More

    ಎಲ್ಲರಿಗೂ ಸಿಗಲಿ ಬ್ಯಾಂಕ್ ಸೌಲಭ್ಯ

    ಮುಗಳಖೋಡ: ಗ್ರಾಮೀಣ ಭಾಗದ ಬಡವರು, ರೈತಾಪಿ ವರ್ಗ ಹಾಗೂ ದೀನ-ದಲಿತ, ದುರ್ಬಲ ಜನರಿಗೆ ಬ್ಯಾಂಕ್ ಸೌಲಭ್ಯ ದೊರೆಯುವಂತಾಗಬೇಕು ಎಂದು ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಂಘದ 2ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಚಿನ್ಮಯಗಿರಿ ಮಠದ ಪೀಠಾಧಿಪತಿ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ಬ್ಯಾಂಕ್ ಬೆಳೆಯಲು ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

    ಶಾಸಕ ಪಿ.ರಾಜೀವ್ ಮಾತನಾಡಿ, ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಮಧ್ಯೆ ಉತ್ತಮ ಸಂಬಂಧ ಇರಬೇಕು. ಪಡೆದ ಸಾಲ ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಸಲಹೆ ನೀಡಿದರು.

    ಶಾಸಕರಾದ ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಸಿದ್ದು ಸವದಿ, ರಾಜ್ಯ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಜಗದೀಶ ಕವಟಗಿಮಠ, ಪ್ರಧಾನ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಮಾತನಾಡಿದರು.

    ಸಹಕಾರಿ ಸಂಘದ ಲಾಂಛನ ಬಿಡುಗಡೆ, ಗ್ರಾಹಕರಿಗೆ ಪಾಸ್ ಬುಕ್ ವಿತರಣೆ, ಸ್ಥಳೀಯ ಶಾಖೆಯ ಸಲಹಾ ಸಮಿತಿ ಸದಸ್ಯರ ಹೆಸರು ಸೂಚಿಸುವುದು, ಕರಪತ್ರ ಬಿಡುಗಡೆ, ನಿರಂತರ ಸೇವಾ ಸೌಲಭ್ಯದ ಲೋಕಾರ್ಪಣೆ, ಮುದ್ದತಿ ಠೇವು ಕಾರ್ಡ್ ವಿತರಣೆ, ಶ್ರೀಮಠದ 2023ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಜರುಗಿದವು.

    ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಚನ್ನಬಸಪ್ಪ ನಾಡಗೌಡರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ನಿರ್ದೇಶಕ ಚೆನ್ನವೀರಯ್ಯ ಹಿರೇಮಠ, ನಿರ್ದೇಶಕಿ ಶೈಲಜಾ ತಪಲಿ, ಸುಶೀಲಕುಮಾರ ಬೆಳಗಲಿ, ಮಲಗೌಡ ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಮಾರುತಿ ಗೋಕಾಕ, ಬಸವರಾಜ ಜೋಪಾಟೆ, ಚಂದ್ರಶೇಖರ ಸಂಗಣ್ಣ, ಕಲ್ಲುರಾಜ ನಿಡೋಣಿ, ಮಲ್ಲಿಕಾರ್ಜುನ ಖಾನಗೌಡ, ಲಕ್ಕಪ್ಪ ಪಾಟೀಲ, ದತ್ತಾ ಸಣ್ಣಕ್ಕಿ, ವಿವೇಕ ನಾರಗೊಂಡ, ಸಚಿನ ಗಣಾಚಾರಿ, ಸಂತೋಷ ತಳವಾರ ಇತರರು ಇದ್ದರು. ಸೋಮು ಹೊರಟ್ಟಿ ನಿರೂಪಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts