More

    ಉತ್ತಮ ಸಮಾಜ ನಿಮರ್ಾಣಕ್ಕೆ ಕೈಜೋಡಿಸಿ

    ಬಸವಕಲ್ಯಾಣ: ಬುದ್ಧ, ಬಸವ ಹಾಗೂ ಡಾ.ಅಂಬೇಡ್ಕರ್ ತತ್ವ, ಸಂದೇಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹನೀಯರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಉತ್ತಮ ಸಮಾಜ ನಿಮರ್ಾಣದಲ್ಲಿ ಕೈಜೋಡಿಸಬೇಕಿದೆ ಎಂದು ಗುವಿವಿ ಕುಲಸಚಿವ ಡಾ.ವಿ.ಟಿ.ಕಾಂಬಳೆ ಹೇಳಿದರು.

    ಗುಲ್ಬರ್ಗ ವಿಶ್ವವಿದ್ಯಾಲಯ, ಇಲ್ಲಿಯ ಶರಣ ಸಾಹಿತ್ಯ ಗ್ರಂಥಾಲಯ ಹಾಗೂ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಕಕ ಗ್ರಂಥಪಾಲಕರ ಸಂಘ, ಭಾರತೀಯ ಗ್ರಂಥಪಾಲಕರ ಸಂಘ, ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಮತ್ತು ರಾಜೀವ್ ಗಾಂಧಿ ಪ್ರಥಮ ದಜರ್ೆ ಕಾಲೇಜು ಸಹಯೋಗದೊಂದಿಗೆ ಗುರುವಾರ ನಗರದ ಶರಣ ಸಾಹಿತ್ಯ ಗ್ರಂಥಾಲಯ ಮತ್ತು ಸಂಪನ್ಮೂಲ ಕೇಂದ್ರದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮತ್ತು ಗ್ರಂಥಾಲಯಗಳು ವಿಷಯ ಕುರಿತ ರಾಷ್ಟ್ರೀಯ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

    ಗ್ರಂಥಾಲಯಗಳು ಜ್ಞಾನ ದೇಗುಲಗಳಿದ್ದಂತೆ. ಜ್ಞಾನ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿರುವ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಶ್ರಮವಹಿಸಿ ಓದುವ ಮೂಲಕ ಸಾಧನೆ ಮಾಡಬೇಕು ಎಂದು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.

    ತಹಸೀಲ್ದಾರ್ ಸಾವಿತ್ರಿ ಸಲಗರ ಮಾತನಾಡಿ, ಶರಣ ಸಾಹಿತ್ಯ ಕೇಂದ್ರದ ಗ್ರಂಥಾಲಯದಲ್ಲಿ ವಿದ್ಯಾಥರ್ಿಗಳಿಗೆ ಸ್ಪಧರ್ಾತ್ಮಕ ಪರೀಕ್ಷೆಗಳ ಅನುಕೂಲಕ್ಕಾಗಿ ಸ್ಪಧರ್ಾತ್ಮಕ ಪರೀಕ್ಷಾ ವಿಭಾಗ ತೆರೆಯುವ ಸಂಬಂಧ ಅಗತ್ಯವಿರುವ ಪುಸ್ತಕಗಳ ಪಟ್ಟಿ ನೀಡಿದರೆ ಮೇಲಧಿಕಾರಿಗಳೊಂದಿಗೆ ಚಚರ್ಿಸಿ ಪುಸ್ತಕ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

    ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಡಿ.ಬಿ.ಪಾಟೀಲ್, ಡಾ.ಚಿತ್ರಶೇಖರ ಚಿರಳ್ಳಿ ಮಾತನಾಡಿದರು. ಜಿಲ್ಲಾ ಮುಖ್ಯ ಗ್ರಂಥಪಾಲಕ ಸಿದ್ಧಾರ್ಥ ಭಾವಿಕಟ್ಟಿ, ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಪ್ರಾಚಾರ್ಯ ಡಾ.ಬಳಿರಾಮ ಹುಡೆ, ರಾಜೀವ ಗಾಂಧಿ ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾಜರ್ುನ ಜಾಬಾ ಉಪಸ್ಥಿತರಿದ್ದರು. ಕಲ್ಯಾಣ ಕನರ್ಾಟಕ ಗ್ರಂಥಪಾಲಕರ ಸಂಘದ ಅಧ್ಯಕ್ಷ ಡಾ.ಸುರೇಶ ಜಂಗೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ದೀಪಕಕುಮಾರ ಗೌಡ ಸ್ವಾಗತಿಸಿದರು. ಸಹಸಂಯೋಜಕ ಡಾ.ರಾಜಕುಮಾರ ಮೌರ್ಯ ವಂದಿದರು. ಕಕ ಗ್ರಂಥಪಾಲಕರ ಸಂಘದ ಕಾರ್ಯದಶರ್ಿ ಡಾ.ಸಾವಿತ್ರಿ ಕೃಷ್ಣ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts