More

    ಏಕ ಬೆಳೆ ಅವಲಂಬನೆಯಿಂದ ದುಸ್ಥಿತಿಯಲ್ಲಿ ರೈತರು

    ಮಳವಳ್ಳಿ: ಹಿಂದೆ ನಮ್ಮ ಹಿರಿಯರು ಸಮಗ್ರ ಕೃಷಿ ಪದ್ಧತಿಯ ಜತೆಗೆ ವಿವಿಧ ಸಾಕು ಪ್ರಾಣಿಗಳನ್ನು ಮನೆಗಳಲ್ಲೇ ಸಾಕಿಕೊಂಡು ಸಮೃದ್ಧ ಜೀವನ ನಡೆಸಿದ್ದರು. ಪ್ರಸ್ತುತ ರೈತರು ಏಕ ಬೆಳೆ ಹಾಗೂ ಅನುಭವದ ಕೊರತೆಯಿಂದ ದುಸ್ಥಿತಿಯ ಬದುಕು ನಡೆಸುವಂತಾಗಿದೆ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶ ಡಾ.ಉದಯ್‌ಶಂಕರ್ ವಿಷಾದವ್ಯಕ್ತಪಡಿಸಿದರು.

    ತಾಲೂಕಿನ ತಳಗವಾದಿ ಗ್ರಾಮದಲ್ಲಿ ಗುರುವಾರ ಪಶು ಸಂಗೋಪನಾ, ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಂಡೂರು ಕುರಿ ಮತ್ತು ಮೇಕೆ ಸಾಕಣೆದಾರರ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಣೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ನಮ್ಮ ಪೂರ್ವಜ ಅನ್ನದಾತ, ತನ್ನ ಕುಟುಂಬಕ್ಕೆ ಬೇಕಾಗುವ ಎಲ್ಲ ರೀತಿಯ ಬೆಳೆಗಳನ್ನು ತನ್ನ ಜಮೀನಿನಲ್ಲಿ ಬೆಳೆದುಕೊಳ್ಳುತ್ತಿದ್ದ. ಎಮ್ಮೆ, ಹಸು ಸೇರಿದಂತೆ ಎಲ್ಲ ರೀತಿಯ ಸಾಕುಪ್ರಾಣಿಗಳನ್ನು ಸಾಕಿಕೊಂಡು ಯಾರನ್ನೂ ಅವಲಂಬಿಸದೆ ಕುಟುಂಬ ನಿರ್ವಹಣೆ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಂಡಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಏಕಬೆಳೆ ಪದ್ಧತಿ ಹಾಗೂ ಇಳುವರಿಗಾಗಿ ರಾಸಾಯನಿಕ ಔಷಧ, ಗೊಬ್ಬರಗಳಿಗೆ ಮಾರಹೋಗಿದ್ದಾರೆ. ಇದರಿಂದ ಭೂಮಿ ತನ್ನ ಸತ್ವ ಕಳೆದುಕೊಂಡಿರುವುದು ಒಂದೆಡೆಯಾದರೆ, ರೈತ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ನಷ್ಟಕ್ಕೊಳಗಾಗಿ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದರು.

    ಇತ್ತೀಚಿನ ದಿನಮಾನಗಳಲ್ಲಿ ಬಹಳಷ್ಟ ಅನ್ನದಾತರು ಕೃಷಿಯಿಂದ ವಿಮುಖರಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಹೈನೋದ್ಯಮದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಜತೆಗೆ ಕುರಿ, ಮೇಕೆಗಳನ್ನು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಕಣೆ ಮಾಡಿಕೊಳ್ಳಿ. ಅದಕ್ಕೆ ಪೂರಕವಾಗಿ ಸರ್ಕಾರವೂ ರೈತ ಉತ್ಪಾದಕ ಕಂಪನಿಯನ್ನು ರೈತರಿಂದ ಸಂಘಟಿಸಿ ಮಾರುಕಟ್ಟೆ ಕಲ್ಪಿಸಿ ಕೊಡುವುದರ ಜತೆಗೆ ಅನ್ನದಾತ ತಾನು ಬೆಳೆದ ಬೆಳೆಗೆ ಉತ್ತಮ ತಾನೇ ನಿಗದಿಪಡಿಸಿ ಮಾರಾಟ ಮಾಡಿಕೊಳ್ಳಬಹುದು. ವಿವಿಧ ಸವಲತ್ತುಗಳನ್ನು ಈ ಕಂಪನಿ ಮೂಲಕ ಪಡೆದುಕೊಳ್ಳಲು ಸಹಕಾರಿಯಾಗಿದ್ದು, ರೈತರು ಈ ಸಂಸ್ಥೆಗೆ ಷೇರುದಾರರಾಗಿ ಹೆಚ್ಚಿನ ಲಾಭ ಗಳಿಸಿ ಎಂದು ಕಿವಿಮಾತು ಹೇಳಿದರು.

    ಡಾ.ತ್ರಿನೇಶ್, ಡಾ.ಕೃಷ್ಣಪ್ಪ ರೈತರಿಗೆ ಸಮಗ್ರ ಮಾಹಿತಿ ನೀಡಿದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಕ ನಿರ್ದೇಶಕ ಡಾ.ಸಿದ್ದರಾಮು, ರೈತ ಉತ್ಪಾದಕ ಕಂಪನಿ ನಿರ್ದೇಶಕರಾದ ಬೋರಯ್ಯ, ಜಯರಾಜು, ಮಹದೇವಯ್ಯ, ಜಯಮ್ಮ, ಅನಿಲ್ ಕುಮಾರ್, ಸಿಇಒ ನಿಸರ್ಗ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts