More

    ಇಂದಿನಿಂದ ಅಮ್ಮಾಜೇಶ್ವರಿ ದೇವಿ ಜಾತ್ರೆ

    ಸುರೇಶ ದಾಶ್ಯಾಳ ಕಕಮರಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿ ಗ್ರಾಮದ ಶ್ರೀ ಅಮ್ಮಾಜೇಶ್ವರಿ ಸ್ಥಳೀಯರ ಆರಾಧ್ಯ ದೇವತೆ. ವಿಜಯಪೂರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಪ್ರಿಯವಾದ ಗ್ರಾಮವಿದು.

    ದೇವಿಯ ಇತಿಹಾಸ: ಊರಿನಾಚೆಗಿರುವ ಗುಡ್ಡದಲ್ಲಿ ವೇದ ಪಾರಂಗತನಾದ ಧರ್ಮನಿಷ್ಠ ಶ್ವೇತನೆಂಬ ಬ್ರಾಹ್ಮಣನು ಸ್ನಾನಕ್ಕೆ ಬಂದಾಗ ಶಾಪದಿಂದ ಹುಲಿಯ ರೂಪದಲ್ಲಿದ್ದ ಕಾಕುಮಾರಿ ಬ್ರಾಹ್ಮಣನನ್ನು ತಿನ್ನಲು ಹೋದಳು. ಆಗ ಆ ಬ್ರಾಹ್ಮಣನು ವಿಶ್ವೇಶ್ವರನ ಸ್ತೋತ್ರ ಪಠಣ ಮಾಡಿದಾಗ ಹೆಣ್ಣು ಹುಲಿ ರೂಪದಲ್ಲಿದ್ದ ಕಾಕುಮಾರಿ ಶಾಪ ಮುಕ್ತಳಾಗಿ ಸುಂದರ ಸ್ತ್ರೀ ರೂಪ ಪಡೆದಳು. ಅವಳೇ ಶುಕ್ರ ಋಷಿಗಳ ಮಗಳು ಕಾಕುಮಾರಿ. ಅಂದಿನಿಂದ ಗ್ರಾಮ ಕಾಕುಮಾರಿ ಎಂದು ಕರೆಯಲ್ಪಡುತ್ತಿತ್ತು. ಜನರೂಢಿಯಲ್ಲಿ ಕಕಮರಿ ಎಂದು ಕರೆಯಲಾಗುತ್ತಿದೆ. ಆ ಕಾಕುಮಾರಿಯನ್ನೇ ಇಲ್ಲಿಯ ಜನ ಅಮ್ಮಾಜೇಶ್ವರಿ ಎಂದು ಅಂದಿನಿಂದ ಇಂದಿನವರೆಗೂ ಪೂಜೆಗೈಯ್ಯುತ್ತಾರೆ.

    ಊರಿಗೆ ಊರೇ ಖಾಲಿ: ಪ್ರತಿ ಮೂರು ವರ್ಷಕ್ಕೊಮ್ಮೆ ದೇವಿಯ ಪಲ್ಲಕ್ಕಿ ಹೊಳೆ ಸ್ನಾನಕ್ಕೆ ಕೊಂಡೊಯ್ಯುವುದು ವಾಡಿಕೆ. ಗ್ರಾಮದಿಂದ ಪಾದಯಾತ್ರೆ ಮೂಲಕ ಮಕ್ಕಳು ಮರಿಕಟ್ಟಿಕೊಂಡು ವೃದ್ಧರನ್ನೊಳಗೊಂಡು ಎಲ್ಲರೂ ದೇವಿ ಜತೆಗೆ ಹೊರಡುತ್ತಾರೆ. ಈ ವೇಳೆ ವಿಶೇಷವೆಂದರೆ ಗ್ರಾಮದಲ್ಲಿ ಹುಡಿಕಿದರೆ ಯಾರೊಬ್ಬರೂ ಸಿಗುವುದಿಲ್ಲ. ಇಂತಹ ನಿಷ್ಠುರ ಭಕ್ತಿ ಇವತ್ತಿಗೂ ಮುಂದುವರಿದಿದೆ.

    ಜಾತ್ರಾ ಕಾರ್ಯಕ್ರಮ: ಡಿ.8ರಿಂದ 10ರ ವರೆಗೆ ಅಮ್ಮಾಜೆಶ್ವರಿ ಜಾತ್ರೆ ನೆರವೇರುತ್ತಿದೆ. 8 ರಂದು ಬೆಳಗ್ಗೆ 6 ಗಂಟೆಗೆ ರುದ್ರಾಭಿಷೇಕ, 11 ಗಂಟೆಗೆ ಪಲ್ಲಕ್ಕಿ ಉತ್ಸವ ಮರವಣಿಗೆ ಮೂಲಕ ಹಿರೇಹಳ್ಳಕ್ಕೆ ತೆರಳಿ ಸ್ನಾನ ಮಾಡಿ ಅಲ್ಲಿಂದ ಮಟ್ಟಿಖೋಡಿ ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ಸೇವೆ ನಡೆಯಲಿದೆ. ಅಲ್ಲಿಂದ ರಾತ್ರಿ 10ಕ್ಕೆ ಅಮ್ಮಾಜೇಶ್ವರಿ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ಮರಳಲಿದೆ.
    8ರಂದು ಮಧ್ಯಾಹ್ನ 3 ಗಂಟೆಗೆ ಗಾಯನ ಸ್ಪರ್ಧೆ, ರಾತ್ರಿ 10 ಗಂಟೆಗೆ ಡೊಳ್ಳಿನ ಹಾಡು, ರಾತ್ರಿ 10 ಗಂಟೆಗೆ ಸಾಮಾಜಿಕ ನಾಟಕ, 9ರಂದು ಬೆಳಗ್ಗೆ 9ಗಂಟೆಗೆ ಭಜನೆ, ಮಧ್ಯಾಹ್ನ 3 ಕ್ಕೆ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, ರಾತ್ರಿ 9ಗಂಟೆಗೆ ಡೊಳ್ಳಿನ ಪದಗಾಯನ, ರಾತ್ರಿ 10ಗಂಟೆಗೆ ಸಾಮಾಜಿಕ ನಾಟಕ ಪ್ರದರ್ಶನವಿದೆ. ಡಿ.10ರಂದು ಬೆಳಗ್ಗೆ ಡೊಳ್ಳಿನ ಸ್ಪರ್ಧೆ, ಮಧ್ಯಾಹ್ನ 2 ಗಂಟೆಗೆ ಕುಸ್ತಿ ಸ್ಪರ್ಧೆ, ರಾತ್ರಿ 10ಕ್ಕೆ ಸಾಮಾಜಿಕ ನಾಟಕ ಪ್ರದರ್ಶನವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts