More

    ಆರೋಗ್ಯ ಉಪ ಕೇಂದ್ರದಲ್ಲಿ ಒಪಿಡಿ ಪ್ರಾರಂಭ

    ತೇರದಾಳ : ಸಮೀಪದ ಹಳಿಂಗಳಿ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಕಳೆದೆರಡು ದಿನಗಳಿಂದ ಹೊರ ರೋಗಿಗಳ ಚಿಕಿತ್ಸೆ (ಒಪಿಡಿ) ಪ್ರಾರಂಭಿಸಲಾಗಿದೆ.
    ಕೋವಿಡ್ ಹಾಗೂ ಪ್ರವಾಹದ ಸಂದರ್ಭದಲ್ಲಿ ಸೇವೆಗಳನ್ನು ಆರಂಭಿಸಿರುವುದರಿಂದ ರೋಗಿಗಳಿಗೆ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಖುಷಿ ವ್ಯಕ್ತಿಪಡಿಸಿದ್ದಾರೆ.
    ಗ್ರಾಮದ ಅಂಬೇಡ್ಕರ್ ಭವನದ ಸಮೀಪದಲ್ಲಿರುವ ಆಸ್ಪತ್ರೆ ಉಪಕೇಂದ್ರವು ಉತ್ತಮ ಕಟ್ಟಡವನ್ನು ಹೊಂದಿದ್ದು, ಹಳಿಂಗಳಿ-ತಮದಡ್ಡಿ ಅವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆಸಿದ ಹತ್ತು ಸಾವಿರಕ್ಕೂ ಅಧಿಕ ಜನರಿಗೆ ಚಿಕಿತ್ಸೆ ಲಭ್ಯವಾಗಲಿದೆ. ಆದರೆ, ಇಲ್ಲಿನ ಸಿಬ್ಬಂದಿಗೆ ಸರ್ವೇ ಕಾರ್ಯಗಳನ್ನು ನಿಯೋಜನೆ ಮಾಡಿರುವುದರಿಂದ ಸೇವೆಗಳು ಮರಿಚಿಕೆಯಾಗಿತ್ತು. ಅಲ್ಲದೇ ಆಸ್ಪತ್ರೆ ಆವರಣದಲ್ಲಿ ಮುಳ್ಳಿನ ಪೊದೆಗಳು ಬೆಳೆದುನಿಂತಿವೆ. ಇದೀಗ ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿ ಕೇದಾರಲಿಂಗ ಬೋರಗಾಂವಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಪ್ರಚಾರ ಪಡೆಯದೆ ಇದ್ದರೂ ಕೂಡ ದಿನಕ್ಕೆ ಎಂಟತ್ತು ರೋಗಿಗಳು ಬಂದು ಪ್ರಾಥಮಿಕ ಚಿಕಿತ್ಸೆ ಹಾಗೂ ಮಾತ್ರೆಗಳನ್ನು ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಎಲ್ಲ ರೀತಿ ಔಷಧೋಪಚಾರಗಳು ಕೂಡ ಬರಲಿವೆ ಎಂದು ಅಧಿಕಾರಿ ಸ್ಪಷ್ಟಪಡಿಸಿದರು.
    * ಪುನಶ್ಚೇತನದ ಅವಶ್ಯಕತೆ
    ಆಸ್ಪತ್ರೆ ಕಟ್ಟಡ ಹಳೆಯದಾಗಿದ್ದು, ಮಳೆ ಬಂದಾಗ ಸೋರುತ್ತಿದೆ. ಆಸ್ಪತ್ರೆ ನಾಮಫಲಕ ಕಳಚಿ ಹೋಗಿರುವುದರಿಂದ ಅದನ್ನು ಅಳವಡಿಸುವ ಕಾರ್ಯ ಆಗಬೇಕಿದೆ. ಇಲ್ಲಿನ ಪುನಶ್ಚೇತನ ಕಾರ್ಯಕ್ಕೆ ಸ್ಥಳೀಯ ಗ್ರಾಪಂಗೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಆಡಳಿತ ವರ್ಗದವರು ಆಸ್ಪತ್ರೆ ಸುಧಾರಣೆಗೆ ಶ್ರಮಿಸುವರೇ ಎಂದು ಕಾದು ನೊಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts