More

    ಐತಿಹಾಸಿಕ ಕೊಳಗಳು ಭರ್ತಿ

    ಮೇಲುಕೋಟೆ: ಇಲ್ಲಿನ ಐತಿಹಾಸಿಕ ಕೊಳಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ದಕ್ಷಿಣಭಾರತದಲ್ಲೇ ಎರಡನೇ ದೊಡ್ಡ ಪಂಚಕಲ್ಯಾಣಿಯಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.

    ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಹಾ ಮಳೆಗೆ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ಎಲ್ಲ ಕೊಳಗಳು ತುಂಬಿ ತುಳುಕುತ್ತಿವೆ. ಒಂದೊಂದು ಕೊಳದಲ್ಲೂ 15ರಿಂದ 20 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಲ್ಯಾಣಿ ಹಾಗೂ ಇಲ್ಲಿನ ಐತಿಹಾಸಿಕ ಕೊಳಗಳ ಮನಮೋಹಕ ಸೊಬಗು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. 25 ವರ್ಷಗಳ ಹಿಂದೆ ಇಲ್ಲಿನ ಕೊಳಗಳು ತುಂಬಿ ಇತಿಹಾಸ ಸೃಷ್ಟಿಸಿತ್ತು.

    ಒಂದು ಸಾವಿರ ವರ್ಷಗಳ ಹಿಂದೆ ಭಗವದ್ ಋಷಿಮುನಿಗಳು ತಪಸ್ಸು ಮಾಡಿದ ಹಾಗೂ ರಾಮಾನುಜಾಚಾರ್ಯರು ಜೀರ್ಣೋದ್ಧಾರ ಮಾಡಿದ ವೇದಪುಷ್ಕರಣಿ, ಯಾದವಾತೀರ್ಥ, ದರ್ಬತೀರ್ಥ, ಪಲಾಶರ ತೀರ್ಥ ಪದ್ಮತೀರ್ಥ, ನರಸಿಂಹ ತೀರ್ಥ, ನಾರಾಯಣ ತೀರ್ಥಗಳು ತುಂಬಿ ಕೋಡಿ ಬಿದ್ದಿವೆ. ಅಲ್ಲದೆ, ಅಕ್ಕತಂಗಿ,ಬೆಟ್ಟ, ತೆಪ್ಪ, ಪುಟ್ಟನರಸೀ, ಚೊತ್ತಿ ಸೇರಿದಂತೆ ಎಲ್ಲ ಕೊಳಗಳೂ ಭರ್ತಿಯಾಗಿ ಚೆಲುವಯ್ಯನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣವಾಗಿದೆ. ಮೇಲುಕೋಟೆಯ ವೇದಪುಷ್ಕರಣಿಯ ಮಂಟಪದ ಒಳಭಾಗವಿರುವ ದತ್ತಪಾದುಕೆಯ ಸುತ್ತ ಮಳೆ ನೀರು ಆವರಿಸಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts