More

    ಎಲೆಚುಕ್ಕೆ ರೋಗಕ್ಕೆ ಔಷಧ ಸಿಂಪಡಣೆಗೆ 4 ಕೋಟಿ ರೂ. ಅನುದಾನ: ಪ್ರತಿ ಎಕರೆಗೆ 1600 ರೂ. ನೆರವು

    ಸಾಗರ: ಅಡಕೆ ಎಲೆಚುಕ್ಕೆ ರೋಗಕ್ಕೆ ಔಷಧ ಸಿಂಪಡಣೆ ಮಾಡಲು ರೈತರಿಗೆ ಪರಿಹಾರ ರೂಪದಲ್ಲಿ ರಾಜ್ಯ ಸರ್ಕಾರ 4 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಔಷಧ ಸಿಂಪಡಣೆಗೆ ಪ್ರತಿ ಎಕರೆಗೆ 1600 ರೂ. ಪರಿಹಾರ ನೀಡಲಾಗುತ್ತದೆ.
    ಅಡಕೆ ತೋಟದಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸಲು ಸೋಮವಾರ ಶಿವಮೊಗ್ಗದಲ್ಲಿ ಅಡಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವರ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಬೆಳೆಗಾರರ ಹಿತಾಸಕ್ತಿಗೆ ಪೂರಕವಾದ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ.
    ಎಲೆಚುಕ್ಕೆ ರೋಗಕ್ಕೆ ಔಷಧ ಸಿಂಪಡಣೆ ಮಾಡಲು 10 ಕೋಟಿ ರೂ. ಪರಿಹಾರ ಧನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಮೊದಲ ಹಂತದಲ್ಲಿ 4 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ 6 ಕೋಟಿ ರೂ. ಬಿಡುಗಡೆ ಮಾಡಲು ತಾತ್ವಿಕ ಒಪ್ಪಿಗೆ ನೀಡಿದೆ. ಎಲೆಚುಕ್ಕೆ ರೋಗದಿಂದ ಹಾಳಾದ ಅಡಕೆ ತೋಟಕ್ಕೂ ಪರಿಹಾರ ಕೊಡಿಸಲು ಪ್ರಯತ್ನ ನಡೆಸುತ್ತೇನೆ. ಈ ಬಗ್ಗೆ ತೋಟಗಾರಿಕೆ ಸಚಿವರ ಬಳಿ ಚರ್ಚೆ ಮಾಡಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಾಗರ ಮತ್ತು ಹೊಸನಗರ ತಾಲ್ಲೂಕಿನ ಕರೂರು, ಭಾರಂಗಿ, ಆವಿನಹಳ್ಳಿ, ನಿಟ್ಟೂರು, ಕಸಬಾ ಹೋಬಳಿಯ ತೋಟಗಳಿಗೆ ಎಲೆಚುಕ್ಕೆ ರೋಗ ಕಂಡು ಬಂದಿದೆ. ಸಾಗರ ತಾಲೂಕಿನ 9,185 ಎಕರೆ ತೋಟದಲ್ಲಿ ರೋಗ ಕಾಣಿಸಿಕೊಂಡಿದ್ದು ಬೆಳೆಗಾರರಿಗೆ ಹೆಕ್ಸೋಲೋಜೋನ್ ಮತ್ತು ಮೈಲುತುತ್ತವನ್ನು ಸುಣ್ಣದ ಜತೆ ಸಿಂಪಡಣೆಗೆ ವಿಜ್ಞಾನಿಗಳು ಸೂಚನೆ ನೀಡಿದ್ದಾರೆ. ಸರ್ಕಾರ ಮೊದಲ ಹಂತದಲ್ಲಿ ಔಷಧಿಗೆ ಮಾತ್ರ ಆರ್ಥಿಕ ಸಹಕಾರ ನೀಡುತ್ತಿದ್ದು ಹಾನಿಗೊಳಗಾದ ಬೆಳೆಗೆ, ತೋಟಕ್ಕೆ ಹೆಚ್ಚಿನ ಪರಿಹಾರ ಕೊಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts