More

    ಇನ್ಮುಂದೆ 112 ಸಂಖ್ಯೆಗೆ ಕರೆ ಮಾಡಿ

    ಕಾರವಾರ: ಜಿಲ್ಲೆಯಲ್ಲಿ ಸಂಭವಿಸಬಹು ದಾದ ಅಪರಾಧ, ಬೆಂಕಿ, ಅವಘಡ ಪ್ರಕರಣಗಳ ಸ್ಥಳಕ್ಕೆ ಪೊಲೀಸರು ಇನ್ನು ಶೀಘ್ರ ಹಾಜರಾಗಲು ತುರ್ತು ಸ್ಪಂದನೆ ಸಹಾಯ ವ್ಯವಸ್ಥೆ (ಇಆರ್​ಎಸ್​ಎಸ್) ಹೆಚ್ಚು ಅನುಕೂಲವಾಗಲಿದೆ ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ಹೇಳಿದರು.

    ಜಿಲ್ಲೆಗೆ ಮಂಜೂರಾದ 16 ಇಆರ್​ಎಸ್​ಎಸ್- 112 ನಿಮ್ಮ ಮಿತ್ರ 247 ವಾಹನಗಳನ್ನು ಶನಿವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಈಗಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲೂ ಇದು ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.

    ಈ ವಾಹನಗಳನ್ನು ಯಾವುದೇ ಗಸ್ತಿಗೆ, ಗಣ್ಯ ವ್ಯಕ್ತಿಗಳ ಬೆಂಗಾವಲಿಗೆ ಬಳಸುವುದಿಲ್ಲ. ಒಂದು ಸ್ಥಳದಲ್ಲಿ ನಿಂತಿರುತ್ತದೆ. 112 ರಿಂದ ಮಾಹಿತಿ ಬಂದ ತಕ್ಷಣ ಸ್ಪಂದನೆಗೆ ತೆರಳಲಿದೆ. ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯೂ ಈ ವಾಹನದದಲ್ಲಿ ಕರ್ತವ್ಯದಲ್ಲಿದ್ದವರ ಮುಖ್ಯ ಆದ್ಯತೆಯಲ್ಲ ಎಂದು ಸ್ಪಷ್ಟಪಡಿಸಿದರು.

    ವಾಹನದಲ್ಲಿ ಮೊಬೈಲ್ ಡೇಟಾ ಟರ್ವಿುನಲ್ (ಎಂಡಿಟಿ) ಎಂಬ ವ್ಯವಸ್ಥೆ ಅಳವಡಿಸಿದ್ದು, ಸಂವಹನಕ್ಕೆ ಡಿಜಿಟಲ್ ವೈರ್​ಲೆಸ್ ವ್ಯವಸ್ಥೆ ಇರಲಿದೆ. ಟಾರ್ಚ್, ತುರ್ತು ಚಿಕಿತ್ಸೆ ಕಿಟ್, ಹಗ್ಗ ಮುಂತಾದ ವ್ಯವಸ್ಥೆಗಳು ಇರಲಿವೆ. ಎಂಡಿಟಿ ವ್ಯವಸ್ಥೆ ಜಿಪಿಎಸ್ ಮೂಲಕ ಇದು ಕಾರ್ಯ ನಿರ್ವಹಿಸಲಿದೆ. ನಾಗರಿಕರು 112 ಸಂಖ್ಯೆಗೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿಗೆ ಸಂಪರ್ಕ ಪಡೆದುಕೊಳ್ಳಲಿದೆ. ಘಟನೆ ನಡೆದ ಸ್ಥಳಕ್ಕೆ ಸಮೀಪದಲ್ಲಿರುವ ಇಆರ್​ಎಸ್​ಎಸ್ ವಾಹನಕ್ಕೆ ಕರೆ ರವಾನೆಯಾಗಲಿದೆ ಎಂದರು.

    ಇನ್ನು ಜಿಲ್ಲೆಯಲ್ಲಿ ಪೊಲೀಸ್ ಸಹಾಯವಾಣಿ 100 ಇರುವುದಿಲ್ಲ. ಅದರ ಬದಲು 112 ಸಂಖ್ಯೆಗೆ ಕರೆ ಮಾಡಬೇಕಿದೆ. ಬಿಎಸ್​ಎನ್​ಎಲ್ ಹಾಗೂ ಖಾಸಗಿ ಕಂಪನಿಗಳ ನೆಟ್​ವರ್ಕ್ ಗಳಿಂದಲೂ 112 ಒತ್ತಿದರೆ ನೇರವಾಗಿ ಕರೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಸದ್ಯ ವಾಹನದಲ್ಲಿ ಚಾಲಕರ ಜತೆ ಒಬ್ಬ ನೌಕರ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಎಎಸ್​ಪಿ ಬದರಿನಾರಾಯಣ, ಡಿವೈಎಸ್​ಪಿ ಅರವಿಂದ ಕಲಗುಜ್ಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts