More

    ಉಡುತೊರೆ ಹಳ್ಳದ ಕಿರು ಸೇತುವೆಯನ್ನು ಮೇಲ್ಸೆತುವೆಯಾಗಿ ಪರಿವರ್ತಿಸಿ

    ಕೊರಮನಕತ್ತರಿ ಗ್ರಾಮಸ್ಥರ ಪ್ರತಿಭಟನೆ

    ಹನೂರು: ತಾಲೂಕಿನ ಕೊರಮನಕತ್ತರಿ ಗ್ರಾಮದ ಬಳಿಯಿರುವ ಉಡುತೊರೆ ಹಳ್ಳದ ಕಿರು ಸೇತುವೆಯನ್ನು ಮೇಲ್ಸೆತುವೆಯಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿ ಗುರುವಾರ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಮನಕತ್ತರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


    ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ಕೇಂದ್ರದಿಂದ ಬೂದಿಪಡಗ, ಕೊರಮನಕತ್ತರಿ ಹಾಗೂ ಒಡೆಯರಪಾಳ್ಯ ಮೂಲಕ ತಮಿಳು ನಾಡಿನ ಬಣ್ಣಾರಿ, ಸತ್ತಿಮಂಗಲಂ, ಕೊಯಮತ್ತೂರು, ಈರೋಡ್, ತಿರುಪ್ಪೂರು ಕಡೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಉಡುತೊರೆ ಹಳ್ಳವಿದೆ. ದಶಕದ ಹಿಂದೆ ಅಡ್ಡಲಾಗಿ ತಳಮಟ್ಟದ ಸೇತುವೆಯನ್ನು ನಿರ್ಮಿಸಲಾಗಿದ್ದು, ಸೇತುವೆ ಮೇಲೆ ಗುಂಡಿಗಳು ನಿರ್ಮಾಣವಾಗಿ ಸಂಪೂರ್ಣ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ನೀರು ರಭಸವಾಗಿ ಗಂಟೆಗಟ್ಟಲೇ ಹರಿಯುತ್ತದೆ. ಈ ವೇಳೆ ಸೇತುವೆ ದಾಟಲು ಸಾಧ್ಯವಿಲ್ಲ. ಇದರಿಂದ ಸಾರ್ವಜನಿಕರು, ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ರೈತರು ತೊಂದರೆ ಅನುಭವಿಸಬೇಕಿದೆ ಎಂದು ಪ್ರತಿಭಟನಾಕರರು ಕಿಡಿಕಾರಿದರು.


    ತಮಿಳುನಾಡಿನ ಮೇಟುಪಾಳ್ಯಂ ಮಾರುಕಟ್ಟೆಗೆ ತರಕಾರಿ ಕೊಂಡೊಯ್ಯುವ ಗೂಡ್ಸ್ ವಾಹನಗಳು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಪಿಡಬ್ಲೂೃಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ನೆಪಮಾತ್ರಕಷ್ಟೇ ತೇಪೆ: 20 ದಿನದ ಹಿಂದೆ ಈ ಭಾಗದಲ್ಲಿ ಉತ್ತಮ ಮಳೆಯಾಗಿತ್ತು. ಈ ಸಂದರ್ಭ ನೀರು ಸೇತುವೆಯ ಮೇಲೆ ಗಂಟೆಗಟ್ಟಲೇ ಹರಿದಿತ್ತು. ಇದರಿಂದ ರಸ್ತೆ ಮೇಲ್ಭಾಗದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿ ಸಂಚಾರಕ್ಕೆ ತೊಂದರೆಯಾಗಿತ್ತು. ಈ ವಿಚಾರವಾಗಿ ಪ್ರತಿಭಟನೆ ಮಾಡಲಾಗಿ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ನೆಪಮಾತ್ರಕ್ಕೆ ತೇಪೆ ಹಾಕಿಸಿದ್ದರು. ಆದರೆ ಇದೀಗ ಗುಂಡಿ ಸಮೀಪದಲ್ಲೇ ಮತ್ತೊಂದು ಗುಂಡಿ ಬಾಯ್ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts