More

    ಉತ್ತಮ ಸಂಸ್ಕಾರದಿಂದ ಬದುಕು ಸುಂದರ

    ಸವಣೂರ: ಪಾಲಕರು ಉತ್ತಮ ಸಂಸ್ಕಾರ ನೀಡಿದಲ್ಲಿ ಮಾತ್ರ ಮಕ್ಕಳ ಬದುಕು ಸುಂದರವಾಗಿರಲು ಸಾಧ್ಯ ಎಂದು ಪದ್ಮಶ್ರೀ ಇಬ್ರಾಹಿಂ ಸುತಾರ ತಿಳಿಸಿದರು.

    ತಾಲೂಕಿನ ಗೋನಾಳ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಗೋಪುರ ಹಾಗೂ ಮಹಾದ್ವಾರ ಭೂಮಿಪೂಜೆ ಅಂಗವಾಗಿ ಸೋಮವಾರ ಆರಂಭಗೊಂಡ ಬಸವ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರತಿ ತಾಯಿ ಮಗುವಿಗೆ ವಿದ್ಯೆ, ಧೈರ್ಯ, ಚಾರಿತ್ರ್ಯ ಧರ್ಮ ಎಂಬ ನಾಲ್ಕು ಸಂಪತ್ತನ್ನು ನೀಡಿದಲ್ಲಿ ಉತ್ತಮ ಸಮಾಜ ನಿರ್ವಣವಾಗಲು ನಾಂದಿಯಾಗಲಿದೆ. ತಪ್ಪಿದಲ್ಲಿ ಮಕ್ಕಳು ಮಾಡುವ ಪ್ರತಿ ಹಂತದ ಪಾಪದ ಕಾರ್ಯಕ್ಕೆ ತಾಯಿ ನೇರವಾಗಿ ಕಾರಣವಾಗುತ್ತಾಳೆ. ಮಕ್ಕಳು ತಪ್ಪು ಮಾಡಿದ ತಕ್ಷಣ ತಾಯಿ ತಿದ್ದಿ, ಬುದ್ಧಿ ಹೇಳಿದಲ್ಲಿ ಮತ್ತೊಮ್ಮೆ ತಪ್ಪು ನಡೆಯದಂತೆ ಮಗು ಎಚ್ಚರಿಕೆ ವಹಿಸುತ್ತದೆ. ಮಕ್ಕಳು, ರೈತರು ಆತ್ಮಹತ್ಯೆಗೆ ಶರಣಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು. ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಬಸವ ಪುರಾಣ ಪ್ರವಚನ ನೀಡಿ, 12ನೇ ಶತಮಾನದ ಶರಣರ ವಾಣಿಯಂತೆ ಸರ್ವರನ್ನು ಸಮಾನತೆಯಿಂದ ಕಾಣುವಂತಾಗಲು ನಿರಂತರ ಪ್ರಯತ್ನ ಕೈಗೊಳ್ಳುವುದು ಅವಶ್ಯವಾಗಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ ಮಾತನಾಡಿ, ಸಾಮಾನ್ಯ ಮನುಷ್ಯನನ್ನು ಶರಣನನ್ನಾಗಿ ಪರಿವರ್ತಿಸುವ ಶಕ್ತಿ ಬಸವ ಪುರಾಣಕ್ಕಿದೆ ಎಂದರು. ಹಜರತ್ ಕಲಿಮುಲ್ಲಾ ಖಾದ್ರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ರಮೇಶ ದುಗ್ಗತ್ತಿ, ಎಸ್.ಎಸ್. ಶಿವಳ್ಳಿ ಮಾತನಾಡಿದರು. ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ, ಪುರಾಣ ಪ್ರವಚನ ಸಮಿತಿ ಪದಾಧಿಕಾರಿಗಳು, ಇತರರಿದ್ದರು. ಮಹೇಂದ್ರ ಬಡಿಗೇರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts