More

    ಇಂದು ಸಂಪೂರ್ಣ ಲಾಕ್​ಡೌನ್

    ಧಾರವಾಡ/ಹುಬ್ಬಳ್ಳಿ: ಜಿಲ್ಲೆಯಲ್ಲಿ ದಿನೇದಿನೇ ಕರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಶನಿವಾರ ಸಂಜೆವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 510ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕೇಂದ್ರ ಸರ್ಕಾರದ ಆದೇಶದಂತೆ ಭಾನುವಾರ ಸಂಪೂರ್ಣ ಲಾಕ್​ಡೌನ್ ಜಾರಿಗೆ ಜಿಲ್ಲಾಡಳಿತ ಮುಂದಾಗಿದೆ.

    ಶನಿವಾರ ರಾತ್ರಿ 8ರಿಂದ ಲಾಕ್​ಡೌನ್ ಜಾರಿಗೆ ಬಂದಿದ್ದು, ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿರಲಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಪತ್ತೆಯಾದ ಸ್ಥಳಗಳನ್ನು ಜಿಲ್ಲಾಡಳಿತದಿಂದ ಈಗಾಗಲೇ ಸೀಲ್​ಡೌನ್ ಮಾಡಲಾಗಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ರಾತ್ರಿ 7.30ರಿಂದಲೇ ಅವಳಿ ನಗರದ ಹಾಗೂ ತಾಲೂಕು ಕೇಂದ್ರಗಳಲ್ಲಿಯ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಧ್ವನಿವರ್ಧಕಗಳ ಮೂಲಕ ಎಚ್ಚರಿಸಿ ಜನರನ್ನು ಚದುರಿಸಿದರು.

    ಇದುವರೆಗೆ ಪತ್ತೆಯಾದ ಅನೇಕ ಕರೊನಾ ಪ್ರಕರಣಗಳಲ್ಲಿ ರೋಗಿಯ ಪ್ರಯಾಣ ಇತಿಹಾಸ ಅಸ್ಪಷ್ಟವಾಗಿದೆ. ಎಲ್ಲಿಂದ ವೈರಾಣು ಹಬ್ಬಿತು ಎಂದು ಗೊತ್ತಾಗುತ್ತಿಲ್ಲ. ಅಂದರೆ, ಕರೊನಾ ಪೀಡಿತರಾಗಿಯೂ ಸೋಂಕಿನ ಲಕ್ಷಣ ಇಲ್ಲದ ಅನೇಕರು ಓಡಾಡಿದಲ್ಲೆಲ್ಲ ವೈರಾಣು ಚದುರಿ ಅಮಾಯಕರಿಗೆ ಹಬ್ಬುತ್ತಿರುವ ಸಾಧ್ಯತೆಯನ್ನು ರ್ತಸಲಾಗಿದೆ. ಆದ್ದರಿಂದ ಒಂದು ದಿನ ಎಲ್ಲರೂ ಮನೆಯಲ್ಲೇ ಉಳಿದುಬಿಟ್ಟೆ, ಸೋಂಕಿತರು ಓಡಾಡಿರುವ ಜಾಗದಲ್ಲಿ ಹಬ್ಬಿರಬಹುದಾದ ವೈರಾಣುಗಳು ಅಲ್ಲೇ ನಾಶವಾಗಿ ಹೋಗುತ್ತವೆ. ಜತೆಗೆ, ರೋಗ ಲಕ್ಷಣವಿಲ್ಲದ ಸೋಂಕಿತರು ಸಹ ಮನೆಯಲ್ಲೇ ಉಳಿಯುವುದರಿಂದ ಅವರಿಂದ ಸಾರ್ವಜನಿಕರಿಗೆ ರೋಗ ಹರಡುವ ಸಾಧ್ಯತೆ ಇರುವುದಿಲ್ಲ.

    ಸರ್ಕಾರದ ಆದೇಶ ಉಲ್ಲಂಘನೆ ಮಾಡುವವರಿಗೆ ತಕ್ಕ ಶಾಸ್ತಿಯಾಗುವ ಎಲ್ಲ ಸಾಧ್ಯತೆಗಳೂ ಇವೆ.

    ಏನೇನು ಇರಲಿದೆ…

    ಅಗತ್ಯ ವಸ್ತುಗಳು, ಕಿರಾಣಿ ಅಂಗಡಿ, ಹಾಲು, ಮೊಸರು, ತರಕಾರಿ, ದಿನಸಿ ಅಂಗಡಿಗಳು, ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಮಾಂಸದ ಅಂಗಡಿ ಮಾತ್ರ ತೆರೆದಿರಲಿವೆ.

    ಏನೇನು ಇರುವುದಿಲ್ಲ…

    ಸಾರಿಗೆ- ಖಾಸಗಿ ಬಸ್, ಆಟೋ, ಕ್ಯಾಬ್, ಟ್ಯಾಕ್ಸಿ, ಮದ್ಯದ ಅಂಗಡಿಗಳು ಬಂದ್ ಇರಲಿವೆ. ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ, ಧಾರ್ವಿುಕ ಸಮಾರಂಭಗಳನ್ನು ಪ್ರತಿಬಂಧಿಸಲಾಗಿದೆ.

    ಈ ಸಂದರ್ಭದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವುದು ನಿಷಿದ್ಧ. ಮದುವೆ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಜನ ಹಾಗೂ ಅಂತ್ಯ ಸಂಸ್ಕಾರಕ್ಕೆ 20 ಜನ ಪಾಲ್ಗೊಳ್ಳಬಹುದು.

    ಆಕ್ಷೇಪಕ್ಕೆ ದಾರಿ ಮಾಡಿಕೊಟ್ಟ ಸಂದಿಗ್ಧ ಪರಿಸ್ಥಿತಿ

    ಹುಬ್ಬಳ್ಳಿ: ಕರೊನಾ ಲಕ್ಷಣಗಳನ್ನು ಹೊಂದಿದ್ದ ಅನಾರೋಗ್ಯ ಪೀಡಿತ ವೃದ್ಧನೊಬ್ಬ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಾಗ ಅದು ಕರೊನಾ ಪ್ರಕರಣ ಎಂದೇ ರ್ತಸಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿದ ನಂತರ, ವರದಿ ನೆಗೆಟಿವ್ ಎಂದು ಬಂದಿರುವ ಪ್ರಕರಣ ನಡೆದಿದೆ.

    ಹಳೇ ಹುಬ್ಬಳ್ಳಿ ಜನ್ನತ್ ನಗರ ನಿವಾಸಿ ಹಜರತ್ ಸಾಬ್ ಮಹಬೂಬಸಾಬ್ ಪಟ್ಟಣಕಾರಿ (62) ಎಂಬ ವ್ಯಕ್ತಿ ಜೂ. 30ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ಮಾಡಿದಾಗ ಪ್ಲೇಟ್​ಲೆಟ್ ಕಡಿಮೆ ಇದೆ ಎಂದು ವೈದ್ಯರು ಚಿಕಿತ್ಸೆ ನಿರಾಕರಿಸಿದ್ದರು. ನೇರವಾಗಿ ಕಿಮ್ಸ್​ಗೆ ದಾಖಲಿಸಿದಾಗ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇವರಿಗೆ ಕೋವಿಡ್ ಲಕ್ಷಣಗಳಿವೆ ಎಂದು ರೋಗಿಯನ್ನು ನೋಡುತ್ತಿದ್ದ ವೈದ್ಯರು ತಿಳಿಸಿದ್ದರು. ಕೆಲವೇ ಗಂಟೆಗಳಲ್ಲಿ ವೃದ್ಧ ಮೃತಪಟ್ಟನು. ಕೋವಿಡ್ ಪಾಸಿಟಿವ್ ಇದ್ದುದರಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತೀರ್ವನಿಸಿದ್ದರು.

    ಸೋಂಕಿತ ವ್ಯಕ್ತಿ ಎಂದು ಘೊಷಣೆಯಾದ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿಲ್ಲ. ಜಿಲ್ಲಾಡಳಿತದ ನಿರ್ದೇಶನದಂತೆ ಕುಟುಂಬದ ಕೆಲವರನ್ನು ಕರೆಯಿಸಿ ಸುರಕ್ಷತಾ ಕ್ರಮಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಸೋಂಕಿತರು ಮೃತಪಟ್ಟ ಪಟ್ಟಿಯಲ್ಲಿ ವೃದ್ಧನ ಹೆಸರೂ ದಾಖಲಾಗಿದೆ.

    ಮೃತದೇಹ ತ್ವರಿತವಾಗಿ ಹಸ್ತಾಂತರಿಸಿ

    ಹುಬ್ಬಳ್ಳಿ: ಕೋವಿಡೇತರ ಪ್ರಕರಣಗಳಲ್ಲಿ ಮೃತ ವ್ಯಕ್ತಿಯ ಶವವನ್ನು ಕುಟುಂಬದವರಿಗೆ ತ್ವರಿತವಾಗಿ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಆಗ್ರಹಿಸಿದೆ.

    ಈ ಕುರಿತು ಸಂಸ್ಥೆಯು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದೆ. ಮೃತ ವ್ಯಕ್ತಿಯ ಕೋವಿಡ್ ವರದಿ 6 ಗಂಟೆಯೊಳಗೆ ಒದಗಿಸಬೇಕು ಎಂದು ಕೋರಿದೆ.

    ಸಂಸ್ಥೆಯ ಅಧ್ಯಕ್ಷ ಎಂ.ಸಿ. ಸವಣೂರ, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಎಂ.ಎ. ಪಠಾಣ ಇದ್ದರು.

    ಸರ್ಕಾರಿ ಕಚೇರಿಗಳು ಸೀಲ್​ಡೌನ್

    ಧಾರವಾಡ: ಕರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ನಗರದ ಕೆಲ ಸರ್ಕಾರಿ ಕಚೇರಿಗಳನ್ನು ಶನಿವಾರ ಸೀಲ್​ಡೌನ್ ಮಾಡಲಾಗಿತ್ತು.

    ತಹಸೀಲ್ದಾರ್ ಕಚೇರಿಯ ಗುತ್ತಿಗೆ ನೌಕರನಿಗೆ ಸೋಂಕು ತಗುಲಿದ್ದು, ಇಡೀ ಆವರಣದಲ್ಲಿ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗಿದೆ. ಪಕ್ಕದ ತಾ.ಪಂ. ಕಚೇರಿಗೂ ಸ್ಯಾನಿಟೈಸೇಷನ್ ಮಾಡಲಾಗಿದೆ. ಜನದಟ್ಟಣೆಯಿಂದ ಕೂಡಿರುತ್ತಿದ್ದ ಎರಡೂ ಕಚೇರಿಗಳು ಜನರಿಲ್ಲದೆ ಭಣಗುಡುತ್ತಿದ್ದವು.

    ಜಿಲ್ಲಾಧಿಕಾರಿ ಕಚೇರಿ ಎದುರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಕಚೇರಿಯನ್ನೂ ಸೀಲ್​ಡೌನ್ ಮಾಡಲಾಗಿದೆ. ಜಿ.ಪಂ.ನ ಮಹಿಳಾ ಗುತ್ತಿಗೆ ಸಿಬ್ಬಂದಿ ಸೋಂಕಿತರಾಗಿದ್ದು, ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗಿದೆ. ಕಚೇರಿ ಕಾರ್ಯ ಎಂದಿನಂತಿತ್ತು.

    ಇದೆಲ್ಲ ಮುಗಿದ ಬಳಿಕ, ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ನೆಗೆಟಿವ್ ಎಂದು ಖಾತ್ರಿಯಾಗಿದೆ.ವರದಿ ಬಂದ ಮೇಲೆ ಶವ ಹಸ್ತಾಂತರಿಸಬೇಕೊ ಬೇಡವೊ ಎಂದು ನಿರ್ಧರಿಸಬೇಕಿತ್ತು. ಸ್ವಲ್ಪ ಕಾದಿದ್ದರೆ, ಕುಟುಂಬದವರಿಗೇ ಶವ ಹಸ್ತಾಂತರಿಸಲು ಅವಕಾಶವಿತ್ತು, ಕಿಮ್ಸ್​ನವರು ಅನಗತ್ಯ ಗೊಂದಲ ಮಾಡಿಕೊಂಡಿದ್ದರಿಂದ ಅನ್ಯಾಯವಾಗಿದೆ ಎಂದು ಅಮನ್ ಫೌಂಡೇಷನ್ ಮತ್ತು ವೃದ್ಧನ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts