More

    ಈಶ್ವರ ನಗರಕ್ಕೆ ಮೂಲ ಸೌಲಭ್ಯ ಒದಗಿಸಲು ಒತ್ತಾಯ

    ಲಕ್ಷ್ಮೇಶ್ವರ: ಪಟ್ಟಣದ ಈಶ್ವರ ನಗರದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸ್ಥಳೀಯರು ಪುರಸಭೆಗೆ ಬುಧವಾರ ಮನವಿ ಸಲ್ಲಿಸಿದರು.

    ಚರಂಡಿಗಳು ಇಲ್ಲದ ಕಾರಣ ನೀರು ರಸ್ತೆ ಮೇಲೆ ಹರಿಯುತ್ತದೆ. ಬಹುತೇಕ ರಸ್ತೆಗಳು ಹದಗೆಟ್ಟಿವೆ. ಬೇಸಿಗೆಯಲ್ಲಿ ಕೊರಕಲು ರಸ್ತೆಯಲ್ಲಿನ ಸಂಚಾರ, ಮಳೆಗಾಲದಲ್ಲಿ ಕೆಸರಿನಲ್ಲಿ ಓಡಾಟ ಸಾಮಾನ್ಯವಾಗಿದೆ. ಸುತ್ತಲಿನ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು, ಕಸ ಬೆಳೆದು ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಹಂದಿಗಳ, ತ್ಯಾಜ್ಯಗಳ ತಾಣವಾಗಿ ಮಾರ್ಪಟ್ಟಿವೆ. ರಸ್ತೆ, ಚರಂಡಿ, ಬೀದಿ ದೀಪ, ಶುದ್ಧ ಕುಡಿಯುವ ನೀರು, ಉದ್ಯಾನ ನಿರ್ಮಾಣ ಮತ್ತಿತರ ಸೌಲಭ್ಯ ಒದಗಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದರು.

    ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿ ಮುಖ್ಯಾಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ನಿವಾಸಿಗಳಾದ ಆರ್.ಸಿ. ಬಾಳಿಹಳ್ಳಿಮಠ, ಬಿ.ಎನ್. ರಾಟಿ, ಎನ್.ಸಿ. ಹೇಮಗಿರಿಮಠ, ಟಿ.ಆರ್. ನೆಗಳೂರ, ಎಂ.ಡಿ. ವಾಲ್ಮೀಕಿ, ಪಿ.ಎಚ್. ಕೊಂಡಾಬಿಂಗಿ, ವಿ.ಎಸ್. ಕಾಶೆಟ್ಟಿ, ಪ್ರವೀಣ ಆಲದಕಟ್ಟಿ, ಅರುಣ ದುರ್ಗದ, ರಮೇಶ ದುರ್ಗದ, ವೀರೇಂದ್ರ ಭಜಂತ್ರಿ, ಆರ್.ಬಿ. ಜೋಶಿ, ಆರ್.ಎಂ. ಕೋರಿ, ವಿ.ಎಸ್. ಹಿರೇಮಠ, ಎಸ್.ಐ. ಹಿರೇಮಠ, ಈರಣ್ಣ ಸಿಂಗಟಾಲೂರ, ನಿಂಗಪ್ಪ ಮಣ್ಣೂರ, ಕೊಟ್ಟೂರಶೆಟ್ಟರ, ರವಿ ರೋಣದ, ವೈ.ಎಫ್. ಮಾಗಡಿ, ಎಚ್.ಡಿ. ನಿಂಗರಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts