More

    ಆರ್ಥಿಕ ಇಲಾಖೆ ಮಾನದಂಡದನ್ವಯ ಹಣ ಬಿಡುಗಡೆ

    ಚಿತ್ರದುರ್ಗ: ದೇಶದ ಎಲ್ಲ ರಾಜ್ಯಗಳಿಗೂ ಆರ್ಥಿಕ ಇಲಾಖೆ ತನ್ನ ಮಾನದಂಡದ ಅನ್ವಯ ಆಯಾ ರಾಜ್ಯದ ಪಾಲು ನೀಡುತ್ತಿದೆ. ಎಲ್ಲಿಯೂ ತಾರತಮ್ಯ ಮಾಡಿಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

    ಬಿಜೆಪಿ ಜಿಲ್ಲಾ ಘಟಕದಿಂದ ಭಾನುವಾರ ನಡೆದ ‘ಮತ್ತೊಮ್ಮೆ ಮೋದಿ’ ಗೋಡೆ ಬರಹದ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ಜಿಎಸ್‌ಟಿ ಹಣ ಬಿಡುಗಡೆ ಸಂಬಂಧ ಸುಮ್ಮನೆ ದೂರುವುದರಲ್ಲಿ ಪ್ರಯೋಜನವಿಲ್ಲ. ಆರ್ಥಿಕ ಇಲಾಖೆಯ ಕೆಲ ವಿಚಾರಗಳಲ್ಲಿ ಕೇಂದ್ರ ಸಚಿವರೂ ಮಧ್ಯ ಪ್ರವೇಶಿಸುವುದಿಲ್ಲ. ಪ್ರತ್ಯೇಕ ಬ್ಯಾಂಕ್ ಖಾತೆ ಸೇರಿ ಕೇಳಿದ ದಾಖಲೆ ಒದಗಿಸಲಿ ಎಂದರು.

    ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಅನ್ಯ ಕಾರ್ಯಕ್ಕೆ ಕೆಲ ರಾಜ್ಯಗಳಲ್ಲಿ ಬಳಕೆಯಾಗಿದೆ. ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಬಾರದು ಎಂಬುದು ಕೇಂದ್ರದ ನಿರ್ಧಾರವಾಗಿದೆ. ಪ್ರಧಾನಿ ನರೇಂದ್ರಮೋದಿ ಅವರು ಯಾವ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ. ಅವರ ಕುರಿತು ಸಿಎಂ ಸಿದ್ದರಾಮಯ್ಯ ಹಗುರವಾಗಿ ಮಾತನಾಡುವುದನ್ನು ಇನ್ನಾದರೂ ಬಿಡಬೇಕು ಎಂದು ಒತ್ತಾಯಿಸಿದರು.

    ಬಿಜೆಪಿ ನಾಯಕರ ಹೇಳಿಕೆಗೂ ಮುನ್ನವೇ ಎನ್‌ಡಿಎ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ 400ಕ್ಕಿಂತ ಹೆಚ್ಚು ಸ್ಥಾನ
    ಗಳಿಸಲಿದೆ ಎಂಬ ವಿಶ್ವಾಸ ಕಾಂಗ್ರೆಸ್‌ನ ಕೆಲವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯುವಲ್ಲಿ ಸಫಲರಾಗಲಿದ್ದು, ನಮ್ಮ ಪಕ್ಷದವರಲ್ಲೂ ಯಾವ ಅನುಮಾನವಿಲ್ಲ ಎಂದರು.

    ಲೋಕಸಭಾ ಕ್ಷೇತ್ರಗಳಿಗೆ ಸ್ಥಳೀಯರಿಗೆ ಟಿಕೆಟ್ ನೀಡಬೇಡಿ ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ನಾನೂ ರಾಜಕಾರಣಿಯಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಅದರ ಬೆಳವಣಿಗೆಯಲ್ಲಿ ನನಗೆ ವಹಿಸುವ ಜವಾಬ್ದಾರಿ ನಿಭಾಯಿಸುತ್ತ ಬಂದಿದ್ದೇನೆ. ಭಾರತ ವಿಶ್ವಗುರುವಾಗಲು, ಅಭಿವೃದ್ಧಿ ದೃಷ್ಟಿಯಿಂದ ಮೋದಿ ನಾಯಕತ್ವ ಅಗತ್ಯವಾಗಿ ಬೇಕಿದೆ. ಆದ್ದರಿಂದ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.

    ಎಂಎಲ್ಸಿ ಕೆ.ಎಸ್.ನವೀನ್, ಮುಖಂಡ ಜಿ.ಎಸ್.ಅನಿತ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts