More

    ಉಳ್ಳಾಗಡ್ಡಿ ಬೆಳೆಗೆ ಹಳದಿ ರೋಗ

    ಮುಂಡರಗಿ: ಆಗಾಗ ಸುರಿಯುತ್ತಿರುವ ಮಳೆಗೆ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದೆ. ಇದರಿಂದ ತಾಲೂಕಿನಲ್ಲಿ ಉಳ್ಳಾಗಡ್ಡಿ ಬೆಳೆಗೆ ವಿವಿಧ ರೋಗ ಕಾಣಿಸಿಕೊಳ್ಳುತ್ತಿದ್ದು ರೈತರು ಕಂಗಾಲಾಗಿದ್ದಾರೆ.

    ತಾಲೂಕಿನ ಡೋಣಿ, ಡಂಬಳ ಮೊದಲಾದ ಕಡೆಗಳಲ್ಲಿ ನಿರಂತರವಾಗಿ ಆಗಾಗ ಮಳೆ ಸುರಿಯುತ್ತಿದೆ. ತೇವಾಂಶ ಹೆಚ್ಚಳವಾಗಿ ಉಳ್ಳಾಗಡ್ಡಿ ಬೆಳೆಯಲ್ಲಿ ನೆರಳೆ ಎಲೆ ಮಚ್ಚೆರೋಗ, ಸುಳಿತಿರುಪು ರೋಗ ಹಾಗೂ ಹಳದಿ ರೋಗ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ರೋಗ ಬಾಧೆಯಿಂದ ಕೆಲವೆಡೆ ಬೆಳೆಯಲ್ಲ ನೆಲಕಚ್ಚಿದೆ.

    ತಾಲೂಕಿನಲ್ಲಿ ಅಂದಾಜು 4 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆ ಬೆಳೆಯಲಾಗಿದೆ. ರೈತರು ಪ್ರತಿ ಎಕರೆ ಉಳ್ಳಾಗಡ್ಡಿ ಬೆಳೆಯಲು ಬೀಜ, ಗೊಬ್ಬರ, ಔಷಧ, ಕೂಲಿ ಸೇರಿ 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೆ, ಈಗ ಉಳ್ಳಾಗಡ್ಡಿ ಬೆಳೆಯಲ್ಲಿ ರೋಗ ಕಾಣಿಸಿಕೊಳ್ಳುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

    ರೋಗಬಾಧೆಯಿಂದಾಗಿ ಉಳ್ಳಾಗಡ್ಡಿ ಬೆಳೆಯಲ್ಲ ನೆಲಕಚ್ಚುತ್ತಿದೆ. ಪ್ರತಿ ಎಕರೆಗೆ 30 ರಿಂದ 40 ಸಾವಿರ ರೂ. ಖರ್ಚು ಮಾಡಿ ಬೆಳೆದ ಬೆಳೆ ನಾಶವಾಗುತ್ತಿರುವುದು ಚಿಂತೆಗೆ ದೂಡಿದೆ. ಔಷಧ ಸಿಂಪಡಿಸಿದರೂ, ರೋಗ ನಿಯಂತ್ರಣವಾಗುತ್ತಿಲ್ಲ. ಪ್ರತಿ ಎಕರೆಯಲ್ಲಿ ಅರ್ಧದಷ್ಟು ಬೆಳೆ ಈಗಾಗಲೇ ನಾಶವಾಗಿದೆ.
    | ಬಸಪ್ಪ ಹರ್ತಿ, ಸುರೇಶ ಗಡಗಿ ಉಳ್ಳಾಗಡ್ಡಿ ಬೆಳೆಗಾರರು

    ಡೋಣಿ, ಡಂಬಳ ಮತ್ತಿತರ ಕಡೆಗಳಲ್ಲಿ ಉಳ್ಳಾಗಡ್ಡಿ ಬೆಳೆಗೆ ನೆರಳೆ ಎಲೆ ಮಚ್ಚೆರೋಗ ಹಾಗೂ ಸುಳಿತಿರುಪು ರೋಗ ಕಾಣಿಸಿಕೊಳ್ಳುತ್ತಿದೆ. ಹೊಲಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಲಾಗಿದೆ. 0.3 ಗ್ರಾಂ ಥೈಯೊಮೆಥೋಕ್ಸಾಮ್ ಅಥವಾ ಆಸೆಟಾ ಮಾಪ್ರೀಡ್ ಮತ್ತು 1ಮೀ.ಲಿ. ಹೆಕ್ಸಾಕೊನಾಜೋಲ್, 2 ಗ್ರಾಂ ಬೊರಾನ್ ಅನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ ಉಳ್ಳಾಗಡ್ಡಿ ಬೆಳೆಗೆ ಸಿಂಪಡಣೆ ಮಾಡಬೇಕು. ಅಲ್ಲದೆ 7 ರಿಂದ 10 ಗ್ರಾಂ ಪೋಟ್ಯಾಸಿಯಂ ನೈಟ್ರೇಟ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಬೆಳೆಗೆ ಸಿಂಪಡಣೆ ಮಾಡುವುದರಿಂದ ರೋಗ ತಡೆಗಟ್ಟಬಹುದು.
    | ವೈ.ಎಚ್. ಜಾಲವಾಡಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts