More

    ಆರ್ಥಿಕ ಪರಿಹಾರ ಒದಗಿಸಿ ನೆರವಾಗಲು ಒತ್ತಾಯ

    ರಾಮದುರ್ಗ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಪಿಗ್ಮಿ ಸಂಗ್ರಹಗಾರರಿಗೆ ಸರ್ಕಾರ ಆರ್ಥಿಕ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸುರೇಬಾನ-ಮನಿಹಾಳ ಹಾಗೂ ತಾಲೂಕಿನ ಪಿಗ್ಮಿ ಸಂಗ್ರಹಕಾರರು ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

    ಕರೊನಾ ಎರಡನೇ ಅಲೆ ಪ್ರಾರಂಭವಾಗಿ ಸರ್ಕಾರ ಜನತಾ ಕರ್ಪ್ಯೂ, ಲಾಕ್‌ಡೌನ್ ಜಾರಿ ಮಾಡಿದ್ದು, ಎರಡು ತಿಂಗಳಿಂದ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಸೇರಿ ವಿವಿಧ ಹಣಕಾಸು ಸಂಸ್ಥೆಗ ಪಿಗ್ಮಿ ಸಂಗ್ರಹಗಾರರು ಕೆಲಸವಿಲ್ಲದೆ ಜೀವನ ನಡೆಸುವುದು ದುಸ್ತರವಾಗಿದೆ. ಹಾಗಾಗಿ, ಸರ್ಕಾರ ಪಿಗ್ಮಿ ಸಂಗ್ರಹಗಾರರ ನೆರವಿಗೆ ಧಾವಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

    ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಮಹಾದೇವಪ್ಪ ಯಾದವಾಡ, ಪಿಗ್ಮಿ ಸಂಗ್ರಹಗಾರರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡುವಂತೆ ಆಗ್ರಹಿಸುತ್ತೇನೆ ಎಂದು ಭರವಸೆ ನೀಡಿದರು. ಎಸ್.ಪಿ. ವನಕುದರಿ, ಡಿ.ಬಿ.ಹಂದ್ರಾಳ, ಬಿ.ಪಿ.ಪಾಟೀಲ, ಆರ್.ಎಂ.ಪಾಟೀಲ,
    ಎಸ್.ಎಂ.ಮೊರಬದ, ಎಸ್.ಆರ್.ಮುರುಡಿ, ಎಸ್.ಎಂ.ಪಾಟೀಲ, ಪಿ.ಎಂ.ಶಾಂತಗೀರಿ, ಎಂ.ಜಿ. ಬೂದಿಹಾಳಮಠ, ಎಸ್.ಎಸ್. ಬ್ಯಾಹಟ್ಟಿ, ಬಸವರಾಜ ಜಾಲೋಜಿ, ಎಸ್.ಎಸ್.ಬೇವಿನಕಟ್ಟಿ, ಚೇತನ ಹುಗ್ಗಿ ಇದ್ದರು.

    ಬೈಲಹೊಂಗಲ ವರದಿ: ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯಕ್ಕೆ ಹೋಗಿ ಹಲವು ಶಿಕ್ಷಕರು ಕರೊನಾ ಸೋಂಕಿಗೆ ತುತ್ತಾಗಿದ್ದಕ್ಕೆ ಲೋಕಸಭೆ ಉಪಚುನಾವಣೆಯೇ ಕಾರಣ ಎಂದು ಜಿಲ್ಲಾ ಸರ್ಕಾರಿ ಅಹಿಂದ ನೌಕರರ ಸಂಘದ ಜಿಲ್ಲಾದ್ಯಕ್ಷ ಬಿ.ಡಿ.ತಮ್ಮಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಧನರಾದ ಶಿಕ್ಷಕ, ಶಿಕ್ಷಕಿಯರ ಹಾಗೂ ಸರ್ಕಾರಿ ನೌಕರರ ಮನೆಗಳಿಗೆ ಆಯಾ ಪ್ರದೇಶದ ಸಂಬಂಧಿಸಿದ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲ ಹಂತದ ಜನಪ್ರತಿನಿಧಿಗಳು ಭೇಟಿ ಮಾಡಿ ಸಾಂತ್ವನ ಹೇಳದಿರುವುದು ವಿಷಾದನೀಯ ಸಂಗತಿ. ಕೂಡಲೇ ಕುಟುಂಬದ ನೈಜ ಸ್ಥಿತಿಯನ್ನು ತಿಳಿದುಕೊಂಡು ಅವರಿಗೆ ಸರ್ಕಾರದಿಂದ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ನೌಕರರನ್ನು ಕರ್ತವ್ಯಕ್ಕೆ ನಿಯೋಜಿಸುವಾಗ ಮೇಲಧಿಕಾರಿಗಳು ಆರೋಗ್ಯ ಪರಿಶೀಲಿಸಬೇಕು. ನಿರ್ಲಕ್ಷಿಸಿದರೆ ಆಸ್ಪತ್ರೆಯ ಖರ್ಚಿನ ಜತೆಗೆ 10 ಲಕ್ಷ ರೂ. ಪರಿಹಾರವನ್ನು ನಿಯೋಜಿಸಿದ ಅಧಿಕಾರಿಗಳಿಂದಲೇ ಕೊಡುವಂತಾಗಬೇಕು. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts