More

    ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೀದರ್​ ಜಿಲ್ಲೆಗೆ ಭಾಲ್ಕಿ ಟಾಪರ್

    ಭಾಲ್ಕಿ: ಕೋವಿಡ್-19 ಸಂದರ್ಭದಲ್ಲೂ ಎಸ್ಒಪಿ ನಿಯಮಗಳ ಪ್ರಕಾರ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಉತ್ತಮವಾಗಿ ನಡೆಸಿದ್ದು, ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮನೋಹರ ಹೋಳಕರ ತಿಳಿಸಿದ್ದಾರೆ.
    ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಭಾಲ್ಕಿ ಈ ವರ್ಷ ಜಿಲ್ಲೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದೆ. ಶಿಕ್ಷಕರ ಶ್ರಮ ಹಾಗೂ ಕೋವಿಡ್-19 ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡುವುದರೊಂದಿಗೆ ಕಲಿಕೆಯಲ್ಲಿ ತೊಡಗಿಸಿದ್ದೇ ಇದಕ್ಕೆ ಕಾರಣ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ತಾಲೂಕಿನ 33 ಸರ್ಕಾರಿ ಪ್ರೌಢಶಾಲೆಗಳಲ್ಲಿ ಸಾಯಗಾಂವ ಶಾಲೆ ಶೇ.95.45 ಅಂಕದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಎಂಡಿಆರ್ಎಸ್(ಎಸ್.ಸಿ) ಕೋನಮೆಳಕುಂದಾ (ಶೇ.92.86) ದ್ವಿತೀಯ, ಸರ್ಕಾರಿ ಪ್ರೌಢಶಾಲೆ ಲಾಧಾ (ಶೇ.92.59) ತೃತೀಯ ಸ್ಥಾನದಲ್ಲಿದೆ. ಇನ್ನು ಸರ್ಕಾರಿ ಪ್ರೌಢಶಾಲೆ ಭಾತಂಬ್ರಾ ಶೇ.38.95 ಅಂಕ ಗಳಿಸುವ ಮೂಲಕ ಕೊನೆಯ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
    20 ಅನುದಾನಿತ ಪ್ರೌಢಶಾಲೆಗಳಲ್ಲಿ ಪಟ್ಟಣದ ಜಗಜ್ಯೋತಿ ಬಸವೇಶ್ವರ ಶಾಲೆ ಶೇ.95.65 ಅಂಕದೊಂದಿಗೆ ಪ್ರಥಮ, ನಿಟ್ಟೂರ(ಬಿ)ದ ನಿಟ್ಟೂರ ಪ್ರೌಢಶಾಲೆ (ಶೇ.91.89) ದ್ವಿತೀಯ ಹಾಗೂ ಕೇಸರಜವಳಗಾದ ಸಂಗಮೇಶ್ವರ ಪ್ರೌಢಶಾಲೆ (ಶೇ.91.35) ತೃತೀಯ ಸ್ಥಾನದಲ್ಲಿದೆ. ಗೋರಚಿಂಚೋಳಿ ಗ್ರಾಮದ ಗಂಗಾ ಪ್ರೌಢಶಾಲೆ ಶೂನ್ಯ ಫಲಿತಾಂಶ ಪಡೆದಿದೆ. 31 ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ನಿಟ್ಟೂರ(ಬಿ)ದ ವೀರಭದ್ರೇಶ್ವರ ಪ್ರೌಢಶಾಲೆ ಪ್ರತಿಶತ ಫಲಿತಾಂಶ ಪಡೆದರೆ, ಪಟ್ಟಣದ ಶ್ರೀ ಸತ್ಯಸಾಯಿ ಪಬ್ಲಿಕ್ ಶಾಲೆಯ 62 ಮಕ್ಕಳಲ್ಲಿ 38 ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಹೆಮ್ಮೆ ವಿಷಯ. ಭಾತಂಬ್ರಾದ ಶಾಂತಿನಿಕೇತನ ಪ್ರೌಢಶಾಲೆ(ಶೇ.16.67) ಅಂಕದೊಂದಿಗೆ ಕೊನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts