More

    ಇನ್ನೂ ಆರಂಭವಾಗದ ಭತ್ತದ ನಾಟಿ

    ಶಿಕಾರಿಪುರ: ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆ ಕುಂಠಿತ ಆಗಿರುವುದರಿಂದ ಭತ್ತ, ಮೆಕ್ಕೆಜೋಳ ಬಿತ್ತನೆಗೆ ತಯಾರಾಗಿದ್ದ ರೈತರಲ್ಲಿ ಅತಂಕ ಉಂಟಾಗಿದೆ.

    ತಾಲೂಕಿನಲ್ಲಿ ಈಗಾಗಲೇ ಮೆಕ್ಕೆಜೋಳ, ಭತ್ತ ನಾಟಿಗೆ ತಯಾರಿ ಮಾಡಿಕೊಂಡಿದ್ದು ಪೂರಕ ಮಳೆಗಾಗಿ ಕಾಯುತ್ತಿದ್ದಾರೆ. ಪ್ರತಿವರ್ಷ ಈ ವೇಳೆಗೆ ಭತ್ತ ನಾಟಿ ಕಾರ್ಯ ಆರಂಭವಾಗುತ್ತಿತ್ತು. ಆದರೆ ಈ ವರ್ಷ ಮಳೆಯಾಗದಿರá-ವುದರಿಂದ ನಾಟಿ ಕಾರ್ಯ ಆರಂಭವಾಗಿಲ್ಲ.

    ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆ 353 ಮಿ.ಮೀ. ಇದ್ದು 284 ಮಿ.ಮೀ.ಮಳೆಯಾಗಿದೆ. ಅಂಜನಾಪುರದಲ್ಲಿ 263 ಮಿ.ಮೀ., ಹೊಸೂರಲ್ಲಿ 279, ಉಡುಗಣಿಯಲ್ಲಿ 324 ಮತ್ತು ತಾಳಗುಂದದಲ್ಲಿ 260 ಮಿ.ಮೀ. ಮಳೆಯಾಗಿದೆ. ಹೀಗಾಗಿ ಸಹಜವಾಗಿ ರೈತರಲ್ಲಿ ಮಳೆ ಬಗ್ಗೆ ಅನುಮಾನ ಪ್ರಾರಂಭವಾಗಿದೆ. ಮೆಕ್ಕೆಜೋಳ ಬಿತ್ತನೆ ಮಾಡಿದ ಒಂದೆರಡು ವಾರಗಳಿಂದ ಸರಿಯಾದ ಮಳೆಯಾಗುತ್ತಿಲ್ಲ. ತಾಳಗುಂದ ಹೋಬಳಿಯಲ್ಲಿ ಹೆಚ್ಚು ಮಳೆ ಕೊರತೆ ಉಂಟಾಗಿದೆ.

    ಕಳೆದ ವರ್ಷಕ್ಕಿಂತ ಈ ವರ್ಷ ಮಳೆಪ್ರಮಾಣ ಕಡಿಮೆಯಿದೆ. ಒಂದೆರಡು ವಾರದಿಂದ ಮಳೆ ಸರಿಯಾಗಿ ಬಂದಿಲ್ಲ. ರೈತರು ಭತ್ತದ ನಾಟಿಗೆ ಸಸಿ ತಯಾರು ಮಾಡಿಕೊಂಡು ಕಾಯುತ್ತಿದ್ದಾರೆ. ಈ ವರ್ಷ ಮತ್ತೆ ಬರಗಾಲ ಕಾಡುವ ಆತಂಕ ಉಂಟಾಗಿದೆ. ಪುನರ್ವಸು ಮಳೆಯ ಕಡೆ ಪಾದದೊಳಗಾದರೂ ರೈತರು ಸಸಿ ನಾಟಿಗೆ ಚಾಲನೆ ನೀಡಿದರೆ ಬೆಳೆ ಸಮೃದ್ಧವಾಗುತ್ತದೆ.

    |ಪುಟ್ಟನಗೌಡ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts