More

    ಉಪದೇಶದಿಂದ ನೆಮ್ಮದಿಯ ಜೀವನ

    ಬೈಲಹೊಂಗಲ: ಗುರು ಮಡಿವಾಳೇಶ್ವರರು ಪವಾಡಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದು ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಹೇಳಿದರು.
    ಪಟ್ಟಣದ ಗುರು ಮಡಿವಾಳೇಶ್ವರ ಮಠದ 32ನೇ ಜಾತ್ರಾ ಮಹೋತ್ಸವ ಮತ್ತು ಶಿವಶರಣೆ ತಂಗೆಮ್ಮ ತಾಯಿ ಅವರ 77ನೇ ಜಯಂತಿ ನಿಮಿತ್ತ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನ ಕಲ್ಯಾಣ ಪುರಾಣ ಉದ್ಘಾಟಿಸಿ ಅವರು ಮಾತನಾಡಿದರು.

    ಮಡಿವಾಳೇಶ್ವರ ಮಠ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಮಡಿವಾಳೇಶ್ವರರ ಉಪದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ನೆಮ್ಮದಿ ಸಾಧ್ಯ ಎಂದರು.
    ಗುರು ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಬುಡರಕಟ್ಟಿ ಮಡಿವಾಳೇಶ್ವರ ಮಠದ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಉತ್ತಮ ಗುರುವಿನಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡುವ ಮೂಲಕ ಧಾರ್ಮಿಕ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

    ಹಿರೇಬಾಗೇವಾಡಿ ನಿಶ್ಚಲ ಸ್ವರೂಪಾನಂದ ಸ್ವಾಮೀಜಿ ಮಾತನಾಡಿದರು. ರುದ್ರಪ್ಪ ಹೂಗಾರ, ಮಲ್ಲಿಕಾರ್ಜುನ ಚಿಕ್ಕಮಠ ಸಂಗೀತ ಕಾರ್ಯಕ್ರಮ ನಡೆಸಿದರು. ಸಣ್ಣಬಸಪ್ಪ ಕುಡಸೋಮಣ್ಣವರ, ಚಂದ್ರಪ್ಪ ಗುಂಡ್ಲೂರ, ಮಹಾಂತೇಶ ಅಕ್ಕಿ, ಈಶ್ವರ ಕೊಪ್ಪದ, ಗಂಗಪ್ಪ ತುರಮರಿ, ಉಮೇಶ ಬೊಳನ್ನವರ, ಗಂಗಪ್ಪ ತೋಟಗಿ, ರುದ್ರಪ್ಪ ತುರಮರಿ, ಮಹಾಂತೇಶ ಹಣಸಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts