More

    ಇನ್ನೂ ಎರಡು ಆನೆ ಸೆರೆಗೆೆ ಅನುಮತಿ

    ಮೂಡಿಗೆರೆ: ಒಮ್ಮೆಲೆ ಎಲ್ಲ ಕಾಡಾನೆ ಹಿಡಿದು ಸಾಗಿಸಲು ವನ್ಯಜೀವಿ ಕಾಯ್ದೆಯಲ್ಲಿ ಅನುಮತಿ ಅಸಾಧ್ಯ. ಈ ಬಗ್ಗೆ ಸದನದಲ್ಲಿ ಗಂಭೀರವಾಗಿ ರ್ಚಚಿಸಿ ಕಾಡಾನೆ ಹಾವಳಿ ತಪ್ಪಿಸಲು ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು. ಊರುಬಗೆ, ಕೆಂಜಿಗೆ, ತತ್ಕೊಳ ಭಾಗದಲ್ಲಿ ಬೆಳೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಜೀವ ಹಾನಿ ಮಾಡುತ್ತಿರುವ 13 ಕಾಡಾನೆಗಳನ್ನು ಹಿಡಿದು ಸಾಗಿಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಾನು ರ್ಚಚಿಸಿದಾಗ ಬೈರನ ಸೆರೆ ಹಿಡಿಯಲು ಅನುಮತಿ ನೀಡಿದರು. ಸದ್ಯದಲ್ಲೇ ಇನ್ನೆರಡು ಕಾಡಾನೆ ಹಿಡಿದು ಸ್ಥಳಾಂತರಿಸಲು ಅನುಮತಿ ದೊರೆಯಲಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

    ನರಹಂತಕ ಕಾಡಾನೆ ಮೂಡಿಗೆರೆ ಬೈರನ ಸೆರೆಗೆ ಅರಣ್ಯ ಇಲಾಖೆಯಿಂದ 3 ತಂಡ ರಚಿಸಲಾಗಿದೆ. 2 ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಡ್ರೋನ್ ಕ್ಯಾಮರಾ ಮೂಲಕ ಅಧಿಕಾರಿಗಳು ಬೈರನ ಚಲನವಲನ ಗಮನಿಸುತ್ತಿದ್ದಾರೆ. ಮಳೆ ಹೆಚ್ಚಾಗಿರುವ ಕಾರಣ ಪಶುವೈದ್ಯರ ಮತ್ತು ಸಕ್ರೆಬೈಲಿನ ಆನೆ ಶಿಬಿರದ ಮಾವುತರ ತಂಡ ಪರಿಶೀಲನೆ ನಡೆಸಿ ವರದಿ ನೀಡುವುದು ಒಂದೆರಡು ದಿನ ವಿಳಂಬ ವಾಗಬಹುದು. ಸದ್ಯದಲ್ಲೇ ಎಲ್ಲ ಪ್ರಕ್ರಿಯೆ ಮುಗಿದು ಬೈರನ ಸೆರೆಹಿಡಿದು ಸಾಗಿಸಲಾಗುವುದು ಎಂದು ಮಾಹಿತಿ ನೀಡಿದರು.

    ಜೀವಹಾನಿಗೆ 7.5 ಲಕ್ಷ ರೂ., ಕಾಫಿ ಗಿಡ ಒಂದಕ್ಕೆ 140, ಬಾಳೆಗೆ 200, ಅಡಕೆ, ತೆಂಗಿನ ಮರ ಧ್ವಂಸಕ್ಕೆ 2000 ರೂ. ಪರಿಹಾರ ನೀಡಲಾಗುತ್ತದೆ. ಇಷ್ಟು ಕಡಿಮೆ ಮೊತ್ತದ ಪರಿಹಾರ ಸಾಲದು. ಪರಿಹಾರ ಹೆಚ್ಚಿಸಲು ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. 20 ವರ್ಷದಿಂದ ಕಾಡಾನೆಗಳ ಕಾಟದಿಂದ ರೈತರು ಒಂದು ಸಾವಿರ ಹೆಕ್ಟೇರ್ ಭತ್ತದ ಗದ್ದೆ ಹಾಳುಬಿಟ್ಟಿದ್ದಾರೆ. ಭಯದಿಂದ ಕಾಫಿ ತೋಟದ ಕೆಲಸಕ್ಕೆ ಹೋಗದೆ ತೋಟ ಅಭಿವೃದ್ಧಿ ಮಾಡಲು ಬೆಳೆಗಾರರಿಗೆ ಸಾಧ್ಯವಾಗಿಲ್ಲ. ಕೂಲಿ ಕಾರ್ವಿುಕರು ಕೆಲಸಕ್ಕೆ, ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗಲು ಭಯಪಡುತ್ತಿದ್ದಾರೆ. ತಾಲೂಕಿನಲ್ಲಿ ಕಾಡಾನೆಗಳು 20 ವರ್ಷದಿಂದ 14 ಮಂದಿಯನ್ನು ಸಾಯಿಸಿವೆ. 40 ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿವೆ. 12 ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. 15 ವಾಹನ ಜಖಂಗೊಳಿಸಿವೆ. 25 ಮನೆಗಳಿಗೆ ಹಾನಿ ಮಾಡಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts