More

    ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಸಲು ಆಗ್ರಹ

    ಕಲಬುರಗಿ: 12 ಸಾವಿರ ರೂ. ಮಾಸಿಕ ಗೌರವ ಧನವನ್ನು ನಿಗದಿಪಡಿಸಿ ಏಕಕಾಲಕ್ಕೆ ನೀಡುವಂತೆ ಆಗ್ರಹಿಸಿ ಕರೊನಾ ಸೇನಾನಿಗಳಾಗಿರುವ ಆಶಾ ಕಾರ್ಯಕರ್ತೆಯರು 10ರಿಂದ ನಡೆಸುತ್ತಿರುವ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಹಲವು ಸಂಘಟನೆಗಳ ಪ್ರಮುಖರು ಜಂಟಿಯಾಗಿ ನಗರದಲ್ಲಿ ಸೋಮವಾರ ಪ್ರದರ್ಶನ ನಡೆಸಿದರು.
    ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್), ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಅರ್ಗನೈಸೇಷನ್(ಎಐಡಿಎಸ್ಒ) ಮತ್ತು ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್ಕೆಎಸ್) ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರದರ್ಶನ ನಡೆಸುವ ಮೂಲಕ, ಸರ್ಕಾರ ಆಶಾಗಳ ಬೇಡಿಕೆ ನಿರ್ಲಕ್ಷೃ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
    ಕೋವಿಡ್-19 ವಿರುದ್ಧ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಆಶಾಗಳು, ತಮ್ಮ ಜೀವದ ಹಂಗು ತೊರೆದು ಆರೋಗ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಂತಹವರ ಜೀವನ ನಿರ್ವಹಣೆಗಾಗಿ 12,000 ರೂ. ಮಾಸಿಕ ಗೌರವಧನ ಮತ್ತು ಕರೊನಾ ಹಿನ್ನೆಲೆಯಲ್ಲಿ ಸಮರ್ಪಕ ಆರೋಗ್ಯ ರಕ್ಷಣೆ ಪರಿಕರಗಳನ್ನು ನೀಡಬೇಕೆಂಬ ಅವರ ಬೇಡಿಕೆ ಸರ್ಕಾರ ಕಡೆಗಣಿಸುತ್ತಿರುವುದು ಅನ್ಯಾಯದ ಪರಮಾವಧಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಸಂಘಟನೆಗಳ ಮುಖಂಡರು ಡಿಸಿಗೆ ಮನವಿ ಸಲ್ಲಿಸಿದರು. ವಿವಿಧ ಸಂಘಟನೆಗಳ ಹಣಮಂತ ಎಸ್.ಎಚ್., ಮಹೇಶ ಎಸ್.ಬಿ., ಗೌರಮ್ಮ .ಸಿ.ಕೆ., ರಾಧಾ.ಜಿ., ಈರಣ್ಣ ಈಸಬಾ, ಸ್ನೇಹಾ ಕಟ್ಟಿಮನಿ, ಸಾಬಮ್ಮ, ಜಯಶ್ರೀ,, ಸಿದ್ದಮ್ಮ, ಮೊನಿಕಾ, ರೇಷ್ಮಾ, ಶರಣಮ್ಮ, ನಾಗರಾಜ, ರೇವಣಸಿದ್ದ, ಇತರರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts