More

    ಇಂಡೋನೇಷ್ಯಾದಿಂದ ಬಂದ ಹಡಗಿನ ಸಿಬ್ಬಂದಿಯ ತಪಾಸಣೆ

    ಕಾರವಾರ: ಇಂಡೋನೇಷ್ಯಾದಿಂದ ಕಾರವಾರ ಬೈತಖೋಲ್ ವಾಣಿಜ್ಯ ಬಂದರಿಗೆ ಆಗಮಿಸಿದ ಹಡಗಿನ ಸಿಬ್ಬಂದಿಯನ್ನು ವೈದ್ಯಾಧಿಕಾರಿಗಳು ಗುರುವಾರ ತಪಾಸಣೆಗೆ ಒಳಪಡಿಸಿದರು.

    ಇಂಡೋನೇಷ್ಯಾದ ಬಿಲ್ವಾನ್ ಬಂದರಿನಿಂದ ಮುಂಬೈಗೆ ಆಗಮಿಸಿದ ಹಡಗು ಅಲ್ಲಿಂದ ತಾಳೆ ಎಣ್ಣೆ (ಪಾಮ್ ಆಯ್್ಲತುಂಬಿಕೊಂಡು ಕಾರವಾರಕ್ಕೆ ಬಂದಿದೆ.

    ಹಡಗಿನಲ್ಲಿ ಚೀನಾ, ಕೋರಿಯಾ ಸೇರಿ ವಿವಿಧ ದೇಶಗಳ 24 ಸಿಬ್ಬಂದಿ ಇದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯ ಇಬ್ಬರು ವೈದ್ಯಾಧಿಕಾರಿಗಳು ಮಾಸ್ಕ್ ಧರಿಸಿ ಹಡಗಿನೊಳಗೇ ತೆರಳಿ ಅವರ ತಪಾಸಣೆ ನಡೆಸಿದರು. ನಂತರ ಹಡಗಿನಲ್ಲಿದ್ದ ಆಯಿಲ್ ಖಾಲಿ ಮಾಡಲು ಅವಕಾಶ ಮಾಡಿಕೊಡಲಾಯಿತು. ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ ಎಂದು ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಸುದಿತಾ ಪೆಡ್ನೇಕರ್ ತಿಳಿಸಿದ್ದಾರೆ.

    ಪ್ರವಾಸಿಗರ ಸಂಖ್ಯೆ ಇಳಿಮುಖ: ಕರೊನಾ ಭೀತಿಯಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಮುರ್ಡೆಶ್ವರದಲ್ಲಿ ಸ್ಕೂಬಾ ಡೈವಿಂಗ್​ಗೆ ಹೊರ ಊರುಗಳಿಂದ ಸಾಕಷ್ಟು ಜನ ಆಗಮಿಸುತ್ತಿದ್ದರು. ಅವರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ. ದಾಂಡೇಲಿ, ಗೋಕರ್ಣಕ್ಕೂ ದೂರದೂರುಗಳ ಪ್ರವಾಸಿಗರು ಬರುತ್ತಿಲ್ಲ.

    ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಿ: ಗೋಕರ್ಣ: ಕರೊನಾ ಜಾಗೃತಿ ಸಂಬಂಧ ಕುಮಟಾ ವಿಭಾಗೀಯ ಅಧಿಕಾರಿ ಅಜಿತ್ ಎಂ. ನೇತೃತ್ವದಲ್ಲಿ ಗುರುವಾರ ಎಲ್ಲ ವಸತಿಗೃಹ ಮತ್ತು ಹೊಟೆಲ್​ನವರ ಸಭೆ ಜರುಗಿತು. ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ಅಜಿತ್ ಎಂ. ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಕೊಡುವಂತಾಗಬೇಕು. ಇದರಿಂದ ರೋಗ ಪಸರಿಸದಂತೆ ತಡೆಯಬಹುದಾಗಿದೆ. ಪ್ರತಿ ವಸತಿಗೃಹ ಮತ್ತು ರೆಸಾರ್ಟ್​ನವರು ತಮ್ಮಲ್ಲಿಗೆ ಬರುವ ಪ್ರವಾಸಿಗರ ಕುರಿತು ಸಂಪೂರ್ಣ ಮಾಹಿತಿ ಪಡೆದು ಅವುಗಳನ್ನು ದಾಖಲಿಸಿಡಬೇಕು. ಪ್ರವಾಸಿ ಕೇಂದ್ರವಾದ ಗೋಕರ್ಣ ಪ್ರಸಿದ್ಧ ಯಾತ್ರಾ ಸ್ಥಳವೂ ಆಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲರೂ ಎಚ್ಚರಿಕೆ ಕ್ರಮ ತೆಗೆದುಕೊಂಡು ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು. ಜಿಪಂ ಸದಸ್ಯೆ ಗಾಯತ್ರಿ ಗೌಡ, ತಾಪಂ ಸದಸ್ಯ ಮಹೇಶ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ಶೇಖರ ನಾಯ್ಕ ಇದ್ದರು. ಇಒ ಸಿ.ಟಿ.ನಾಯ್ಕ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts