More

    ಉಸಿರಿರುವ ತನಕ ಬಗರ್‌ಹುಕುಂ ರೈತರ ಒಕ್ಕಲೆಬ್ಬಿಸಲು ಬಿಡಲ್ಲ; ಯಾವ ಕಾರಣಕ್ಕೂ ಅನ್ನದಾತರ ಬಿಟ್ಟು ಕೊಡಲ್ಲ: ಬಿ.ವೈ.ರಾಘವೇಂದ್ರ

    ಶಿಕಾರಿಪುರ: ಯಾವ ಕಾರಣಕ್ಕೂ ನಮ್ಮ ಉಸಿರಿರುವವರೆಗೆ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ನಿಮಿತ್ತ ಸೇವಾ ಪಾಕ್ಷಿಕದಡಿ ಶುಕ್ರವಾರ ದೊಡ್ಡಜೋಗಿಹಳ್ಳಿ ಬಿದರಕಟ್ಟೆ ಕೆರೆಯ ದಂಡೆಯ ಮೇಲೆ ಅರಳಿ ಸಸಿ ನೆಟ್ಟು ಅವರು ಮಾತನಾಡಿ, ನ್ಯಾಯಾಲಯದ ಆದೇಶವನ್ನು ಮೀರಿ ಯಾರೂ ಏನೂ ಮಾಡಲು ಬರುವುದಿಲ್ಲ , ಹಾಗಂತ ರೈತರನ್ನು ಒಕ್ಕಲೆಬ್ಬಿಸಲು ಮುಂದಾದರೆ ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದರು.
    ಗೊಬ್ಬರ ಮತ್ತು ವಿವಿಧ ಸಬ್ಸಿಡಿಗಳಿಗಾಗಿ ಕೇಂದ್ರ ಸರ್ಕಾರ ಮೂರು ತಿಂಗಳಿಗೊಮ್ಮೆ 2 ಲಕ್ಷ ಕೋಟಿ ರೂ. ಅನುದಾನ ನೀಡುತ್ತಿದೆ. ಪ್ರತಿವರ್ಷ ರೈತರ ಖಾತೆಗೆ ಕೇಂದ್ರ ಸರ್ಕಾರ 6,000 ರೂ. ನೀಡಿದರೆ, ಬಿಎಸ್‌ವೈ ಅಧಿಕಾರದ ಸಮಯದಲ್ಲಿ ಅದಕ್ಕೆ 4,000 ರೂ. ಸೇರಿಸಿ ಜಮಾ ಮಾಡಲಾಯಿತು. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.
    ತಾಲೂಕಿನಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನೀರು ಪೂರೈಸುವ ಕಾರ್ಯ ನಡೆದಿದೆ. ಶುದ್ಧ ಕುಡಿಯುವ ನೀರು ನಮ್ಮ ಆದ್ಯತೆಯಾಗಿದೆ. ಪರಿಸರ ನಾಶದಿಂದ ಕಾಲ ಕಾಲಕ್ಕೆ ಮಳೆ ಬೆಳೆಯಾಗದೆ ರೈತರಿಗೆ ತೊಂದರೆಯಾಗುತ್ತಿದೆ. ಗಿಡಗಳನ್ನು ನೆಟ್ಟು, ಉಳಿಸ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕು. ಪರಿಸರ ಉಳಿದರೆ ನಾವು, ಎಲ್ಲರೂ ಒಟ್ಟಾಗಿ ಸ್ವಚ್ಛ ಸುಂದರ ಸ್ವಾಸ್ಥ್ಯ ಪೂರ್ಣ ಆರೋಗ್ಯ ನಿರ್ಮಾಣ ಮಾಡೋಣ. ಬಡವರಿಗೆ ಉಚಿತ ಎಲ್ಪಿಜಿ ಸೌಲಭ್ಯ ನೀಡುವ ಮೂಲಕ ನಮ್ಮ ತಾಯಂದಿರು ಕಟ್ಟಿಗೆ ಒಲೆಯ ಹೊಗೆಯಿಂದ ಒದ್ದಾಡುವದನ್ನು ಕೇಂದ್ರ ಸರ್ಕಾರ ತಪ್ಪಿಸಿದೆ ಎಂದು ಹೇಳಿದರು.
    ಪ್ರತಿ ಕೆರೆಗೆ ತಲಾ 10 ಲಕ್ಷ ರೂ.: ಪ್ರಧಾನಿ ಜನ್ಮೋತ್ಸವವನ್ನು ಸೇವಾ ಪಾಕ್ಷಿಕ ಎಂದು ಆಚರಿಸಲಾಗುತ್ತಿದ್ದು ವೃಕ್ಷರಾಜ ಅರಳಿ ಸಸಿ ನೆಡುತ್ತಿರುವುದು ಸಂತಸದ ವಿಚಾರ ಎಂದು ಬಿ.ವೈ.ರಾಘವೇಂದ್ರ ಹೇಳಿದರು. 75ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಸುವರ್ಣ ಸರೋವರ ಯೋಜನೆ ಅಡಿಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 75 ಕೆರೆಗಳನ್ನು ಆಯ್ಕೆ ಮಾಡಿಕೊಂಡಿದ್ದು ತಾಲೂಕಿನ 10 ಕೆರೆಗಳನ್ನು ಗುರುತಿಸಲಾಗಿದೆ. ಪ್ರತಿ ಕೆರೆಯ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನವನ್ನು ಕೇಂದ್ರ ನೀಡಲಿದೆ. ಕೃಷಿಗೆ ಎಂದಿಗೈ ಕೆರೆ-ಕಟ್ಟೆಗಳೆ ಆಧಾರ. ಕೆರೆಗಳು ಉಳಿದರೆ ರೈತ ಉಳಿದಂತೆ. ಕೆರೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವು ಮುಂದಾಗಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts