More

    ಇಟಲಿಯಲ್ಲಿ ಸಿಕ್ಕಿಹಾಕಿಕೊಂಡ ರಟ್ಟಿಹಳ್ಳಿ ಯುವಕ

    ರಟ್ಟಿಹಳ್ಳಿ: ತಾಲೂಕಿನ ಗುಡ್ಡದಮಾದಪುರ ಗ್ರಾಮದ ಸಿದ್ದಬಸಪ್ಪ ಓದೋಗೌಡ್ರ ಅವರ ಪುತ್ರ ನವೀನ ಓದೋಗೌಡ್ರ ಭಾರತಕ್ಕೆ ಬರಲಾಗದೆ ಇಟಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

    ರೋಮ್ ನಗರದಲ್ಲಿ ಉದ್ಯೋಗದಲ್ಲಿದ್ದು, ಕರೊನಾ ಭೀತಿ ಹಿನ್ನೆಲೆಯಲ್ಲಿ ಭಾರತಕ್ಕೆ ಕರೆ ತರಲು ಸೂಕ್ತ ವ್ಯವಸ್ಥೆ ಮಾಡಿಸುವಂತೆ ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಮನವಿ ಮಾಡಿದ್ದಾರೆ.

    ‘ವಿಜಯವಾಣಿ’ಯೊಂದಿಗೆ ಮಾತನಾಡಿದ ತಂದೆ ಸಿದ್ದಬಸಪ್ಪ, ‘ನನ್ನ ಮಗ ನವೀನ 2017ರಲ್ಲಿ ದಾವಣಗೆರೆಯ ಜಿಎಂಐಟಿ ಕಾಲೇಜ್​ನಲ್ಲಿ ಬಿ.ಇ. ಮೆಕಾನಿಕಲ್ ಮುಗಿಸಿ, ರೋಮ್ ನಗರಕ್ಕೆ ತೆರಳಿದ್ದಾನೆ. ಅಲ್ಲಿ ಎ.ಎಸ್. ಕೋರ್ಸ್ ಮುಗಿಸಿ ಒಂದು ತಿಂಗಳಿನಿಂದ ಅಲ್ಲಿಯೇ ಭಾರತ ಮೂಲದ ಟೆಲಿಕಮುನಿಕೇಷನ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ನವೀನ ಸೇರಿ ರಾಜ್ಯದ 32 ವಿದ್ಯಾರ್ಥಿಗಳು ಕಳೆದ 10 ದಿನಗಳಿಂದ ಭಾರತಕ್ಕೆ ಬರಲು ಕಾತುರರಾಗಿದ್ದಾರೆ. ಆದರೆ, ಅಲ್ಲಿ ಅವರಿಗೆ ವೀಸಾ ದೊರೆಯುತ್ತಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯ ಮಾಡಬೇಕು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದರು.

    ರೋಮ್ ನಗರದಲ್ಲಿರುವ ಭಾರತೀಯರನ್ನು ಇತ್ತೀಚೆಗೆ ಭಾರತೀಯ ಮೂಲದ ವೈದ್ಯರು ವೈದ್ಯಕೀಯ ತಪಾಸಣೆ ನಡೆಸಿದ್ದು, ಅದರಲ್ಲಿ ನೆಗೆಟಿವ್ ವರದಿ ಬಂದಿದೆ ಎಂದರು.

    ರೋಮ್ ನಗರದಲ್ಲಿರುವ ಯುವಕ ನವೀನನನ್ನು ಭಾರತಕ್ಕೆ ಕರೆ ತರಲು ವ್ಯವಸ್ಥೆ ಮಾಡುವಂತೆ ಅವರ ತಂದೆ ಮನವಿ ಮಾಡಿದ್ದಾರೆ. ಈ ಕುರಿತು ಈಗಾಗಲೇ ಸಚಿವ ಶ್ರೀರಾಮುಲು ಮತ್ತು ಡಾ. ಸುಧಾಕರ ಅವರ ಗಮನಕ್ಕೆ ತಂದಿದ್ದೇನೆ. ಆದರೆ, ಮಾ. 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

    | ಬಿ.ಸಿ. ಪಾಟೀಲ, ಕೃಷಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts