More

    ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ 18,873 ಮಕ್ಕಳು

    ಶಿರಸಿ: ಎಸ್​ಎಸ್​ಎಲ್​ಸಿ ಪರೀಕ್ಷೆಯ ಮೂರನೇ ದಿನವಾದ ಸೋಮವಾರ ಶಿರಸಿ ಶೈಕ್ಷಣಿಕ ಜಿಲ್ಲೆಯ 35 ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಪರೀಕ್ಷೆ ನಡೆದಿದ್ದು, ವಿಜ್ಞಾನ ಮತ್ತು ರಾಜ್ಯಶಾಸ್ತ್ರ ವಿಷಯದ ಪರೀಕ್ಷೆಗಳಿಗೆ 612 ವಿದ್ಯಾರ್ಥಿಗಳು ಗೈರಾಗಿದ್ದರು.

    ಪರೀಕ್ಷೆಗೆ ನೋಂದಣಿಯಾದ ಒಟ್ಟು 10,345 ರಲ್ಲಿ 612 ವಿದ್ಯಾರ್ಥಿಗಳು ಗೈರಾಗಿದ್ದು, 9,733 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶಿರಸಿ ತಾಲೂಕಿನ ಒಟ್ಟು 2,996 ವಿದ್ಯಾರ್ಥಿಗಳಲ್ಲಿ 175 ಗೈರಾಗಿದ್ದು, 2,821 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಿದ್ದಾಪುರ 1,296 ರಲ್ಲಿ 108 ಗೈರಾಗಿದ್ದು, 1,189 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಲ್ಲಾಪುರ ತಾಲೂಕಿನ ಒಟ್ಟು 1,129 ವಿದ್ಯಾರ್ಥಿಗಳಲ್ಲಿ 102 ಗೈರಾಗಿದ್ದು, 1,027 ವಿದ್ಯಾರ್ಥಿಗಳು ಹಾಜರಾಗಿದ್ದರು. ಮುಂಡಗೋಡ ತಾಲೂಕಿನ 1,403 ವಿದ್ಯಾರ್ಥಿಗಳಲ್ಲಿ 73 ಗೈರಾಗಿದ್ದು, 1,330 ವಿದ್ಯಾರ್ಥಿಗಳು ಹಾಜರಾಗಿದ್ದರು. ಹಳಿಯಾಳ ತಾಲೂಕಿನ ಒಟ್ಟು 2,741 ವಿದ್ಯಾರ್ಥಿಗಳಲ್ಲಿ 132 ಗೈರಾಗಿದ್ದು, 2,609 ವಿದ್ಯಾರ್ಥಿಗಳು ಹಾಜರಾಗಿದ್ದರು. ಜೊಯಿಡಾ ತಾಲೂಕಿನ ಒಟ್ಟು 779 ವಿದ್ಯಾರ್ಥಿಗಳಲ್ಲಿ 22 ಗೈರಾಗಿದ್ದು, 745 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

    ಕಂಟೇನ್ಮೆಂಟ್ ಜೋನ್​ನಿಂದ 59 ಪರೀಕ್ಷಾರ್ಥಿಗಳು ಹಾಜರ್
    ಕಾರವಾರ:
    ಎಸ್​ಎಸ್​ಎಲ್​ಸಿ ವಿಜ್ಞಾನ ಪರೀಕ್ಷೆ ಸೋಮವಾರ ಸುಗಮವಾಗಿ ನಡೆದಿದೆ. ನೋಂದಾಯಿತ ಒಟ್ಟು 9489 ವಿದ್ಯಾರ್ಥಿಗಳ ಪೈಕಿ 451 ಗಂಡುಮಕ್ಕಳು, 4599 ಹೆಣ್ಣು ಮಕ್ಕಳು ಸೇರಿ 9140 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 349 ವಿದ್ಯಾರ್ಥಿಗಳು ಗೈರಾಗಿದ್ದರು. 179 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದು, 59 ವಿದ್ಯಾರ್ಥಿಗಳು ಕಂಟೇನ್ಮೆಂಟ್ ಪ್ರದೇಶಗಳಿಂದ ಬಂದು ಪರೀಕ್ಷೆ ಬರೆದರು. ಒಟ್ಟು 30 ಅಂಗವಿಕಲ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು, ಅದರಲ್ಲಿ 27 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮೂವರು ಗೈರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts