More

    ಇನ್ನೂ ಸೆರೆಯಾಗದ ಚಿರತೆ, ಆತಂಕ

    ಬೆಳಗಾವಿ/ಮೂಡಲಗಿ: ಬೆಳಗಾವಿಯ ಗಾಲ್ಫ್ ಮೈದಾನ ಹಾಗೂ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಹೊರವಲಯದಲ್ಲಿ ಮಂದ್ರೋಳಿ ಎಂಬುವವರ ತೋಟದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು.

    ಇಲಾಖೆಯ 70ಕ್ಕೂ ಅಧಿಕ ಸಿಬ್ಬಂದಿ ಮಧ್ಯಾಹ್ನ 12ರಿಂದ ಸಂಜೆ 6ರ ವರೆಗೆ ಶೋಧ ಕಾರ್ಯನಡೆಸಿದರೂ, ಚಿರತೆ ಸುಳಿವು ಸಿಗಲಿಲ್ಲ. ಗಾಲ್ಫ ಮೈದಾನದ ಪೊದೆ ಮತ್ತು ಸಾವಗಾಂವ ಬಳಿಯ ಮಿಲಿಟರಿ ಪ್ರದೇಶದಲ್ಲಿ ಕಾರ್ಯಚರಣೆ ನಡೆಯಿತು. ಅವಿತುಕೊಂಡಿದ್ದ ಚಿರತೆ ಹೊರ ಬರಲೆಂದು ಪಟಾಕಿಗಳನ್ನು ಸಿಡಿಸಲಾಯಿತು. ಈಗಾಗಲೇ ಇರಿಸಿರುವ ಬೋನುಗಳಲ್ಲಿ ನಾಯಿ, ಆಡುಗಳನ್ನು ಇಡಲಾಗಿದೆ. 24 ಕ್ಯಾಮರಾಗಳನ್ನು ಮರಗಳಲ್ಲಿ ಅಳವಡಿಸಲಾಗಿದ್ದು, ಹೆಚ್ಚಿನ ನಿಗಾವಹಿಸಲಾಗಿದ್ದು, ಸುತ್ತಲಿನ 22 ಶಾಲೆಗಳಿಗೆ ನೀಡಿದ್ದ ರಜೆ ಶನಿವಾರದವರೆಗೆ ವಿಸ್ತರಿಸಲಾಗಿದೆ.

    ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಮಂದ್ರೋಳಿ ತೋಟಕ್ಕೆ ಭೇಟಿ ನೀಡಿದ ಜಿಲ್ಲಾ ಅರಣ್ಯ ಅಧಿಕಾರಿ ಮರೆಪ್ಪ ಆ್ಯಂಥೋನಿ ಸಿಸಿ ಕ್ಯಾಮರಾ ಹಾಗೂ ಸ್ಥಳವನ್ನು ಪರಿಶೀಲಿಸಿದರು. ಚಿರತೆಯ ಹೆಜ್ಜೆ ಗುರುತು ಪತ್ತೆ ಕಾರ್ಯವನ್ನು ಅರಣ್ಯ ಸಿಬ್ಬಂದಿ ನಿರಂತರವಾಗಿ ಕಾರ್ಯ ಮಾಡುತ್ತಿದ್ದು, ಎರಡು ಸ್ಥಳಗಳಲ್ಲಿ ಬೋನುಗಳನ್ನು ಹಾಕಲಾಗಿದೆ. ಈ ಭಾಗದಲ್ಲಿ ಕಬ್ಬಿನ ಗದ್ದೆಗಳು ಇರುವುದರಿಂದ ಡ್ರೋನ್ ಮೂಲಕ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಸುತ್ತಮುತ್ತಲಿನ ಸಾರ್ವಜನಿಕರು ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರೇ ಓಡಾಡುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಚಿರತೆ ಪತ್ತೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ 30 ಶಾಲೆಗಳ ರಜೆ ಘೋಷಣೆಯನ್ನು ಶನಿವಾರ ಸಹ ರಜೆ ಮುಂದುವರಿಸಲಾಗಿದೆ ಎಂದು ತಹಸೀಲ್ದಾರ್ ಡಿ.ಜಿ.ಮಹಾತ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts