More

    ಉಲ್ಲಾಸವಾಗಿರಲು ಯೋಗಾಭ್ಯಾಸ ಸಹಕಾರಿ

    ಹೊಳೆನರಸೀಪುರ: ಮನಸ್ಸು ಸದಾ ಉಲ್ಲಾಸವಾಗಿರಲು ಯೋಗಾಭ್ಯಾಸ ಸಹಕಾರಿ ಎಂದು ನಾಗಮಂಗಲದ ಸ್ವಾಸ್ಥ್ಯಮಾರ್ಗ ಫೌಂಡೇಷನ್ ಸಂಸ್ಥಾಪಕರೂ ಆದ ಯೋಗ ಗುರು ಲಕ್ಷ್ಮಣ್ ಅಭಿಪ್ರಾಯಪಟ್ಟರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಸ್ವಾಸ್ಥ್ಯ ಜೀವನ ಮಾರ್ಗ ಯೋಗ ಪ್ರತಿಷ್ಠಾನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಗುರುವಾರ 10 ದಿನಗಳ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಅತಿ ಆಸೆಯಿಂದ ಅನಾಹುತಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ. ದುರಾಸೆಯನ್ನು ತೊರೆದು ಬದುಕುವುದರಿಂದ ತೃಪ್ತಿಯಿಂದ ಬಾಳಬಹುದು. ಅಸೂಯೆ, ದ್ವೇಷ ಮಾಡುವವರು ಹಾಳಾಗುತ್ತಾರೆ. ಕ್ರೌರ್ಯ ಮನಸ್ಸಿನಿಂದ ದೂರವಾಗಬೇಕು. ಸಕಾರಾತ್ಮಕ ಚಿಂತನೆಗಳು ಮನೆ ಮಾಡಬೇಕು. ಆಗ ಬದುಕು ಸುಂದರಮಯವಾಗಿರುತ್ತದೆ. ಆಧುನಿಕ ಜಗತ್ತಿನಲ್ಲಿ ಭೌತಿಕವಾಗಿ ಶರೀರದಲ್ಲಾಗುವ ಬದಲಾವಣೆಗಳಿಗೆ ನಾವೇ ಕಾರಣರು. ಬದುಕುವ ದಾರಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಆದ್ದರಿಂದ ಮೋಕ್ಷವಿದ್ಯೆ ಯೋಗ. ಯೋಗ ಮಾಡುವುದರಿಂದ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು ಎಂದು ತಿಳಿಸಿದರು.

    ಕಾಲೇಜಿನ ಸಂಯೋಜಕ ವಿಜಯಕುಮಾರ್ ಮಾತನಾಡಿ, ದೇಹ ಹಾಗೂ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗ ಸುಲಭ ಮಾರ್ಗ ಎಂದರು.

    ಪ್ರಾಂಶುಪಾಲ ಎಸ್.ಕಿರಣ್ ರಾವತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹ ಪ್ರಾಧ್ಯಾಪಕ ಲಕ್ಷ್ಮಣ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಚ್.ವಿ.ಸುರೇಶ್ ಕುಮಾರ್, ಎಚ್.ಎಸ್.ಸುದರ್ಶನ್, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಯಪ್ರಕಾಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts