ ಉಳಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಉಚಿತ ಕೋವಿಡ್ ಪ್ರತಿಬಂಧಕ ಲಸಿಕೆ ನೀಡುತ್ತಿವೆ. ಎಲ್ಲರೂ ಅದನ್ನು ಪಡೆದುಕೊಳ್ಳಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಕರೆ ನೀಡಿದರು. ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಲಸಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು, ನೋವು ಸಂಭವಿಸಿದೆ. ಈಗ ಪ್ರಕರಣಗಳು ಕಡಿಮೆಯಾಗಿವೆ. ಅನ್​ಲಾಕ್ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಆದರೆ, ಜನ ಎಚ್ಚರ ಮರೆತು ಓಡಾಡಬಾರದು. ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.

    ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಪ್ರಿಯಾಂಗಾ ಎಂ., ಎಸ್​ಪಿ ಶಿವಪ್ರಕಾಶ ದೇವರಾಜು, ಎಸಿ ವಿದ್ಯಾಶ್ರೀ ಚಂದರಗಿ, ಡಿಎಚ್​ಒ ಡಾ. ಶರದ್ ನಾಯಕ, ಆಸಿಎಚ್​ಒ ಡಾ.ರಮೇಶ ರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts