More

    ಒಂದು ಕಿಮೀ ರಾಷ್ಟ್ರ ಧ್ವಜದೊಂದಿಗೆ ಜಾಥಾ

    ಬಸವಕಲ್ಯಾಣ: ಶಾಲಾ ಸಮವಸ್ತ್ರದಲ್ಲಿ ಹೆಜ್ಜೆ ಹಾಕಿದ ವಿದ್ಯಾಥರ್ಿಗಳು, ಮೊಳಗಿದ ದೇಶಭಕ್ತಿ ಗೀತೆ, ಮಾರ್ದನಿಸಿದ ರಾಷ್ಟ್ರಭಕ್ತಿಯ ಘೋಷಣೆಗಳು… ಇದು ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ತಾಲೂಕು ಆಡಳಿತ ಹಾಗೂ ನಗರಸಭೆ ಸಹಯೋಗದಡಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಒಂದು ಕಿಲೋಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ ಕಾಲ್ನಡಿಗೆ ಜಾಥಾ ವೇಳೆ ಕಂಡುಬಂದ ದೃಶ್ಯ.

    ಕೋಟೆಯಿಂದ ತಾಲೂಕು ಆಡಳಿತ ಸೌಧವರೆಗೆ ಮುಖ್ಯರಸ್ತೆ ಮಾರ್ಗವಾಗಿ ಸುಮಾರು 5 ಕಿಮೀ ನಡೆದ ಜಾಥಾದಲ್ಲಿ ಸಕರ್ಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆ-ಕಾಲೇಜು ವಿದ್ಯಾಥರ್ಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಧಿಕಾರಿಗಳು, ಸಿಬ್ಬಂದಿ, ಗಣ್ಯರು, ಸಂಘ- ಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರು ಸಾಥ್ ನೀಡಿದರು.

    ಕೋಟೆ ಬಳಿ ಶಾಸಕ ಶರಣು ಸಲಗರ ಜಾಥಾಕ್ಕೆ ಚಾಲನೆ ನೀಡಿದರು. 8ರ ಸುಮಾರಿಗೆ ಶುರುವಾದ ವಾಕ್ಥಾನ್ 11.30ಕ್ಕೆ ಆಡಳಿತ ಸೌಧಕ್ಕೆ ತಲುಪಿತು. ದಾರಿಯುದ್ದಕ್ಕೂ ಬೋಲೋ ಭಾರತ ಮಾತಾಕಿ ಜೈ, ಒಂದೇ ಮಾತರಂ, ಹರ್ ಘರ್ ತಿರಂಗಾ, ಜೈ ಜವಾನ್- ಜೈ ಕಿಸಾನ್ ಘೋಷಣೆಗಳು ಮೊಳಗಿದವು. ಮೋದಿ ಮೋದಿ… ಘೋಷಣೆಗಳು ಕೂಡ ಕೇಳಿಬಂದವು.

    ನಗರಸಭೆ ಅಧ್ಯಕ್ಷೆ ಶಹಜಹಾನ್ ಶೇಖ್ ತನ್ವೀರ್ ಅಹ್ಮದ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಸಿರಗಾಪುರ, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ಸಾವಿತ್ರಿ ಸಲಗರ, ಪೌರಾಯುಕ್ತ ಶಿವಕುಮಾರ, ತಾಪಂ ಇಒ ಕಿರಣ ಪಾಟೀಲ್, ಬಿಇಒ ಸಿ.ಜಿ. ಹಳ್ಳದ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್ಐ ಅಮರ ಕುಲಕಣರ್ಿ, ಪ್ರಮುಖರಾದ ಪ್ರದೀಪ ವಾತಡೆ, ಅಶೋಕ ವಕಾರೆ, ಅರವಿಂದ ಮುತ್ತೆ, ಬಾಬು ಹೊನ್ನಾನಾಯಕ, ಸೈಯದ್ ಯಸ್ರಬ್ ಅಲಿ ಖಾದ್ರಿ, ದೀಪಕ ಗಾಯಕವಾಡ, ಜ್ಞಾನೇಶ್ವರ ಮುಳೆ, ಸಿದ್ದು ಬಿರಾದಾರ, ಎಂ.ಜಿ. ರಾಜೋಳೆ, ಇಂದ್ರಸೇನ ಬಿರಾದಾರ, ಅಮೂಲ ಮೇತ್ರಸ್ಕರ್, ನಿರ್ಮಲಾ ಶಿವಣಕರ ಇತರರಿದ್ದರು.

    ಗಮನ ಸೆಳೆದ ಶಾಸಕ ಸಲಗರ ಸಕತ್ ಡಾನ್ಸ್: ಜಾಥಾದಲ್ಲಿ ವಿದ್ಯಾಥರ್ಿಗಳಿಗೆ ಬಾಳೆಹಣ್ಣು, ಬಿಸ್ಕತ್ ಹಾಗೂ ನೀರಿನ ಬಾಟಲಿ ವಿತರಣೆ ವ್ಯವಸ್ಥೆ ಮಾಡಿದ್ದ ಶಾಸಕ ಸಲಗರ ದೇಶ ಭಕ್ತಿಗೀತೆಗಳ ಹಾಡಿಗೆ ಸಕತ್ ಡಾನ್ಸ್ ಮಾಡಿ ಗಮನ ಸೆಳೆದರು. ನಗರಸಭೆಯಿಂದ ವಿವಿಧೆಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ಸಾರ್ವಜನಿಕರಿಂದಲೂ ಮಕ್ಕಳಿಗೆ ನೀರು, ಚಾಕ್ಲೇಟ್ ನೀಡಲಾಯಿತು. ನಗರದ ಕೆಲವೆಡೆ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಪುಷ್ಪವೃಷ್ಟಿ ಮಾಡಿ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು. ಇನ್ನು ಧ್ವಜ ಹಿಡಿದ ವಿದ್ಯಾಥರ್ಿಗಳಿಗೆ ಕೆಲವರು ಹೂವಿನ ಹಾರ ಹಾಕಿ ಸತ್ಕರಿಸಿದರು.

    ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ 13ರಿಂದ ಮೂರು ದಿನ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಬೇಕು. ರಾಷ್ಟ್ರಕ್ಕಾಗಿ ಸಮಪರ್ಿಸಿಕೊಂಡ ದೇಶಭಕ್ತರಿಗೆ ಗೌರವ ಸಲ್ಲಿಸಬೇಕು. ವಿನೂತನ ಕಾರ್ಯಕ್ರಮದಿಂದ ಎಲ್ಲರ ಮನೆ, ಮನದಲ್ಲಿ ರಾಷ್ಟ್ರಭಕ್ತಿ ಉಕ್ಕಿ ಹರಿಯಲಿದೆ.
    | ಶರಣು ಸಲಗರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts