More

    ಎಸ್​ಸಿ, ಎಸ್​ಟಿಗೆ ಮಹಾ ಕೊಡುಗೆ

    ಹಿರೇಕೆರೂರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರದೇ ಹೋಗಿದ್ದರೆ, ಅದರಲ್ಲೂ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಇದ್ದಿದ್ದರೆ ಎಸ್​ಸಿ, ಎಸ್​ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗುತ್ತಿರಲಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಪಟ್ಟಣದಲ್ಲಿ ತಾಲೂಕು ವಾಲ್ಮೀಕಿ ಸಮಾಜ, ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ, ದಲಿತ ಸಮಾಜದವರಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಪ್ರಸನ್ನಾನಂದ ಸ್ವಾಮೀಜಿ ಅವರು ಗಟ್ಟಿ ಮನಸ್ಸಿನಿಂದ, ಪಟ್ಟು ಬಿಡದೆ ಎಲ್ಲ ಸಮುದಾಯದ ಸ್ವಾಮೀಜಿಗಳೊಂದಿಗೆ ಸತತವಾಗಿ 8 ತಿಂಗಳು ಧರಣಿ ಕುಳಿತರು. ಸರ್ಕಾರದ ಮೇಲೆ ಬಾರಿ ಪ್ರಭಾವ ಬೀರಿ ಈ ವರ್ಗದ ಜನತೆಗೆ ಮೀಸಲಾತಿ ಹೆಚ್ಚಳ ಮಾಡಿಸುವ ಮೂಲಕ ಆಧುನಿಕ ಮಹರ್ಷಿ ವಾಲ್ಮೀಕಿ ಎನಿಸಿಕೊಂಡಿದ್ದಾರೆ. ಕೆಲವು ಕಾನೂನಿನ ತೊಡಕುಗಳಿಂದ ಸ್ವಲ್ಪ ತಡವಾಗಿದ್ದರೂ ಮೀಸಲಾತಿ ಹೆಚ್ಚಳವಾಗಿದೆ. 50 ವರ್ಷಗಳಿಂದ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಕೂಗು ಕೇಳಿ ಬಂದಿದ್ದವು. ಆದರೆ ಈ ಬಗ್ಗೆ ಯಾವ ಸರ್ಕಾರಗಳು ಇಚ್ಛಾಶಕ್ತಿ ಹೊಂದಿರಲಿಲ್ಲ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದ್ದು, ಈ ಸಮುದಾಯಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ. ಮುಂದಿನ ದಿನಗಳಲ್ಲಿ ಹಿರೇಕೆರೂರ ಅಥವಾ ರಟ್ಟಿಹಳ್ಳಿಯಲ್ಲಿ ಪ್ರಸನ್ನಾನಂದ ಸ್ವಾಮೀಜಿ ಸೇರಿದಂತೆ ಹೋರಾಟದಲ್ಲಿ ಭಾಗಿಯಾದ ಎಲ್ಲ ಪೂಜ್ಯರನ್ನು ಕರೆಸಿ ಅಭಿನಂದನಾ ಸಮಾರಂಭ ಏರ್ಪಡಿಲಾಗುವುದು ಎಂದರು.

    ದಲಿತ ಸಮುದಾಯದ ಮುಖಂಡ ಬಸವರಾಜ ಕಾಲ್ವೀಹಳ್ಳಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಜಿ.ಎಚ್. ತಳವಾರ, ಜಿಪಂ ಮಾಜಿ ಸದಸ್ಯ ಎನ್.ಎಂ. ಈಟೇರ ಮಾತನಾಡಿದರು. ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ತಾಪಂ ಮಾಜಿ ಸದಸ್ಯ ಹನುಮಂತಪ್ಪ ಮೇಗಳಮನಿ, ವನಜಾ ಪಾಟೀಲ, ಕೆ.ಡಿ. ದೀವಿಗಿಹಳ್ಳಿ, ಪ್ರವೀಣ ತಳವಾರ, ಪಿ.ಎಸ್. ಸಾಲಿ, ಹೊನ್ನಪ್ಪ ಸಾಲಿ, ನಿಂಗಪ್ಪ ಕಡೂರ, ಗಂಗಾಧರ ಭೊಗೇರ, ಮಾಲತೇಶ ಹೊಲಬಿಕೊಂಡ, ಶಿವಾಜಿ ದೊಡ್ಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts