More

    ಎಲ್ಲ ಧರ್ಮಗಳೂ ಸಾರುತ್ತಿವೆ ಒಳ್ಳೆಯ ಮನಸ್ಸಿನ ಬಾಳ್ವೆ


    ಸುಂಟಿಕೊಪ್ಪ:
    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಂಟಿಕೊಪ್ಪ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಶುಕ್ರವಾರ ಕಾನ್‌ಬೈಲ್ ರಾಮ ಮಂದಿರದಲ್ಲಿ ಏರ್ಪಡಿಸಲಾಗಿತ್ತು.


    ವೇದಾಂತ ಉಪನ್ಯಾಸಕ ಶಶಾಂಕ ಹತ್ತವಾರ್ ಮಾತನಾಡಿ, ಯಾರಿಗೂ ತೊಂದರೆ ನೀಡದೆ ಒಳ್ಳೆಯ ಮನಸ್ಸಿನಿಂದ ಬಾಳ್ವೆ ನಡೆಸುವುದನ್ನು ಎಲ್ಲ ಧರ್ಮಗಳೂ ಸಾರುತ್ತವೆ. ನಾವು ನಡೆಸುವ ಉತ್ತಮ ಜೀವನ ಕ್ರಮವೇ ಧರ್ಮವಾಗಿದೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲವನ್ನೂ ಸಮಾನ ಮಾನದಂಡವಾಗಿ ಅರ್ಥೈಯಿಸಿಕೊಂಡು ಜೀವಿಸಬೇಕೆಂದು ಸಲಹೆ ನೀಡಿದರು.


    ಸುಂಟಿಕೊಪ್ಪ ವಲಯದ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗೆ 8 ಒಕ್ಕೂಟಗಳು ಸಕಾಲದಲ್ಲಿ ಕಂತು ಪಾವತಿಸಿ ಉತ್ತಮ ಒಕ್ಕೂಟವೆಂದು ಪರಿಗಣಿಸಿದಕ್ಕೆ ಬಡ್ಡಿ ಸಾಲ ಮರುಪಾವತಿ ಪತ್ರ ನೀಡಿ ಗೌರವಿಸಲಾಯಿತು.
    ಯೋಜನಾಧಿಕಾರಿ ರೋಹಿತ್ ಮಾತನಾಡಿ, ಧಾರ್ಮಿಕ ನಂಬಿಕೆ ಗಟ್ಟಿಯಾಗಿ ಉಳಿದರೆ ಸಮಾಜ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು

    ನಿಸರ್ಗ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಕೃಷ್ಣಭಟ್ ಆರೋಗ್ಯ ರಕ್ಷಾ ಕಾರ್ಡುಗಳನ್ನು ವಿತರಿಸಿದರು.
    ಅಧ್ಯಕ್ಷತೆಯನ್ನು ಶ್ರೀ ರಾಮ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಜಿ.ನರೇಂದ್ರ ವಹಿಸಿದ್ದರು.
    ಸಮಾಜ ಸೇವಕರಾದ ಪರಮೇಶ್ವರ ಗಜಾನನ ಹೆಗಡೆ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ.ರಮೇಶ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಿಸಿದರು.


    ಮಡಿಕೇರಿ ಶಾಸಕ, ಕಾನ್‌ಬೈಲ್ ಒಕ್ಕೂಟದ ಅಧ್ಯಕ್ಷರಾದ ಖತ್ತೀಜ, ಮುಖಂಡ ಡಾ.ಶಶಿಕಾಂತ್ ರೈ ಉಪಸ್ಥಿತರಿದ್ದರು.
    ಇದೇ ಸಂದರ್ಭದಲ್ಲಿ ವಲದಲ್ಲಿ ಉತ್ತಮ ಸಾಧನೆ ಮಾಡಿದ 8 ಒಕ್ಕೂಟದ ವಿವಿಧ ಸ್ವಸಹಾಯ ಸಂಘಗಳಾದ ಓಂಶಾಂತಿ ಶಾಂತಗೀರಿ ಒಕ್ಕೂಟ, ಕಾನ್‌ಬೈಲ್ ಒಕ್ಕೂಟ ಭೂಮಿಕ, ಬಸವೇಶ್ವರ ಕಾಂಡಾನಕೊಲ್ಲಿ, ಕೆದಕಲ್ ಸಂಜೀವಿನಿ, ಸುಂಟಿಕೊಪ್ಪ ಶಿವಶಂಕರಿ, ಗದ್ದೆಹಳ್ಳ ಕಾವೇರಿ, ಶ್ರೀ ರಕ್ಷಾ ಮಾದಾಪುರ ಗುಂಡುಗುಟ್ಟಿ ಮಾತೃಶ್ರೀ ನವಜೀವನ ಸಮಿತಿಯವರಿಗೆ ಬಹುಮಾನವನ್ನು ವಿತರಿಸಲಾಯಿತು.

    ವಿವಿಧ ಗ್ರಾಮಗಳ ಸೇವಾಪ್ರತಿನಿಧಿಗಳು ಮತ್ತು ನೂರಾರು ಸಂಖ್ಯೆಯಲ್ಲಿ ಸಂಘದ ಮಹಿಳಾ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts