More

    ಇನ್ನೂ ಬಾರದ ಬಾಡಿಗೆ ಹಣ

    ಮುಂಡಗೋಡ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮುಗಿದು ಎರಡು ವರ್ಷಗಳೇ ಕಳೆದಿವೆ. ಅಲ್ಲದೆ, ಮತ್ತೊಮ್ಮೆ ವಿಧಾನಸಭೆ ಚುನಾವಣೆಯೂ ಹತ್ತಿರ ಬರುತ್ತಿದೆ. ಆದರೆ, ಉಪ ಚುನಾವಣೆಯಲ್ಲಿ ಅಂಗವಿಕಲ ಮತದಾರರನ್ನು ಕರೆ ತರಲು ವ್ಯವಸ್ಥೆ ಮಾಡಲಾಗಿದ್ದ ವಾಹನಗಳಿಗೆ ಇದುವರೆಗೂ ಬಾಡಿಗೆ ಸಂದಾಯವಾಗಿಲ್ಲ.
    2019ರಲ್ಲಿ ನಡೆದ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರೊಬ್ಬರೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ಖಾಸಗಿ ವಾಹನಗಳಲ್ಲಿ ಅಂಗವಿಕಲ ಮತದಾರರನ್ನು ಅವರ ಮನೆಯಿಂದ ಮತಗಟ್ಟೆಗೆ ಕರೆದುಕೊಂಡು ಬರಲು ಹಾಗೂ ಮತ್ತೆ ಮನೆಗೆ ಬಿಡಲು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 14 ಖಾಸಗಿ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿತ್ತು. ಆದರೆ, ಅನುದಾನ ಬಾರದ ಕಾರಣ ಇನ್ನೂ ಯಾರೊಬ್ಬರಿಗೂ ಬಾಡಿಗೆ ಹಣ ನೀಡಿಲ್ಲ. ಚುನಾವಣೆ ಮುಗಿದು ಎರಡು ವರ್ಷಗಳೇ ಉರುಳಿವೆ. ಆದರೂ ಬಾಡಿಗೆ ಹಣ ಸಂದಾಯವಾಗದ ಕಾರಣ ವಾಹನಗಳ ಚಾಲಕರು ನಿತ್ಯವೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಅಲ್ಲದೆ, ಬಾಡಿಗೆ ಹಣ ನೀಡುವಂತೆ ವಾಹನಗಳ ಚಾಲಕರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವಾಹನ ಚಾಲಕರು.



    ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಗೆ ವಾಹನಗಳ ಬಾಡಿಗೆ ಹಣ ಬಿಡುಗಡೆ ಮಾಡುವಂತೆ ವರದಿ ಸಲ್ಲಿಸಲಾಗಿದೆ. ಹಣ ಬಿಡುಗಡೆ ಯಾದ ತಕ್ಷಣ ಬಾಡಿಗೆ ವಾಹನದಾರರಿಗೆ ನೀಡಲಾಗುತ್ತದೆ. | ದೀಪಾ ಬಂಗೇರಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪ್ರಭಾರ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts