More

    ಈದ್ಗಾ ಮೈದಾನದಲ್ಲಿ ಗಣೇಶ ಸ್ಥಾಪನೆ ನಿರ್ವಿಘ್ನ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಸಾರ್ವಜನಿಕವಾಗಿ 3 ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ತೀರ್ವನಿಸಲಾಗಿದೆ. ಇದರಿಂದ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂಬ ಹಿಂದು ಪರ ಸಂಘಟನೆಗಳ ಬಹು ವರ್ಷಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ.

    ಕಳೆದ ಹಲವು ದಿನಗಳಿಂದ ಸಾಕಷ್ಟು ಕುತೂಹಲ ಮತ್ತು ಆತಂಕಕ್ಕೂ ಕಾರಣವಾಗಿದ್ದ ಈ ವಿಷಯಕ್ಕೆ ಸೋಮವಾರ ಸಂಜೆ ತೆರೆ ಎಳೆಯಲಾಯಿತು. ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂಬ ಹಿಂದು ಪರ ಸಂಘಟನೆಗಳ ಬಲವಾದ ಒತ್ತಾಯದ ಮೇರೆಗೆ ರಚಿಸಲಾಗಿದ್ದ ಹು-ಧಾ ಮಹಾನಗರ ಪಾಲಿಕೆಯ ಸದಸ್ಯರನ್ನೊಳಗೊಂಡ ಸದನ ಸಮಿತಿಯು ಸೋಮವಾರ ಸಂಜೆ 5 ಗಂಟೆಗೆ ಮೇಯರ್ ಈರೇಶ ಅಂಚಟಗೇರಿ ಅವರಿಗೆ ವರದಿ ಸಲ್ಲಿಸಿದ ಬಳಿಕ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯ ಬಳಿಕ ವಿವರ ನೀಡಿದ ಮೇಯರ್, ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೋರಿ 6 ಸಂಘಟನೆಗಳು ಮನವಿ ಸಲ್ಲಿಸಿವೆ. ಇದರಲ್ಲಿ ಒಂದು ಸಂಘಟನೆಗೆ ಅವಕಾಶ ನೀಡಲಾಗುವುದು. ಆ ಸಂಘಟನೆ ಯಾವುದು ಎಂಬುದನ್ನು ಮಂಗಳವಾರ ನಿರ್ಧರಿಸುತ್ತೇವೆ. ಉಳಿದ 5 ಸಂಘಟನೆಗಳು ಸಹಕಾರ ನೀಡಬೇಕು ಎಂದು ಹೇಳಿದರು.

    ಇಂದಿನ ನಿರ್ಣಯವು ಈದ್ಗಾ ಮೈದಾನದಲ್ಲಿ ಪ್ರತಿ ವರ್ಷ ಗಣೇಶೋತ್ಸವ ಆಚರಣೆಗೆ ಅನ್ವಯವಾಗಲಿದೆ. ಈ ವರ್ಷ 3 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗುವುದು. ಮುಂದೆ ಎಷ್ಟು ದಿನಗಳು ಎಂಬುದನ್ನು ಆಯಾ ವರ್ಷ ನಿರ್ಣಯಿಸಲಾಗುವುದು. ಪಾಲಿಕೆಯ ವತಿಯಿಂದ ಗಣೇಶೋತ್ಸವ ಆಚರಿಸಿದರೆ ಅದು ಸರ್ಕಾರಿ ಆಚರಣೆ ಆಗುತ್ತದೆ. ಹಾಗಾಗಿ ಸಾರ್ವಜನಿಕವಾಗಿ ಆಚರಣೆಗೆ ನಿರ್ಧಿರಿಸಿದ್ದೇವೆ ಎಂದರು.

    ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಎಂಎಲ್​ಸಿ ಪ್ರದೀಪ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ, ಉಪ ಮೇಯರ್ ಉಮಾ ಮುಕುಂದ, ಎಡಿಜಿಪಿ ಅಲೋಕಕುಮಾರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತ ಲಾಭೂರಾಮ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ಇತರರು ಇದ್ದರು. ವಿದೇಶಿ ಪ್ರವಾಸದಲ್ಲಿರುವ ಎಂಎಲ್​ಸಿ ಬಸವರಾಜ ಹೊರಟ್ಟಿ, ಬೆಂಗಳೂರಿನಲ್ಲಿರುವ ಶಾಸಕರಾದ ಜಗದೀಶ ಶೆಟ್ಟರ್, ಪ್ರಸಾದ ಅಬ್ಬಯ್ಯ ಗೈರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts