More

    ಆಶ್ರಯ ನಿವೇಶನ ಮರು ಹಂಚಿಕೆಗೆ ಆಗ್ರಹ

    ಶಿರಹಟ್ಟಿ: ಇಂದಿರಾ ಗ್ರಾಮೀಣ ವಸತಿ ಯೋಜನೆಯಡಿ ನೀಡಲಾದ ನಿವೇಶನಗಳು ಅನರ್ಹರ ಪಾಲಾಗಿವೆ. ಅವುಗಳನ್ನು ಮರು ಹಂಚಿಕೆ ಮಾಡಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಮಜ್ಜೂರ ಗ್ರಾಮಸ್ಥರು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ಇಂದಿರಾ ಗ್ರಾಮೀಣ ವಸತಿ ಯೋಜನೆಯಡಿ ನಿವೇಶನ ರಹಿತರಿಗೆ ಆಶ್ರಯ ಮನೆಗಳನ್ನು ನಿರ್ವಿುಸಲು ಸರ್ಕಾರದಿಂದ 12 ಎಕರೆ ಜಮೀನು ಖರೀದಿಸಿ ನಿವೇಶನ ಸಿದ್ಧಪಡಿಸಲಾಗಿತ್ತು. ಆದರೆ, ಈ ಹಿಂದಿನ ಗ್ರಾಪಂ ಆಡಳಿತದ ಅವಧಿಯಲ್ಲಿ ಕೆಲವರಿಂದ ಹಣ ಪಡೆದು ನಿವೇಶನ ಹಂಚಿಕೆಯ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ಮಾತು ಕೇಳಿ ಬಂದಿವೆ. ಪಟ್ಟಿಯಲ್ಲಿ ಹೆಸರು ಇಲ್ಲದ್ದರಿಂದ ಕೆಲ ಫಲಾನುಭವಿಗಳಿಗೆ ಅನ್ಯಾಯವಾಗಿದ್ದು, ನ್ಯಾಯ ದೊರಕಿಸಿಕೊಡಬೇಕು ಎಂದು ನನಗೆ ಮನವಿ ಮಾಡಿದರು. ಅರ್ಹರಿಗೆ ನಿವೇಶನ ದೊರಕಿಸಿ ಕೊಡಲು ಉದ್ದೇಶದಿಂದ ನಿವೇಶನರಹಿತರೊಂದಿಗೆ ಪ್ರತಿಭಟನೆ ನಡೆಸಬೇಕಾಗಿದೆ’ ಎಂದರು.

    ಗ್ರಾಪಂ ಸದಸ್ಯ ಗನಿಸಾಬ್ ಬರದೂರ ಮಾತನಾಡಿ, ಸದ್ಯ ಸಿದ್ಧಪಡಿಸಿದ ನಿವೇಶನ ಹಂಚಿಕೆ ಪಟ್ಟಿಯನ್ನು ರದ್ದುಪಡಿಸಿ, ಗ್ರಾಮ ಸಭೆ ನಡೆಸಿ ಅಲ್ಲಿ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ ಮಾಡಬೇಕು ಎಂದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ಆಶ್ರಯ ನಿವೇಶನಗಳ ಹಂಚಿಕೆಯಲ್ಲಿ ಸರ್ಕಾರದ ನಿಯಮ ಪಾಲಿಸುವುದು ಪಿಡಿಒ ಕರ್ತವ್ಯವಾಗಿದೆ. ಕೆಲವರು ನಮಗೆ ಅನ್ಯಾಯವಾಗಿದೆ ಎಂದು ಮನವಿ ನೀಡಿದ್ದು, ಈ ಬಗ್ಗೆ ಜಿಪಂ ಸಿಇಒ ಅವರ ಗಮನಕ್ಕೆ ತರುತ್ತೇನೆ. ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ತಹಸೀಲ್ದಾರರ ಭರವಸೆ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

    ಮಹಾಂತೇಶ ದಶಮನಿ, ಬುಡನ್​ಶಾ ಮಕಾನದಾರ, ಗ್ರಾಪಂ ಸದಸ್ಯ ಶಂಕರ ವೆಂಕಟಾಪೂರ, ಬೀರಪ್ಪ ಭಜಂತ್ರಿ, ಶಂಕರಗೌಡ ಪಾಟೀಲ, ಹನುಮಂತಪ್ಪ ವೆಂಕಟಾಪೂರ, ಬಾಶೇಸಾಬ್ ಜಂಗ್ಲಿ, ಅಬ್ದುಲ್​ಸಾಬ್ ಯಳವತ್ತಿ, ವೆಂಕಪ್ಪ ಲಮಾಣಿ, ಶಾಂತವ್ವ ತಳವಾರ, ಬೀಬಿಜಾನ ಕಮ್ಮಾರ, ಹೊನ್ನವ್ವ ಹರಿಜನ, ದೇವ್ಪಪ ಶಿರಹಟ್ಟಿ, ಹೊನ್ನವ್ವ ಶಿರಹಟ್ಟಿ, ನಾಗಪ್ಪ ಸ್ವಾಮಿ, ಶಮಶಾದಬಿ ಬರದೂರ, ಇಮಾಂಬಿ ಬರದೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts