More

    ಉತ್ತರ ಕನ್ನಡ ಮಹಿಳಾ ಜಟ್ಟಿಗಳ ಪಾರಮ್ಯ

    ಧಾರವಾಡ: 4 ದಿನಗಳಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ಕರ್ನಾಟಕ ಕುಸ್ತಿ ಹಬ್ಬದ ಮಹಿಳಾ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಪಟುಗಳು ಪಾರಮ್ಯ ಮೆರೆದರು.

    ಮಂಗಳವಾರ ನಡೆದ ಪ್ರತಿಷ್ಠಿತ ಪದಕಗಳಿಗಾಗಿ ತೀವ್ರ ಪೈಪೋಟಿ ಇತ್ತು. ಮಹಿಳೆಯರ 59-76 ಕೆಜಿ ವಿಭಾಗದ ಅತ್ಯುನ್ನತ ಪುರಸ್ಕಾರವಾದ ಮಹಿಳಾ ಕರ್ನಾಟಕ ಕೇಸರಿ ಪ್ರಶಸ್ತಿಗಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಲೀನಾ ಸಿದ್ದಿ ಹಾಗೂ ಗದಗನ ಶ್ವೇತಾ ಅವರ ಮಧ್ಯೆ ತುರುಸಿನ ಪಂದ್ಯ ನಡೆಯಿತು. ಕೇವಲ 7 ನಿಮಿಷದಲ್ಲಿ ಶ್ವೇತಾ ಅವರನ್ನು ಚಿತ್ ಮಾಡಿದ ಲೀನಾ ಮಹಿಳಾ ಕರ್ನಾಟಕ ಕೇಸರಿಯಾಗಿ ಹೊರಹೊಮ್ಮಿದರು. ಈ ಮೂಲಕ 1.50 ಲಕ್ಷ ರೂ. ನಗದು ತಮ್ಮದಾಗಿಸಿಕೊಂಡರು. ಶ್ವೇತಾ ದ್ವಿತೀಯ ಸ್ಥಾನಿಯಾಗಿ 1 ಲಕ್ಷ ರೂ. ಪಡೆದರು. ಇನ್ನು 14 ವಯೋಮಿತಿಯ ಬಾಲಕಿಯರ 46 ಕೆಜಿ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಶ್ವೇತಾ ಅನ್ನಿಕೇರಿ, ಬೆಳಗಾವಿಯ ಸ್ವಾತಿ ಅವರನ್ನು 4-0 ಅಂಕಗಳಿಂದ ಸೋಲಿಸಿ ಬಾಲಕೇಸರಿ ಪ್ರಶಸ್ತಿ ಪಡೆದುಕೊಂಡರು. 50,000 ರೂ. ನಗದು ಬಹುಮಾನ ವಿಜೇತರ ಪಾಲಾಯಿತು. 32,500 ನಗದು ಪುರಸ್ಕಾರಕ್ಕೆ ಭಾಜನರಾದರು. 17 ವಯೋಮಿತಿಯ ಬಾಲಕಿಯರ 53ಕೆಜಿ ವಿಭಾಗದಲ್ಲಿ ಹಳಿಯಾಳದ ಶಾಲಿನಿ ಸಿದ್ದಿ ಅವರು ತಮ್ಮ ಎದುರಾಳಿ ಗಾಯತ್ರಿ ತಾಳೆ ಅವರನ್ನು 6-2 ಅಂಕಗಳಿಂದ ಮಣಿಸಿ ಕರ್ನಾಟಕ ಕಿಶೋರಿ ಪ್ರಶಸ್ತಿ ಪಡೆದರು. 75,000 ರೂ. ನಗದು ಗೆದ್ದರೆ, ಗಾಯತ್ರಿ 50,000 ರೂ. ನಗದು ಬಹುಮಾನ ಪಡೆದರು. 14 ವಯೋಮಿತಿಯ ಬಾಲಕರ 52 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಆದರ್ಶ ತೊಡದಾರ ಹಾಗೂ ಧಾರವಾಡದ ಸಚಿನ್ ನಡುವೆ ಬಿರುಸಿನ ಪೈಪೋಟಿ ನಡೆದು 6.3 ನಿಮಿಷದಲ್ಲಿ ಸಚಿನ್ ಅವರನ್ನು ಚಿತ್ ಮಾಡಿದ ಆದರ್ಶ ತೋಡದಾರ ಬಾಲಕೇಸರಿಯಾಗಿ ಹೊರಹೊಮ್ಮಿದರು. ಪ್ರಶಸ್ತಿ ಜತೆ 50,000 ರೂ. ನಗದು ಪಡೆದರು. 32,500 ರೂ. ಗೆ ಆದರ್ಶ ತೃಪ್ತಿಪಟ್ಟರು. 17 ವಯೋಮಿತಿಯ ಬಾಲಕರ 60 ಕೆಜಿ ವಿಭಾಗದಲ್ಲಿ ಬೆಳಗಾವಿಯ ಮಹೇಶ ಲಂಗೋಟಿ ಕರ್ನಾಟಕ ಕಿಶೋರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ವಿಜೇತರು 75000 ರೂ. ನಗದು ಹಾಗೂ ಚಿನ್ನದ ಪದಕ, ದ್ವಿತೀಯ ಸ್ಥಾನಿ ಸಂಜೀವ ಕೊರವರ 50000 ರೂ. ಹಾಗೂ ಬೆಳ್ಳಿ ಪದಕ ಪಡೆದರು. ಇದೇ ವಿಭಾಗದಲ್ಲಿ ದಾವಣಗೆರೆಯ ಸಿದ್ದು ಎಸ್.ಟಿ. ಹಾಗೂ ಬಾಗಲಕೋಟೆಯ ಆನಂದ ಕೆ.ಎಚ್. ತೃತೀಯ ಸ್ಥಾನ ಗಳಿಸಿ 25,000 ರೂ. ನಗದು ಪುರಸ್ಕಾರ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts