More

    ಇಂದಿನಿಂದ ಅಬಕಾರಿ ಕ್ರೀಡಾಕೂಟ

    ಬೆಳಗಾವಿ: ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅಬಕಾರಿ ಇಲಾಖೆ ವತಿಯಿಂದ ನ.11ರಿಂದ ಮೂರು ದಿನಗಳ ಕಾಲ ಅಬಕಾರಿ ಇಲಾಖೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಪರ ಅಬಕಾರಿ ಆಯುಕ್ತ ಡಾ.ವೈ.ಮಂಜುನಾಥ ತಿಳಿಸಿದರು.

    ಇಲ್ಲಿನ ಅಬಕಾರಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟದ ಅಂಗವಾಗಿ ಇಲಾಖೆಯಿಂದ ತಯಾರಿಸಿರುವ ಅಬಕಾರಿ ಕ್ರೀಡಾಕೂಟದ ಲಾಂಛನ ಹಾಗೂ ಟಿ-ಶರ್ಟ್‌ಗಳನ್ನು ಬಿಡುಗಡೆಗೊಳಿಸಿದರು.

    ಕ್ರೀಡಾಕೂಟವನ್ನು ನ.11ರಂದು ಶುಕ್ರವಾರ ಬೆಳಗ್ಗೆ ಅಬಕಾರಿ ಆಯುಕ್ತ ಡಾ.ಜೆ.ರವಿಶಂಕರ ಧ್ವಜಾರೋಹಣ ಮಾಡಿ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಪಟು ಮುಕುಂದ ಕಿಲ್ಲೆದಾರ್ ಕ್ರೀಡಾ ಜ್ಯೋತಿ ಬೆಳಗಲಿದ್ದು, ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

    ಕ್ರೀಡಾಕೂಟದಲ್ಲಿ ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಕಬ್ಬಡ್ಡಿ, ಕ್ರಿಕೆಟ್, ಹಗ್ಗಜಗ್ಗಾಟ ಹಾಗೂ ಅಥ್ಲೆಟಿಕ್ಸ್ ಸೇರಿದಂತೆ ಗುಂಡು ಎಸೆತ, ಉದ್ದ ಜಿಗಿತ ಸ್ಪರ್ಧೆಗಳು ಜರುಗಲಿವೆ. ಅಲ್ಲದೇ, 5 ಕಿ.ಮೀ ಮ್ಯಾರಥಾನ್ ನಡೆಯಲಿದ್ದು, ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡು ಚನ್ನಮ್ಮವೃತ್ತ ಮಾರ್ಗವಾಗಿ ಮತ್ತೆ ಜಿಲ್ಲಾಕ್ರೀಡಾಂಗಣಕ್ಕೆ ಆಗಮಿಸಿ ಮುಕ್ತಾಯಗೊಳ್ಳಲಿದೆ ಎಂದರು.

    ಬೆಳಗಾವಿಯ ಶಘುನ ಗಾರ್ಡನ್‌ನಲ್ಲಿ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಗಾಯಕರಾದ ದಿವ್ಯಾ ರಾಮಚಂದ್ರ, ಮನು ಯಾಧವ ಹಾಗೂ ಡಿ.ಜೆ.ಶೈನ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಉತ್ತರ ವಲಯದ ಐಜಿಪಿ ಎನ್.ಸತೀಶಕುಮಾರ ಪಾಲ್ಗೊಳ್ಳಲಿದ್ದಾರೆ. ಇನ್ನು ನ.13ರಂದು ಮಧ್ಯಾಹ್ನ 3ರಿಂದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಅಬಕಾರಿ ಸಚಿವ ಕೆ.ಗೋಪಾಲಕೃಷ್ಣಯ್ಯ ಬಹುಮಾನ ವಿತರಿಸಲಿದ್ದು, ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಅಪರ ಆಯುಕ್ತ ಡಾ.ಎಚ್.ಎಸ್.ಸತೀಶಬಾಬು, ಜಂಟಿ ಆಯುಕ್ತ ಡಾ.ಬಿ.ಸಿ.ವಿಜಯಕುಮಾರ, ನಿರ್ಮಲಾ ಎನ್., ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಜಿನೇಶ್ವರ ಪಡನಾಡ ಪಾಲ್ಗೊಳ್ಳಲಿದ್ದಾರೆ. 2011ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪವರ್ ಲಿಪ್ಟಿಂಗ್ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದ ವಿನ್ಸೆಂಟ್ ಪ್ರಕಾಶ ಕಾರ್ಲೋ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ, ಫಿರೋಜ್‌ಖಾನ ಕಿಲ್ಲೇದಾರ್, ಡಾ.ಬಾಲಕೃಷ್ಣ ಸಿ.ಎಚ್., ಉಪ ಆಯುಕ್ತರಾದ ಟಿ.ವಿ.ಶೈಲಜಾ, ಎಂ.ಡಿ.ಜಯರಾಮೇಗೌಡ ಹಾಗೂ ಅಬಕಾರಿ ಅಧೀಕ್ಷಕ ವಿಜಯ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts