More

    ಏತ ನೀರಾವರಿಯಿಂದ ಅನ್ನದಾತರಿಗೆ ಅನುಕೂಲ

    ಐನಾಪುರ: ಮತಕ್ಷೇತ್ರದ ಜನ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಕಾಲುವೆ ನಿರ್ಮಾಣ ಹಾಗೂ ನೀರು ಹರಿಸುವಿಕೆಗೆ ಕ್ರಮ ವಹಿಸಿರುವ ಸಚಿವ ಶ್ರೀಮಂತ ಪಾಟೀಲ ಕಾರ್ಯ ಸ್ಮರಣೀಯ ಎಂದು ಕರೊನಾ ಸೇನಾನಿ ಹಾಗೂ ವೈದ್ಯ ಡಾ.ಆನಂದ ಮುತಾಲಿಕ ಹೇಳಿದ್ದಾರೆ.

    ಐನಾಪುರ ಏತ ನೀರಾವರಿ ಯೋಜನೆಯ ಮೊದಲನೇ ಹಂತದ ಕಾಲುವೆಗೆ ನೀರು ಬಿಡುಗಡೆ ಮಾಡಿ ಮಾತನಾಡಿದ ಅವರು, ಪಾಟೀಲರ ವಿಶೇಷ ಪ್ರಯತ್ನದಿಂದ ಬಸವೇಶ್ವರ ಏತ ನೀರಾವರಿ ಯೋಜನೆ ಮುಕ್ತಾಯದ ಹಂತಕ್ಕೆ ಬಂದಿದ್ದು, ರೈತರಿಗೆ ನೆರವಾಗಲಿದೆ ಎಂದರು. ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ರವಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಪ್ರವೀಣ ಹುಣಶೀಕಟ್ಟಿ, ಪ್ರಶಾಂತ ಪಿ., ಪಪಂ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ದಾದಾ ಪಾಟೀಲ, ಮೋಹನ ಮುತಾಲಿಕ, ಡಾ.ಮೋಹನರಾವ ಕಾರ್ಚಿ, ಸುನೀಲ ಮಾಳಿ, ಪ್ರಶಾಂತ ಅಪರಾಜ, ಸಚಿನ ದೇಸಾಯಿ, ರಾಜು ಮಾನೆ, ಗ್ರಾಪಂ ಅಧ್ಯಕ್ಷ ಬಸು ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts