More

    ಎಲ್ಲೆಲ್ಲೂ ಗಣಪತಿ ಬಪ್ಪಾ ಮೋರಯಾ

    ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಶುಕ್ರವಾರ ಸಡಗರದಿಂದ ಗಣೇಶ ಚತುರ್ಥಿ ಆಚರಿಸಲಾಯಿತು. ಕರೊನಾ ವೈರಸ್ ಆತಂಕದ ಮಧ್ಯೆಯೂ ಜನರು ಸಂಭ್ರಮದಿಂದ ವಿಘ್ನ ನಿವಾರಕನನ್ನು ಬರಮಾಡಿಕೊಂಡರು.

    ಬೆಳಗ್ಗೆಯಿಂದಲೇ ವರುಣನ ಅಬ್ಬರವಿತ್ತು. ಆದರೆ, ಜನರು ಉತ್ಸಾಹದಿಂದಲೇ ಗಣೇಶನನ್ನು ತಂದು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದರು. ಸಕಲ ಜೀವರಾಶಿಗಳ ಒಳಿತಿಗೆ ಪ್ರಾರ್ಥಿಸಿದರು.

    ವಾದ್ಯಮೇಳಗಳೊಂದಿಗೆ ಆಗ ಮಿಸಿ ಬೈಕ್, ಕಾರು, ಜೀಪ್‌ಗಳಲ್ಲೂ ಗಣಪನ ವಿಗ್ರಹ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂತು. ‘ಗಣಪತಿ ಬಪ್ಪಾ ಮೋರಯಾ’ ಎಂಬ ಜೈಕಾರ ಮುಗಿಲು ಮುಟ್ಟಿದ್ದವು. ಇಡೀ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಪಟಾಕಿ ಸಿಡಿಸಿ ಖುಷಿಪಟ್ಟರು. ವಿಶ್ವವನ್ನೇ ಕಾಡುತ್ತಿರುವ ಕರೊನಾ ಸಮಸ್ಯೆ ಶೀಘ್ರ ನಿವಾರಣೆಯಾಗಲಿ ಎಂದು ವ್ನಿೇಶ್ವರನಲ್ಲಿ ಪ್ರಾರ್ಥಿಸಿದರು.
    370 ಸಾರ್ವಜನಿಕ ಗಣೇಶ ವಿಗ್ರಹ: ಬೆಳಗಾವಿಯ ಸಾರ್ವಜನಿಕ ಗಣೇಶೋತ್ಸವಕ್ಕೆ 117 ವರ್ಷಗಳ ಇತಿಹಾಸವಿದೆ. ಪ್ರತಿವರ್ಷ ಅದ್ದೂರಿ ಮೆರವಣಿಗೆಯಲ್ಲಿ ವಿಗ್ರಹಗಳನ್ನು ತಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಈ ಸಲ ಸರಳವಾಗಿ 370ಕ್ಕೂ ಅಧಿಕ ಸಾರ್ವಜನಿಕ ವಿಗ್ರಹಗಳನ್ನು ತಂದು, ದೇವಸ್ಥಾನ, ಸಮುದಾಯ ಭವನ ಹಾಗೂ ದೊಡ್ಡ ಹೊರಾಂಗಣವಿರುವ ಮನೆಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ಥಳಾವಕಾಶ ಲಭ್ಯವಿಲ್ಲದ್ದರಿಂದ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಹಾಕಿರುವ ಮಂಟಪಗಳಲ್ಲಿ ಗಣೇಶನನ್ನು ಕೂರಿಸಲಾಯಿತು.

    ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮಂಕಾಗಿದ್ದ ‘ಚೌತಿ’ಗೆ ಈ ಬಾರಿ ವಿಶೇಷ ಕಳೆ ಬಂದಿತ್ತು. ವಿವಿಧ ಸರ್ಕಾರಿ ಕಚೇರಿಗಳಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಹಲವರು ಕರೊನಾ ನಿಯಂತ್ರಣ ಮಾರ್ಗಸೂಚಿ ಪಾಲಿಸಿದರೆ, ಇನ್ನೂ ಕೆಲವರು ಉಲ್ಲಂಸಿದ್ದು ಕಂಡುಬಂತು. ಗ್ರಾಮೀಣ ಭಾಗದಲ್ಲೂ ‘ಚೌತಿ’ ಕಳೆಗಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts