More

    ಉತ್ತರ ಕನ್ನಡ ಜಿಲ್ಲೆ ಇಬ್ಭಾಗಕ್ಕೆ ಪೂರ್ಣ ಸಹಮತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡಿ ಶಿರಸಿ ಜಿಲ್ಲೆಯನ್ನು ರಚಿಸಲು ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಅತಿ ದೊಡ್ಡದಿದೆ. ಇದರಿಂದ ಸರ್ಕಾರದಿಂದ ಬರುವ ಅನುದಾನ ಕಡಿಮೆಯಾಗುತ್ತದೆ. ಅಲ್ಲದೆ, ಜಿಲ್ಲೆಯ ಘಟ್ಟದ ಮೇಲಿನ ಹಾಗೂ ಘಟ್ಟದ ಕೆಳಗಿನ ಪ್ರದೇಶಗಳು ವಿಭಿನ್ನ ಭೌಗೋಳಿಕ ಪರಿಸ್ಥಿತಿ ಹೊಂದಿವೆ. ಅಧಿಕಾರಿಗಳು, ಜನಪ್ರತಿನಿಧಿಗಳ ಓಡಾಟಕ್ಕೆ ಕಷ್ಟ. ಇದರಿಂದ ಶಿರಸಿ ಜಿಲ್ಲೆ ರಚನೆಯಾದಲ್ಲಿ ಉತ್ತಮವಾಗಲಿದೆ. ಅವಿಭಜಿತ ದಕ್ಷಿಣ ಕನ್ನಡ ಇಬ್ಭಾಗವಾದ ನಂತರ ಎರಡೂ ಜಿಲ್ಲೆಗಳ ಅಭಿವೃದ್ಧಿಯ ಓಘ ಹೆಚ್ಚಿದೆ. ಅದೇ ರೀತಿ ಜಿಲ್ಲೆ ಅಭಿವೃದ್ಧಿಯಾಗಬೇಕು ಎಂದರೆ ಜಿಲ್ಲೆಯನ್ನು ಒಡೆಯಬೇಕು ಎಂದರು.

    ಸದ್ಯ ಜೆಡಿಎಸ್​ನಲ್ಲೇ ಇದ್ದೇನೆ: ನಾನು ಸದ್ಯ ಜೆಡಿಎಸ್​ನಲ್ಲೇ ಇದ್ದೇನೆ. ಆದರೆ, ಉತ್ತರ ಕನ್ನಡದಲ್ಲಿ ಜೆಡಿಎಸ್​ನ ಬೇರು ಗಟ್ಟಿಯಾಗಿಲ್ಲ. ಪಕ್ಷದ ನಾಯಕರು ಹಳೆಯ ಮೈಸೂರು ಭಾಗವನ್ನು ಮಾತ್ರ ಕೇಂದ್ರೀಕರಿಸಿದರೆ ಸಾಲದು. ರಾಜ್ಯದ ಇತರೆಡೆಯೂ ಪಕ್ಷ ಬೆಳೆಯಬೇಕು ಎಂದರೆ, ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿ ಎರಡು ತಿಂಗಳಿಗೆ ಜಿಲ್ಲೆಗೆ ಬಂದು ಸಭೆ ನಡೆಸಬೇಕು. ಶಿರಾ ಉಪಚುನಾವಣೆಯ ನಂತರ ಎಚ್.ಡಿ. ಕುಮಾರಸ್ವಾಮಿ ಅವರ ಜತೆ ರ್ಚಚಿಸುತ್ತೇನೆ. ಅವರಿಂದ ಸಹಕಾರ ದೊರೆಯದೇ ಇದ್ದರೆ ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ಚಿಂತನೆ ನಡೆಸುತ್ತೇನೆ. ಮಧು ಬಂಗಾರಪ್ಪ ಅವರ ಜತೆ ಕಾಂಗ್ರೆಸ್​ಗೆ ಹೋಗುವ ಬಗ್ಗೆ ಇನ್ನೂ ಯಾವುದೇ ಮಾತುಕತೆಯಾಗಿಲ್ಲ ಎಂದು ಆನಂದ ಅಸ್ನೋಟಿಕರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts