More

    ಎಸ್ಟಿ ಶಿಫಾರಸು ಅಂಗೀಕಾರಕ್ಕೆ ಒತ್ತಾಯ  -ದೆಹಲಿ ಚಲೋಗೆ ಹಾಲುಮತ ಮಹಾಸಭಾ ಚಿಂತನೆ 

    ದಾವಣಗೆರೆ: ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಮಾಡಿರುವ ಶಿಫಾರಸನ್ನು ಕೇಂದ್ರ ಸರ್ಕಾರ ಉಭಯ ಸದನಗಳಲ್ಲಿ ಅಂಗೀಕರಿಸಿ, ರಾಷ್ಟ್ರಪತಿಗಳ ಅಂಕಿತ ಹಾಕಿಸುವಂತೆ ಹಾಲುಮತ ಮಹಾಸಭಾ ಆಗ್ರಹಿಸಿದೆ.
    ಈ ಹಕ್ಕೊತ್ತಾಯಕ್ಕಾಗಿ ಆಗ್ರಹಿಸಿ ಅಕ್ಟೋಬರ್ ಅಂತ್ಯಕ್ಕೆ ಅಥವಾ ನವೆಂಬರ್ ತಿಂಗಳಲ್ಲಿ ದೆಹಲಿ ಚಲೋ ಮೂಲಕ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಉದ್ದೇಶವಿದೆ. ಈ ಸಂಬಂಧ ಜು.23ರಂದು ಬೆಳಗಾವಿಯಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಅವರ ಬಳಿಯೂ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಎಸ್ಟಿ ಮೀಸಲು ಕಲ್ಪಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
    ಕುರುಬ ಸಮಾಜ, ಎಸ್ಟಿ ಮೀಸಲು ಪಟ್ಟಿಯಲ್ಲಿದ್ದರೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತಾರ ಮಾಡಲಾಗಿರಲಿಲ್ಲ. ಈ ಅನ್ಯಾಯ ಸರಿಪಡಿಸಲು ಶ್ರೀ ನಿರಂಜನಾನಂದಪುರಿ ಶ್ರೀಗಳ ಮಾರ್ಗದರ್ಶನದಲ್ಲಿ 2015ರಿಂದ ನಿರಂತರ ಹೋರಾಟ ನಡೆದಿವೆ.
    ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಲಾಗಿತ್ತು. 2019ರಿಂದ ರಾಜ್ಯದ 25 ಜಿಲ್ಲೆಯಲ್ಲಿ ನಡೆಸಲಾದ ಈ ಅಧ್ಯಯನ ವರದಿಯನ್ನು ಇದೇ ವರ್ಷದ ಮಾರ್ಚ್‌ನಲ್ಲಿ ಸಚಿವ ಸಂಪುಟದಲ್ಲಿ ಅಂಗೀಕರಿಸಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಕೇಂದ್ರದ ಶಿಫಾರಸ್ಸಿಗೆ ಕಳುಹಿಸಿದೆ. ಹೀಗಾಗಿ ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೂವರಿಗೂ ಧನ್ಯವಾದ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ವೀರಣ್ಣ. ಶ್ರೀಮತಿ ಶಿವಗಂಗಾ, ದೀಟೂರು ಚಂದ್ರು, ಸಲ್ಲಳ್ಳಿ ಹನುಮಂತಪ್ಪ, ಘನರಾಜ್, ಷಣ್ಮುಖಪ್ಪ, ಆರ್.ಬಿ.ಪರಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts