More

    ಎಚ್ಐವಿ ಸೋಂಕಿತರ ಸಂಖ್ಯೆ ಇಳಿಮುಖ

    ಕಲಬುರಗಿ: ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ ಮಾಲಿ ತಿಳಿಸಿದ್ದಾರೆ.
    ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೆಡ್ ರಿಬ್ಬನ ಕ್ಲಬಗಳ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಎಚ್.ಐ.ವಿ. ಸೋಂಕಿನ ತಡೆಗಾಗಿ ಮಂಗಳವಾರ ಆಯೋಜಿಸಿದ್ದ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    2010ರಲ್ಲಿ ಶೇ.4.42 ಇದ್ದ ಸೋಂಕಿತರು ಪ್ರಸ್ತುತ ಶೇ.4.04ಕ್ಕೆ ಇಳಿಕೆ ಕಂಡಿದೆ. ಸಕ್ರಿಯವಾಗಿ ಜಿಲ್ಲೆಯಲ್ಲಿ 4880 ಜನ ಹೆಚ್ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರಲ್ಲೂ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು ಇದು ಒಳ್ಳೆಯ ಸಂಗತಿ. ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳು ಪಡೆಯಬೇಕು ಎಂದು ತಿಳಿಸಿದರು.
    ಹಿರಿಯ ಸಿವಿಲ್ ನ್ಯಾಯಾಧಿಶರು ಮತ್ತು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜಿ.ಆರ್. ಶೆಟ್ಟರ್ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
    ಏಡ್ಸ್ ನಿಯಂತ್ರಣ ಮಾಡುವುದರಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ 5 ಜನ ಸಿಬ್ಬಂದಿಗಳಾದ ಸಕರ್ಾರಿ ಸಾರ್ವಜನಿಕ ಆಸ್ಪತ್ರೆ ಚಿತ್ತಾಪೂರ ಆಪ್ತ ಸಮಾಲೋಚಕ ಸುಜ್ಞಾನಿ ಪಾಟೀಲ್, ಸರ್ಕಾರಿ ಆಸ್ಪತ್ರೆ ಕೇಂದ್ರ ನರೋಣ ಪ್ರಯೋಗಶಾಲೆ ತಂತ್ರಜ್ಞ ರವಿ, ಕಲಬುರಗಿಯ ಜಿಲ್ಲಾ ಆಸ್ಪತ್ರೆ ಎ.ಆರ್.ಟಿ. ಕೇಂದ್ರದ ಸುಜಾತಾ ಪಾಟೀಲ್, ಜಿಲ್ಲಾ ಆಸ್ಪತ್ರೆ ವಾಹನ ಚಾಲಕ ಬಾಬುರಾವ ಮತ್ತು ಕಲಬುರಗಿ ಸ್ನೇಹಾ ಸೊಸೈಟಿಯ ಓ.ಆರ್.ಡಬ್ಲೂ. ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.
    ಜಿಲ್ಲೆಯಲ್ಲಿ ಅತಿಹೆಚ್ಚು ರಕ್ತದಾನ ಮಾಡಿದ ಮಾಲಾ, ಸಿದ್ದಲಿಂಗ ಹಾಗೂ ಸಿದ್ದು ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಎಚ್ಐವಿ ಸಮುದಾಯಕ್ಕೆ ಬೆಂಬಲ ನೀಡಿದ ಸಂಘ-ಸಂಸ್ಥೆಗಳು, ದಾನಿಗಳಾದ ಅಜಿಂ ಪ್ರೇಮ್ಜಿ ಫೌಂಡೇಷನ್ ಸಂಯೋಜಕರಾದ ಮಹಾದೇವ, ಚೈಲ್ಡ್ ಲೈನ್ ಡೈರೆಕ್ಟರ್ ಡಾನ್ ಬಾಸ್ಕೊ ಪ್ಯಾರೆ ಸೊಸೈಟಿಯ ಫಾದರ್ ಸಾಜಿ ಜೊರ್ಜ ಮತ್ತು ಝೋನಲ್ ಕೋ-ಆಡರ್ಿನೇಟರ್ ಸಂಗಮದ ಮಹೇಶ ಪಾಟೀಲ್ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.
    ಕ್ಷಯರೋಗ ಕುರಿತು ಆಂದೋಲನ ಕಾರ್ಯಕ್ರಮ: ಇದೇ ಕಾರ್ಯಕ್ರಮದಲ್ಲಿ ಕ್ಷಯರೋಗ ಕುರಿತ ಆಂದೋಲನ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ವಿಭಾಗೀಯ ಅಧಿಕಾರಿ ಡಾ. ಸತೀಶ ಘಾಟ್ಗೆ ಮಾತನಾಡಿ, ಸಕ್ರೀಯ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮ ಡಿ.1ರಿಂದ 31ರವರೆಗೆ ನಡೆಯಲಿದೆ ಎಂದರು.
    ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ. ಎ.ಎಸ್ ರುದ್ರವಾಡಿ, ಎಐಟಿ ವೈದ್ಯಾಧಿಕಾರಿ ರೇಣುಕಾ ಪ್ರಸಾದ, ತಾಲೂಕ ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತ್ನಾಳ್, ಕಾಲರಾ ನಿಮರ್ೂಲನಾ ಅಧಿಕಾರಿ ಶರಣಬಸಪ್ಪ ಗಣಜಲಖೇಡ್, ಡೆಪ್ರೋ ಜಿಲ್ಲಾ ಮೇಲ್ವಿಚಾರಕ ಸೋಮಶೇಖರ ಮಾಲಿಪಾಟೀಲ, ಜಿಲ್ಲಾ ಕ್ಷಯರೋಗ ಆಪ್ತ ಸಮಾಲೋಚಕ ಮಂಜುನಾಥ ಕಂಬಳಿಮಠ ಇತರರು ಇದ್ದರು.
    ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ ಸ್ವಾಗತಿಸಿದರು, ಇಎಸ್ಐ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸುಗಲಾ ರಾಣಿ ನಿರೂಪಣೆ ಮಾಡಿದರು. ಎಆರ್ಟಿ ಆಪ್ತ ಸಮಾಲೋಚಕ ಮಲ್ಲಿಕಾಜರ್ುನ ವಂದಿಸಿದರು.

    ಏಡ್ಸ್ ಸಂಪೂರ್ಣವಾಗಿ ನಿಮರ್ೂಲನೆ ಮಾಡಲು ಅಸಾಧ್ಯ. ಆದರೆ, ನಿಯಂತ್ರಣದಲ್ಲಿ ಇಡಬಹುದು. ಜಾಥಾ, ಸುದ್ದಿವಾಹಿನಿ, ದಿನಪತ್ರಿಕೆಗಳು, ನಾಟಕ, ಬಿತ್ತಿ ಪತ್ರ ಮುಂತಾದವುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಆಗಬೇಕು ಎಂದು ಹೇಳಿದರು.
    ಡಾ.ದೇವೀಂದ್ರ ಮೈನಾಳೆ,
    ನಿವೃತ್ತ ವೈದ್ಯಾಧಿಕಾರಿ, ಕಲಬುರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts