More

    ಎಐಟಿಯುಸಿ ನ್ಯಾಯಕ್ಕಾಗಿ ಹೋರಾಡುತ್ತಿದೆ

    ಚಿತ್ರದುರ್ಗ: ಸ್ವಾತಂತ್ರ್ಯಪೂರ್ವದಿಂದಲೂ ಎಐಟಿಯುಸಿ ಕಾರ್ಮಿಕರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದೆ ಎಂದು ಸಂಘಟನೆ ಮುಖಂಡ ಶಿವರುದ್ರಪ್ಪ ಹೇಳಿದರು.

    ನಗರದ ಎಐಟಿಯುಸಿ ಕಾರ‌್ಯಾಲಯದಲ್ಲಿ ಮಂಗಳವಾರ ಸಂಘಟನೆಯ ಶತಮಾನೋತ್ಸವ ಆಚರಣೆಯ ಲ್ಲಿ ಮಾತನಾಡಿ,ಎಐಟಿಯುಸಿ ಎಲ್ಲ ಕಾರ್ಮಿಕ ಹೋರಾಟದ ಸಂಘಟನೆಗಳಿಗೆ ತಾಯಿ ಇದ್ದಂತೆ ಇದೊಂದು ಸಮುದ್ರವಿದ್ದಂತೆ. ಆದರೆ ಕೆಲವು ಬಂಡ ವಾಳ ಶಾಹಿಗಳು ಸಂಘಟನೆ ಒಡೆಯಲು ಸಂಚು ನಡೆಸಿದ್ದಾರೆ. ಇದರಿಂದಾಗಿ ಕಾರ್ಮಿಕರೆಡೆ ಬದ್ಧತೆ ಇಲ್ಲದ ಸಂಘಟನೆಗಳಿವೆ. ದುಡಿಯುವ ವರ್ಗಕ್ಕೆ ತೊಂದರೆಯಾಗುತ್ತಿದೆ ಸೌಲಭ್ಯಗಳು ಕಡಿಮೆಯಾಗುತ್ತಿವೆ,ಹಕ್ಕುಗಳನ್ನು ಮೊಟಕಾಗುತ್ತಿವೆ ಎಂದರು.

    ಜಿಲ್ಲಾಧ್ಯಕ್ಷ ಸುರೇಶ ಬಾಬು ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳಿಂದಾಗಿಯಿಂದಾಗಿ ಇಂದು ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಜಾರಿ ಕೈಬಿಡದಿದ್ದರೆ ಹೋರಾಟ ಅನಿವಾರ‌್ಯವೆಂದರು. ಹಮಾಲರ ಸಂಘಟನೆ ಅಧ್ಯಕ್ಷ ಬಸವರಾಜಪ್ಪ ಮಾತನಾಡಿದರು. ರಮೇಶ್,ಟಿ.ಆರ್.ಉಮಾಪತಿ. ಜಾಫರ್,ರಾಜಪ್ಪ,ಸತ್ಯಕೀರ್ತಿ ಮತ್ತಿತರ ಪ್ರಮುಖರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts