More

    ಈರಣ್ಣೇಶ್ವರ, ಸೋಮೇಶ್ವರ ಉತ್ಸವ ಸಂಪನ್ನ

    ಹುಣಸೂರು: ಈರಣ್ಣೇಶ್ವರ ಮತ್ತು ಸೋಮೇಶ್ವರ ದೇವರ ಉತ್ಸವವು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ದೇವರಲ್ಲಿ ಹರಕೆ ಹೊತ್ತವರು ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಂಡಿದ್ದಾರೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.

    ತಾಲೂಕಿನ ಬಿಳಿಕೆರೆ ಹೋಬಳಿ ಹೊಸರಾಮೇನಹಳ್ಳಿ ಗ್ರಾಮದಲ್ಲಿ ಈರಣ್ಣೇಶ್ವರ ಮತ್ತು ಸೋಮೇಶ್ವರ ದೇವರ ಹರಕೆ ಉತ್ಸವ ಮತ್ತು ದೀಪೋತ್ಸವ ನಾಲ್ಕು ದಿನಗಳ ಕಾಲ ನಡೆದು ಮಕರ ಸಂಕ್ರಾಂತಿಯಂದು ಸಂಪನ್ನಗೊಂಡಿತು.

    ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ದೇವರ ದರ್ಶನ ಪಡೆದು ಮಾತನಾಡಿ, ದೈವಭಕ್ತಿ ಎನ್ನುವುದು ನಮ್ಮ ಮನದಲ್ಲಿನ ನಂಬಿಕೆಗೆ ಸಂಬಂಧಿಸಿದ್ದು. ಅದನ್ನು ಯಾರು ಪ್ರಶ್ನಿಸಬಾರದು. ಗ್ರಾಮದಲ್ಲಿ ದೇವರ ಉತ್ಸವ ಮತ್ತು ದೀಪೋತ್ಸವವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿರುವುದು ಸಂತಸ ತಂದಿದೆ ಎಂದರು.

    ಶೂಲದಯ್ಯ ಎನ್ನುವ ಹೆಸರಿನಿಂದಲೂ ಭಕ್ತರಿಂದ ಕರೆಸಿಕೊಂಡಿರುವ ಈರಣ್ಣೇಶ್ವರ ಸ್ವಾಮಿಯ ಭಕ್ತರು ನಾಲ್ಕು ದಿನಗಳ ಕಾಲ ನಡೆದ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಬೇಡಿಕೆಗಳ ಈಡೇರಿಕೆಗಾಗಿ ದೇವಾಲಯದ ಆವರಣದಲ್ಲಿ ಎರಡು ದಿನಗಳ ಹಿಂದೆ ಬನ್ನಿಮರದಿಂದ ತಯಾರಿಸಿದ 9 ಕಂಬಗಳಿಗೆ ಬಾಳೆಗೊನೆಯನ್ನು ಕಟ್ಟುತ್ತಾರೆ. ಮೂರು ದಿನಗಳ ನಂತರ ಬಾಳೆಗೊನೆಯನ್ನು ತೆಗೆದು ಪ್ರಸಾದವನ್ನಾಗಿ ಭಕ್ತರಿಗೆ ನೀಡಲಾಗುತ್ತದೆ. ಉತ್ಸವದ ಅಂತಿಮ ದಿನದಂದು ರಾತ್ರಿ 9ರ ನಂತರ ಹೆಂಗಳೆಯರು ಎಳ್ಳೆಣ್ಣೆಯ ದೀಪವನ್ನು ದೇವಾಲಯದ ಆವರಣದ ತುಂಬೆಲ್ಲಾ ಹಚ್ಚಿ ದೀಪೋತ್ಸದಲ್ಲಿ ಸಂಭ್ರಮಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts