More

    ಆಶ್ರಯ ನಿವೇಶನ ಹಕ್ಕುಪತ್ರ ವಿತರಿಸಿ

    ಹಾವೇರಿ: ಜಿಲ್ಲೆಯ ಹಿರೇಕೆರೂರ ತಾಲೂಕು ಹೊಲಬಿಕೊಂಡ ಗ್ರಾಮದಲ್ಲಿನ 157 ನಿರಾಶ್ರಿತರಿಗೆ ಆಶ್ರಯ ಯೋಜನೆಯಲ್ಲಿ ಹಂಚಿಕೆ ಮಾಡಿರುವ ನಿವೇಶನಗಳನ್ನು ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿ ಕೊಡುವಂತೆ ಆಗ್ರಹಿಸಿ ಹೊಲಬಿಕೊಂಡ ಗ್ರಾಮದ ಆಶ್ರಯ ಯೋಜನೆ ಫಲಾನುಭವಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

    1991,92ರಲ್ಲಿ ಸರ್ಕಾರದಿಂದ ಒಟ್ಟು 157 ಫಲಾನುಭವಿಗಳಿಗೆ ಹೊಲಬಿಕೊಂಡ ಗ್ರಾಮದ 10.35 ಎಕರೆ ಹುಲ್ಲುಗಾವಲು ಪ್ರದೇಶದಲ್ಲಿ 30*40 ಅಳತೆಯ ನಿವೇಶನಗಳ ಹಕ್ಕುಪತ್ರಗಳನ್ನು ತಹಸೀಲ್ದಾರರಿಂದ ಕೊಡಿಸಲಾಗಿತ್ತು. ಅದರಂತೆ ಆ ನಿವೇಶನದಲ್ಲಿ ಫಲಾನುಭವಿಗಳು ಗುಡಿಸಲು ಹಾಕಿಕೊಂಡು ತಾತ್ಕಾಲಿಕವಾಗಿ ವಾಸವಾಗಿದ್ದೇವು. ಆದರೆ, ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕವಿಲ್ಲದೇ ಇದ್ದರಿಂದ ಅನೇಕರು ಅಲ್ಲಿ ವಾಸವಿರಲು ಸಾಧ್ಯವಾಗಲಿಲ್ಲ. ಈಗ ಅಲ್ಲಿ ಗಿಡಗಂಟಿಗಳು ಬೆಳೆದು ಜಾಗವೆಲ್ಲ ಅರಣ್ಯ ಪ್ರದೇಶದಂತಾಗಿದೆ. ಕೂಡಲೆ ಸರ್ಕಾರದ ಯೋಜನೆಯಲ್ಲಿ ಮನೆ ನಿರ್ವಣಕ್ಕೆ ಅನುದಾನ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ ಅಲ್ಲಿಯೇ ವಾಸವಾಗುತ್ತೇವೆ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

    ರುದ್ರಪ್ಪ ಜಾಡರ, ಶಿವಾನಂದಪ್ಪ ಜಾಡರ, ಕಾಂತಪ್ಪ ಹುಲ್ಲತ್ತಿ, ಜಯಪ್ಪ ಕೋರಿಗೌಡ್ರ, ಈರಪ್ಪ ಗಿರಿಮಳ್ಳಿ, ನಾಗಪ್ಪ ಗವಿಯಪ್ಪನವರ, ದೇವೀಂದ್ರಪ್ಪ ದೊಡ್ಡಮನಿ, ಚಂದ್ರಪ್ಪ ಬನ್ನಿಹಟ್ಟಿ, ಜಯಪ್ಪ ನರೇಗೌಡ್ರ, ಶಂಕ್ರಪ್ಪ ತಳವಾಳ, ಶಿವಪ್ಪ ಕೊರಗರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts