More

    ಇಲ್ಲ ಸಾಮೂಹಿಕವಾಗಿ ಎಲ್ಲರನ್ನೂ ಅಮಾನತುಗೊಳಿಸಿ


    ಚಿತ್ರದುರ್ಗ: ಸರಣಿ ಸಸ್ಪೆಂಡ್ ಆದೇಶಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಬುಧ ವಾರ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.
    ರಾಜ್ಯಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಜಿಲ್ಲೆಯ 120ಕ್ಕೂ ಹೆಚ್ಚು ಪಿಡಿಒಗಳು ಜಿಪಂ ಚಲೋನಡೆಸಿ,ಜಿಪಂ ಕಚೇರಿ ಬಳಿ ಜಮಾಯಿಸಿದರು.
    ಸಿಇಒ ಅವರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಆಗುತ್ತಿರುವ ಹತ್ತು-ಹಲವು ತೊಂದರೆಗಳನ್ನು ವಿವರಿಸಿದ ಸಂಘದ ಪ್ರಮುಖರು, ಹಲವು ಪಿಡಿಒಗಳನ್ನು ಸಸ್ಪೆಂಡ್ ಮಾಡಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪದೆ ಪದೇ ಸಸ್ಪೆಂಡ್ ಮಾಡುವ ಬದಲು ಎಲ್ಲರನ್ನೂ ಏಕ ಕಾಲಕ್ಕೆ ಅಮಾನತು ಮಾಡಿ ಅಥವಾ ಎಲ್ಲರಿಗೂ ಸಾಮೂಹಿಕವಾಗಿ ರಜೆ ಕೊಡುವಂತೆ ಒತ್ತಾಯಿಸಿದರು.
    ಲೋಕಾಯಕ್ತ ಪೊಲೀಸ್ ಟ್ರಾೃಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆ ನಡೆಸಬೇಕು. ಪಿಡಿಒಗಳ ಒತ್ತಡ ನಿವಾರಣೆ ಕಾರ‌್ಯಾಗಾರ ನಡೆಸಬೇಕು. ಹಣ ದುರುಪಯೋಗಕ್ಕೆ ಪಿಡಿಒಗಳನ್ನು ಹೊಣೆಗಾರನ್ನಾಗಿ ಮಾಡದೆ ಗ್ರಾಮಸ್ವರಾಜ್ ನಿಯಮದಂತೆ ಕ್ರಮ ಜರುಗಿಸಬೇಕು.
    ನರೇಗಾದಡಿ ಶೇ.60-40 ಅನುಪಾತ ಕಾರ‌್ಯನಿರ್ವಹಣೆಯಲ್ಲಿ ಆಗುವ ಲೋಪಗಳಿಗೆ ಪಿಡಿಒಗಳನ್ನು ಮಾತ್ರ ಹೊಣೆ ಮಾಡುವುದು ಸಲ್ಲದು. ಕರವಸೂಲಿಗೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ವರ್ಗಾವಣೆ ಆದ ಪಿಡಿಒಗಳಿಗೆ ಮೂವ್‌ಮೆಂಟ್ ಆರ್ಡರ್ ಕೊಡಬೇಕು. ರಜೆಯಿಂದ ಮರಳಿದವರಿಗೆ ಮೂಲ ಸ್ಥಾನದಲ್ಲಿ ಅವಕಾಶ ಕಲ್ಪಿಸ ಬೇಕು.
    ಈಗಾಗಲೇ ಹೊರಡಿಸಿರುವ ಹಲವು ಪಿಡಿಒಗಳ ಅಮಾನತು ಆದೇಶ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿ ಕೆಗೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಸಿಇಒ,ಡಿಎಸ್‌ಕೆ.ತಿಮ್ಮಪ್ಪ ಅವರಿಗೆ ಸ್ಥಳದಲ್ಲೇ ಕೆಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಸೂಚನೆ ನೀಡಿದರು.
    ರಾಜ್ಯಪಂ.ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ‌್ಯಾಧ್ಯಕ್ಷ ಆರ್.ಪಾತಣ್ಣ,ಸಂಘದ ಜಿಲ್ಲಾಧ್ಯಕ್ಷ ಎ.ನಯಾಜ್,ಉಪಾಧ ಕ್ಷೆ ಶೃತಿ,ಎಸ್.ಎಂ.ಸಂತೋಷ್‌ಕುಮಾರ್,ಎಂ.ಸ್ವಾಮಿ,ಎಸ್.ಬಸವರಾಜ್,ಸುಬ್ರಮಣ್ಯ,ಜಯಪ್ಪ,ಶ್ರೀನಿವಾಸ್,ಲಕ್ಷ್ಮೀಕಾಂತ್,ಶಿಲ್ಪಾ, ಮಹಾ ಲಕ್ಷ್ಮೀ,ರೂಪಕುಮಾರಿ,ಮಂಜುಳಾ,ಯರ‌್ರಿಸ್ವಾಮಿ,ಟಿ.ಜಿ.ಸುರೇಶ್,ನಾಗರಾಜ್,ಇರ್ಫಾನ್‌ಉಲ್ಲಾ,ಶಾಂತ್‌ಕುಮಾರ್ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts