More

    ಆಳಂದನಲ್ಲಿ ಎಂಟು ಒಂಟಿಗಳು ವಶಕ್ಕೆ

    ಕಲಬುರಗಿ: ಕೆಲವರು ಕಾನೂನು ಬಾಹಿರವಾಗಿ ಆಳಂದ ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿಕೊಂಡಿದ್ದ ಎಂಟು ಒಂಟೆಗಳನ್ನು ಸೋಮವಾರ ಸಂಜೆ ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿ ವಶಕ್ಕೆ ತೆಗೆದುಕೊಳ್ಳುವ ಮೂಲಕ ಅವುಗಳನ್ನು ರಕ್ಷಣೆ ಮಾಡಿದ್ದಾರೆ.
    ಒಂಟೆಗಳನ್ನು ಸಾಕಿಕೊಂಡಿದ್ದವರು ಮಧ್ಯಪ್ರದೇಶ ಮೂಲದವರಾಗಿದ್ದು, ರಾಜಸ್ಥಾನದಲ್ಲಿ ಒಂಟೆಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಅವನ್ನು ಹಿಂಸಿಸಲು ಇಲ್ಲವೇ ಮಾಂಸಕ್ಕಾಗಿ ತೆಗೆದುಕೊಂಡಿಲ್ಲ. ಬದಲಿಗೆ ಮಕ್ಕಳ ಆಟಕ್ಕೆ ಮತ್ತು ಮುಂಬಯಿ ಇನ್ನಿತರ ಕಡೆಗಳಲ್ಲಿ ಸರ್ಕಸ್ನಲ್ಲಿ ಬಳಕೆ ಮಾಡುತ್ತಿದ್ದಾರೆ. ಅವುಗಳಿಗೆ ಸರಿಯಾಗಿ ಆಹಾರ ನೀಡುತ್ತಿದ್ದೇವೆ. ಹೊರತು ಹಿಂಸಿಸಿಲ್ಲ ಎಂದು ಪೊಲೀಸರ ವಶದಲ್ಲಿರುವವರು ಹೇಳಿಕೊಂಡಿದ್ದಾರೆ.
    ಚೌಕಿದಾರ ಎಸ್.ಡಿ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಡಿಜಿಪಿ, ಸಿಎಂ ಮತ್ತು ಗೃಹ ಸಚಿವರಿಗೆ ಟ್ಯಾಗ್ ಮಾಡಿದ್ದರು. ಅದರಲ್ಲಿ 25 ಒಂಟೆಗಳು ಆಳಂದ ದರ್ಗಾ ಹತ್ತಿರದಲ್ಲಿವೆ. ಇನ್ನೂ ಯಾಕೆ ಮೌನ ಎಂದು ಪ್ರಶ್ನಿಸಿದ್ದರು. ಅಲ್ಲದೆ ಪ್ರಾಣಿ ದಯಾ ಸಂಘ ಸದಸ್ಯ ಹುಣಚಿರಾಯ ಮೋಟಗಿ ಪೊಲೀಸರಿಗೆ ಮಾಹಿತಿ ನೀಡಿದರು.
    ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಹಾಯಕ ಆಯುಕ್ತ ರಮೇಶ, ತಹಸೀಲ್ದಾರ ದಯಾನಂದ ಪಾಟೀಲ್, ಡಿವೈಎಸ್ಪಿ ಮಲ್ಲಿಕಾರ್ಜುನ, ಸಿಪಿಐ ಶಿವಾನಂದ ಇತರರು ಕೂಡಿಕೊಂಡು ಸ್ಥಳಕ್ಕೆ ತೆರಳಿದಾಗ ಅಲ್ಲಿದ್ದ 8 ಒಂಟೆಗಳನ್ನು ವಶಪಡಿಸಿಕೊಂಡು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts