More

    ಇಲೆಕ್ಟ್ರಾನಿಕ್ ಸಾಧನ ಮಿತವಾಗಿ ಬಳಸಿ

    ಚಿಕ್ಕೋಡಿ, ಬೆಳಗಾವಿ: ಇಲೆಕ್ಟ್ರಾನಿಕ್ ವಸ್ತುಗಳನ್ನು ಮಿತವಾಗಿ ಬಳಸಿ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ವಿ. ರಮೇಶ ಹೇಳಿದರು.
    ಪಟ್ಟಣದ ಕೆಎಲ್‌ಇ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡ ವಿಶ್ವ ಇ-ತ್ಯಾಜ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಎರಡೆರಡು ಮೊಬೈಲ್ ಬಳಸಬೇಡಿ. ದೇಶದಲ್ಲಿ ಇಲೆಕ್ಟ್ರಾನಿಕ್ ವೇಸ್ಟ್ ಹೆಚ್ಚುತ್ತಾ ಸಾಗಿದೆ ಎಂದರು.

    ವಕೀಲ ಎಂ.ಬಿ. ಪಾಟೀಲ ಮಾತನಾಡಿ, ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ, ಸಮಸ್ಯೆಯಾಗದಂತೆ ಕಾಳಜಿ ವಹಿಸುವುದು ಮುಖ್ಯ ಎಂದರು.
    ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚುತ್ತದೆ. ಇ-ತ್ಯಾಜ್ಯ ಎಲ್ಲೆಡೆ ಕಾಣುವುದು ಸರ್ವೆಸಾಮಾನ್ಯವಾಗಿದೆ. ರೆಡ್ಯುಸ್, ರಿಸೈಕಲ್, ರಿಯ್ಯೂಜ್, ರಿಕವರ್ ಸೂತ್ರಗಳನ್ನು ಮಹಾವಿದ್ಯಾಲಯದಲ್ಲಿ ಅಳವಡಿಸಿಕೊಂಡಿದ್ದೇವೆ. ಇ-ತ್ಯಾಜ್ಯಗಳಲ್ಲಿನ ಮಾರಣಾಂತಿಕ ರಾಸಾಯನಿಕಗಳ ಬಳಕೆ ಮೇಲೆ ನಿಗಾವಹಿಸಬೇಕಾಗಿದೆ. ಮುಂದಿನ ಪೀಳಿಗೆಗೆ ಶುದ್ಧ ಪರಿಸರ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

    ವಿಭಾಗದ ಮುಖ್ಯಸ್ಥ ಬಸವರಾಜ ಚೌಕಿಮಠ, ಸಂಜಯ ಪೂಜಾರಿ, ಸಂಗೀತಾ ವಾಟೆಗಾಂವಕರ, ರಾಜು ಹೆಬ್ಬಾಳೆ, ಡಾ. ಜಗನ್ನಾಥ ಜಾಧವ, ವನಿತಾ ಅಬ್ಬಿಗೇರಿ, ದಾನೇಶ್ವರಿ ಮೋದಿ, ಪ್ರವೀಣ ಹುಣಸಿಗಿಡದ, ಮಲ್ಲಿಕಾರ್ಜುನ ಬಿರಾದರ, ಅಕ್ಷತಾ ಜಾಧವ, ಸಹನಾ ಪಾಟೀಲ, ಬಸವರಾಜ ಚಿನಿವಾಲರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts