More

    ಎಸಿಬಿ ಬಲೆಗೆ ಬಿಇಒ-ಎಸ್ಡಿಎ

    ಕಲಬುರಗಿ: ಹೆರಿಗೆ ರಜೆಗೆ ಹೋಗಿದ್ದ ಶಿಕ್ಷಕಿಯೊಬ್ಬರಿಗೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲು 5 ಸಾವಿರ ರೂ. ಲಂಚ ಪಡೆಯುತ್ತಿದ್ದ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕು ಬಿದ್ದಿದ್ದಾರೆ.
    ಬಿಇಒ ಈಶ್ವರಪ್ಪ ವಾಗಣಗೇರಾ ಮತ್ತು ಎಸ್ಡಿಎ ಶಶಿಕಾಂತ ಹುಡಗಿ ಎಸಿಬಿ ಬಲೆಗೆ ಬಿದ್ದವರು. ಲಿಂಗಯ್ಯನವಾಡಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ರಾಜಕುಮಾರ ಕಾಂಬಳೆ ಅವರ ಪತ್ನಿ ವೈಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಎರಡನೇ ಹೆರಿಗೆಗಾಗಿ 2019ರ ಅಕ್ಟೋಬರ್ 5ರಿಂದ ಮುಖ್ಯಗುರು ಅನುಮತಿ ಪಡೆದು ರಜೆ ಮೇಲೆ ತೆರಳಿದ್ದರು. ಈಗ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಜೂ.15ರಂದು ಆಳಂದ ಬಿಇಒ ಕಚೇರಿಗೆ ಹೋಗಿದ್ದರು. ಅಧಿಕಾರಿ ಇಲ್ಲದ್ದರಿಂದ ಅರ್ಜಿ ನೀಡಿ ಸ್ವೀಕೃತಿ ಪತ್ರ ಪಡೆದು ವಾಪಸಾಗಿದ್ದರು. ಈ ವೇಳೆ ಎಸ್ಡಿಎ ಶಶಿಕಾಂತ ಹುಡಗಿ ಅನುಮತಿ ನೀಡಲು 5000 ರೂ. ಲಂಚದ ಬೇಡಿಕೆಯಿಟ್ಟು ರಾಜಕುಮಾರ ಅವರಿಂದ 17ರಂದು ಪಡೆದಿದ್ದರು.
    ಈ ಹಣವನ್ನು ಬಿಇಒ ಈಶ್ವರಪ್ಪ ಅವರಿಗೆ ನೀಡಲು ಕಲಬುರಗಿ ಲಕ್ಷ್ಮೀನಾರಾಯಣ ನಗರದಲ್ಲಿರುವ ಮನೆಗೆ ಗುರುವಾರ ಶಶಿಕಾಂತ ಬಂದಾಗ ಎಸಿಬಿ ಪ್ರಭಾರಿ ಎಸ್ಪಿ ಬಿ.ಎಸ್. ನ್ಯಾಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಸುಧಾ ಆದಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಇಸ್ಮಾಯಿಲ್ ಶರೀಫ್, ಶರಣಬಸಪ್ಪ ಇತರರು ದಾಳಿ ನಡೆಸಿ ಹಣ ಸಮೇತ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts