More

    ಉತ್ಸವದಲ್ಲಿ ಗುಣಮಟ್ಟದ ದೋಸೆ ವಿತರಿಸಿ – ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸೂಚನೆ 

    ದಾವಣಗೆರೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾವಣಗೆರೆ ಬೆಣ್ಣೆ ದೋಸೆಯನ್ನು ಜನಪ್ರಿಯಗೊಳಿಸುವ ಉದ್ದೇಶದಡಿ ಡಿ.23ರಿಂದ ಮೂರು ದಿನಗಳ ಕಾಲ ನಗರದಲ್ಲಿ ದೋಸೆ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಹೋಟೆಲ್ ಮಾಲೀಕರು ಗ್ರಾಹಕರಿಗೆ ಗುಣಮಟ್ಟದ ದೋಸೆಗಳನ್ನು ವಿತರಿಸಬೇಕು ಎಂದು
    ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೋಸೆ ಉತ್ಸವ ಸಂಬಂಧ ಶನಿವಾರ, ಬೆಣ್ಣೆದೋಸೆ ಹೋಟೆಲ್ ಮಾಲೀಕರೊಂದಿಗೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ದಾವಣಗೆರೆ ಬೆಣ್ಣೆದೋಸೆಗೆ ಬ್ರ್ಯಾಂಡಿಂಗ್ ನೀಡಲೆಂದು ನಗರದ ಬಾಪೂಜಿ ಎಂಬಿಎ ಮೈದಾನ ಮತ್ತು ಗಾಜಿನ ಮನೆ ಎದುರು ಈ ಉತ್ಸವ ಆಯೋಜಿಸಲಾಗಿದೆ. ನಿತ್ಯ ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಲಿದೆ. ಒಂದು ಬೆಣ್ಣೆ ದೋಸೆಗೆ 60 ರೂ., 1 ಪ್ಲೇಟ್ ಖಾಲಿ ದೋಸೆಗೆ 60 ರೂ. ನಿಗದಿಪಡಿಸಲಾಗಿದೆ. ದೋಸೆ ಹೋಟೆಲ್ ಮಾಲೀಕರು ಒತ್ತಡಕ್ಕೆ ಒಳಗಾಗದೇ ಸುಲಭ ವಿಧಾನ ಅನುಸರಿಸಬೇಕು. ಟೋಕನ್ ವ್ಯವಸ್ಥೆ ಮಾಡಿಕೊಳ್ಳಬೇಕು.
    ಡಿ.23, 24 ರಂದು ವೀರಶೈವ ಅಧಿವೇಶ ಇರುವ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ಅರೆಬರೆ ಬೇಯಿಸಿದ ದೋಸೆಗಳನ್ನು ನೀಡಬಾರದು. ದೋಸೆ ಮಳಿಗೆಗಳಲ್ಲಿ ಶುದ್ಧ್ದ ಕುಡಿಯುವ ನೀರು, ಕಸದ ಡಬ್ಬಿಗಳ ವ್ಯವಸ್ಥೆ ಮಾಡಿ ಶುಚಿತ್ವ ಕಾಪಾಡಿಕೊಳ್ಳಬೇಕೆಂದರು.
    ಹೋಟೆಲ್ ಮಾಲೀಕರು ತ್ಯಾಜ್ಯ ಪದಾರ್ಥಗಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡಬೇಕು. ದೋಸೆ ತಯಾರಿಕೆಯಲ್ಲಿ ರಾಸಾಯನಿಕಗಳನ್ನು ಬಳಸಬಾರದು. ಸಂಬಂಧಿಸಿದ ಅಧಿಕಾರಿಗಳು ದೋಸೆಯ ಗುಣಮಟ್ಟ, ದೋಸೆಯ ರುಚಿ ತಪಾಸಣೆ, ಸ್ಟಾಲ್ಗಳ ವ್ಯವಸ್ಥೆಗಳನ್ನು ಸೂಕ್ಷ್ಮ್ಮವಾಗಿ ಪರಿಶೀಲಿಸಬೇಕು.
    ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸಿದ್ದರಾಮ ಮರಿಹಾಳ್, ತಹಸೀಲ್ದಾರ್ ಡಾ.ಎಂ.ಬಿ ಅಶ್ವತ್ಥ್, ಡಿಎಚ್‌ಒ ಡಾ.ಎಸ್.ಷಣ್ಮುಖಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಹೋಟೆಲ್ ಮಾಲೀಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts