More

    ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

    ಯಾದಗಿರಿ: ಒತ್ತಡದ ಕೆಲಸದಿಂದ ಹಲವರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಶ ಜಯಂತ ಕುಮಾರ ಸಲಹೆ ನೀಡಿದರು.

    ಮಂಗಳವಾರ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಒತ್ತಡಗಳಿಂದ ನಮ್ಮ ಮನಸ್ಸು ವಿಚಲತಗೊಳ್ಳುತ್ತದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಬಳಲುವವರ ಸಂಖ್ಯೆ ಇಂದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದರು.

    ದೆಹಿಕ, ಮಾನಸಿಕ, ಸಾಮಾಜಿಕ, ಜೀವನ ಶೈಲಿಗಳು ಪರಿಪೂರ್ಣವಾಗಿದ್ದ ವ್ಯಕ್ತಿಯನ್ನು, ಆರೋಗ್ಯವಂತ ವ್ಯಕ್ತಿ ಎನ್ನಬಹುದು. ನಿತ್ಯ ಒಂದು ಗಂಟೆಯಾದರೂ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು.

    ಹಿರಿಯ ಸಿವಿಲ್ ನ್ಯಾಯಾಶ ರವೀಂದ್ರ ಎಲ್.ಹೊನೋಲೆ ಮಾತನಾಡಿ, ಸದಾ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮವಾದ ಪುಸ್ತಕಗಳನ್ನು ಓದಬೇಕು. ಇದರಿಂದ ಏಕಾಗೃತೆ ಮೂಡುತ್ತದೆ. ಅಲ್ಲದೆ, ಸದಾ ರಚನಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
    ಮನೋರೋಗ ತಜ್ಙರಾದ ಡಾ.ಶರಣಗೌಡ ಪಾಟೀಲ್, ಶಿವಕುಮಾರ ಪಾಟೀಲ್ ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲೀ ಪಾಟೀಲ್, ಜಿಲ್ಲಾ ಕಾರಾಗೃಹ ಅಕ್ಷಕ ಅಬ್ದುಲ್ ಶುಕುರ್, ಪ್ರಮುಖರಾದ ಎಸ್.ಆರ್, ರಾಠೋಡ್, ಬಸವರಾಜ ಸಜ್ಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts