More

    ಇವಿಎಂ ಕಾರ್ಯನಿರ್ವಹಣೆ ಪಾರದರ್ಶಕ

    ಚಿಕ್ಕಮಗಳೂರು: ಪ್ರತಿ ಬಾರಿ ಚುನಾವಣೆ ಬಂದಾಗಲೂ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಂಬಬಹುದೇ? ಇಲ್ಲವೇ? ಎಂಬ ಚರ್ಚೆಗಳು ನಡೆಯುತ್ತವೆ. ಹಲವು ಸವಾಲುಗಳು ಎದುರಾದಾಗ ಚುನಾವಣಾ ಆಯೋಗ ಬಹಿರಂಗ ಸವಾಲು ಹಾಕಿ ಯಶಸ್ವಿಯಾಗಿದೆ. ಭಾರತದ ವಿದ್ಯುನ್ಮಾನ ಮತಯಂತ್ರ ಪ್ರಬುದ್ಧತೆಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.

    ನಗರ ಹೊರವಲಯದ ಸಗನೀಪುರದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇಡುವ ನೂತನ ಭದ್ರತಾ ಕೊಠಡಿಗಳ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಯಾರಾದರೂ ಹ್ಯಾಕ್ ಮಾಡಿ ತೋರಿಸಿದರೆ ಅವುಗಳನ್ನು ಕೈಬಿಡಲಾಗುವುದು ಎಂದು 2017ರಲ್ಲಿ ಭಾರತ ಚುನಾವಣಾ ಆಯೋಗ ಮುಕ್ತ ಸವಾಲು ಹಾಕಿತ್ತು. ಯಾರೂ ಅದರಲ್ಲಿ ಯಶಸ್ಸು ಕಾಣಲಿಲ್ಲ. ಕಾರಣ ಇವಿಎಂ ಯಂತ್ರವನ್ನು ತರುವುದರಿಂದ ಹಿಡಿದು ಅದರ ನಿರ್ವಹಣೆ, ಅಭ್ಯರ್ಥಿಗಳ ಯಾದಿ ಹಾಕುವುದು, ಸ್ಟೋರೇಜ್ ಮಾಡುವುದು, ನಂತರ ಹೇಗೆ ಹೊರತೆಗೆಯಬೇಕು ಎಂಬ ಬಗ್ಗೆ ಚುನಾವಣೆ ಆಯೋಗ ಸಂಪೂರ್ಣ ಶಿಷ್ಟಾಚಾರ ನಿಗದಿ ಮಾಡಿದೆ. ಸಂಶಯಕ್ಕೆ ಆಸ್ಪದವೇ ಇಲ್ಲ ಎಂದರು.

    ಭಾರತದಲ್ಲಿ ಇವಿಎಂ ಅಳವಡಿಸಿದ್ದು 1998ರಲ್ಲಿ. ಐದಾರು ವರ್ಷಗಳ ಹಿಂದೆ ವಿದೇಶದವರು ಭಾರತಕ್ಕೆ ಭೇಟಿ ನೀಡಿ ನಮ್ಮ ಇವಿಎಂ ಕಾರ್ಯನಿರ್ವಹಣೆ, ಅಳವಡಿಸುವ ಕುರಿತು ಅಧ್ಯಯನ ಮಾಡಿಹೋಗಿದ್ದಾರೆ. ಇಷ್ಟು ವರ್ಷವಾದರೂ ಅಮೆರಿಕ, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ ಸಂಪೂರ್ಣವಾಗಿ ಇವಿಎಂಗಳನ್ನು ಇಂದಿಗೂ ಅಳವಡಿಸಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts